Advertisment

ಮನೆ, ಸೈಟು, ಟೆಂಪೋ ಎಲ್ಲವೂ ಕಳ್ಕೊಂಡಿದ್ದ ದ್ವಾರಕೀಶ್.. ಬಾಡಿಗೆ ಮನೆಗೆ ಶಿಫ್ಟ್ ಆಗಿ ಮತ್ತೆ ಪುಟಿದೆದ್ದಿದ್ದ ರೋಚಕ ಕಥೆ

author-image
Ganesh
Updated On
ಆ ಸಿನಿಮಾಕ್ಕಾಗಿ ಮನೆ ಮಾರಿ ಸಾಲ ತೀರಿಸಿದ್ರು.. ದ್ವಾರಕೀಶ್ ಸೋಲಿನ ಕಾರಣ ಬಿಚ್ಚಿಟ್ಟ ಬಾಮೈದ; ಹೇಳಿದ್ದೇನು?
Advertisment
  • ಒಂದಲ್ಲ, ಎರಡಲ್ಲ ಸತತವಾಗಿ 19 ಸಿನಿಮಾಗಳ ಸೋಲು ಕೈಕೊಟ್ಟಿದ್ದವು
  • ದುಬಾರಿ ಕಾರುಗಳು ಹೋಗಿ ಬಾಡಿಗೆ ಅಂಬಾಸಿಡರ್ ಮನೆ ಮುಂದೆ ನಿಂತಿತ್ತು
  • ಸೋತರೂ ಬಿಡಲಿಲ್ಲ, ಮತ್ತೆ ಮತ್ತೆ ಸಿನಿಮಾ ಮಾಡ್ತಿದ್ದ ಹಾಸ್ಯ ನಟ ದ್ವಾರಕೀಶ್

ಕನ್ನಡ ಚಿತ್ರರಂಗ ತನ್ನ ಹಿರಿಯಕೊಂಡಿ ಒಂದನ್ನು ಕಳೆದುಕೊಂಡು ಇವತ್ತು ದುಃಖದಲ್ಲಿ ಮುಳುಗಿದೆ. ಹಿರಿಯ ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ದ್ವಾರಕೀಶ್​ ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

Advertisment

ನಿರ್ಮಾಪಕರಾಗಿ ಸುಮಾರು 50 ಸಿನಿಮಾಗಳ ನಿರ್ಮಾಣ ಮತ್ತು ನಟ, ನಿರ್ದೇಶಕರಾಗಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ದ್ವಾರಕೀಶ್​, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದರು. ಸಿನಿಮಾ ರಂಗಕ್ಕೆ ದೊಡ್ಡ ದೊಡ್ಡ ಕೊಡುಗೆಗಳನ್ನು ನೀಡಿದ್ದ ದ್ವಾರಕೀಶ್​ಗೆ ಒಂದು ಕಾಲದಲ್ಲಿ ಐಶ್ವರ್ಯ, ಅಂತಸ್ತು ಎಲ್ಲವೂ ಉತ್ತುಂಗದಲ್ಲಿತ್ತು. ಆದರೆ, ಸಿನಿಮಾ ಹುಚ್ಚಿಗೆ ಬಿದ್ದಿದ್ದ ದ್ವಾರಕೀಶ್ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ಬಂದಿತ್ತು.

ಇದನ್ನೂ ಓದಿ:ತನಗೆ ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ಓಡಿ ಬಂದ ಗಟ್ಟಿಗಿತ್ತಿ ಮಹಿಳೆ..! ಮುಂದೇನಾಯ್ತು..?

publive-image

ಸಂದರ್ಶನವೊಂದರಲ್ಲಿ ನಿರ್ದೇಶಕ, ದ್ವಾರಕೀಶ್​ ಅವರ ಸಂಬಂಧಿ ಭಾರ್ಗವ ಹೇಳುವಂತೆ ಒಂದಲ್ಲ, ಎರಡಲ್ಲ ಬರೋಬ್ಬರಿ 19 ಸಿನಿಮಾಗಳು ಸೋತಿದ್ದವು. ಒಂದು ಸಿನಿಮಾ ಸೋತಾಗ ಸುಮ್ಮನಾಗುತ್ತಿರಲಿಲ್ಲ. ಮತ್ತೆ ಮತ್ತೆ ಸಿನಿಮಾ ಮಾಡುತ್ತಿದ್ದರು. ಸತತವಾಗಿ 19 ಸಿನಿಮಾಗಳು ಸೋತಾಗ ಅವರು, ಬದುಕಿನಲ್ಲಿ ಸಿಕ್ಕಿದ್ದ ಎಲ್ಲಾ ಆಸ್ತಿಗಳನ್ನೂ ಕಳೆದುಕೊಂಡರಂತೆ.

Advertisment

ದ್ವಾರಕೀಶ್​ ಮಧ್ಯದಲ್ಲೇ ಸಿನಿಮಾ ಮಾಡೋದನ್ನು ನಿಲ್ಲಿಸಿಬಿಟ್ಟಿದ್ದರೆ, ಅವರು ರಜಿನಿಕಾಂತ್ ಜೊತೆ ಮಾಡಿರುವ ಮೂರೇ ಸಿನಿಮಾಗಳು ಸಾಕಾಗಿತ್ತು. ರಜನಿಕಾಂತ್, ಶ್ರೀದೇವಿ ಜೊತೆ ಎರಡು ಸಿನಿಮಾಗಳನ್ನು ಮಾಡಿದ್ದರು. ಅವರು ಹಿಟ್ ಆಗಿದೆ ಎಂದು ನಾನು ಹೇಳಲ್ಲ. ಆದರೆ ಯಶಸ್ಸು ತಂದುಕೊಟ್ಟಿದ್ದಂತೂ ನಿಜ ಎನ್ನುತ್ತಾರೆ ಭಾರ್ಗವ. ಆದರೆ ಅವರಿಗೆ ಸಿನಿಮಾ ಮೇಲಿದ್ದ ಪ್ರೀತಿ ಮತ್ತು ಹಠದಿಂದಾಗಿ ಮತ್ತೆ ಮತ್ತೆ ಸಿನಿಮಾ ಮಾಡಲು ಹೋದರು. ಪರಿಣಾಮ ದ್ವಾರಕೀಶ್​, ಎನ್​ಆರ್ ಕಾಲೋನಿಯಲ್ಲಿದ್ದ ಮನೆ ಹೊರಟು ಹೋಗುವ ಸ್ಥಿತಿ ಬಂತು. ರಾಗಿಗುಡ್ಡದ ಬಳಿಯ ಸೈಟ್ ಕೂಡ ಹೋಯಿತು.

ಇದನ್ನೂ ಓದಿ:ಮೊನ್ನೆಯಷ್ಟೇ ಮಾತಾಡಿದ್ದೆ, ಬಾಲ್ಯದಿಂದಲೂ ಒಟ್ಟಿಗೆ ಇದ್ದೇವು -ದ್ವಾರಕೀಶ್​ ನೆನೆದು ಭಾರ್ಗವ ಕಣ್ಣೀರು

publive-image

ಆದರೆ ಕನಸಿನ ಸಾಮ್ರಾಜ್ಯವನ್ನು ಕಾಣುತ್ತಿದ್ದ ದ್ವಾರಕೀಶ್​, ಮತ್ತೆ ಮತ್ತೆ ಸಿನಿಮಾ ಮಾಡಲು ಮುಂದಾದರು. ಪರಿಣಾಮ ಬ್ಯಾಂಕ್​ನಲ್ಲಿ ವಿಪರೀತ ಸಾಲ ಮಾಡಿಕೊಂಡಿದ್ದರು. ಅಂದು ಮಾಡಿದ್ದ 55 ಲಕ್ಷ ರೂಪಾಯಿ ಸಾಲದಿಂದಾಗಿ ಮನೆ, ಆಸ್ತಿಗಳನ್ನು ಕಳೆದುಕೊಳ್ಳಬೇಕಾಯಿತು. ಮನೆ ಮಾತ್ರವಲ್ಲ, ಅವರ ಬಳಿಯಿದ್ದ ದುಬಾರಿ ಬೆಲೆಯ ಕಾರುಗಳು ಸೇರಿ ಎಲ್ಲವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂತು.

Advertisment

ಕೊನೆಗೆ ಒಂದು ದಿನ ಅವರ ಬಾಡಿಗೆ ಮನೆಯ ಮುಂದೆ ಅಂಬಾಸಿಡರ್​ ಕಾರು ಮಾತ್ರ ನಿಲ್ಲಿಸಿದರು. ಅಷ್ಟಾಗಿದ್ದರೂ ಅವರಿಗೆ ಏನೋ ಮಾಡುವ ತುಡಿತ ಇತ್ತು. ಹೀಗಾಗಿ ಅವರು ನಟಿ ಶ್ರುತಿಯನ್ನು ಇಟ್ಟುಕೊಂಡು ‘ಶ್ರುತಿ’ ಎಂಬ ಸಿನಿಮಾ ಮಾಡಿದರು. ಈ ಸಿನಿಮಾ ಮತ್ತೆ ದ್ವಾರಕೀಶ್​ಗೆ ಸಕ್ಸಸ್​ ತಂದು ಕೊಟ್ಟಿತು. ಮತ್ತೆ ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ಸಂದರ್ಭ ಬಂದಿತ್ತು. ಕೊನೆಗೆ ಗೌರಿ ಕಲ್ಯಾಣ ಸಿನಿಮಾ ಮಾಡಿ ಕಳೆದುಕೊಂಡರು. ಕೊನೆಯಲ್ಲಿ ಅವರ ಕೈಹಿಡಿದ್ದು ಆಪ್ತಮಿತ್ರ ಸಿನಿಮಾ. ‘ಆಪ್ತ ಮಿತ್ರ’.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment