ADHD ಕಾಯಿಲೆಯಿಂದ ಬಳಲುತ್ತಿರುವ ಫಾಹದ್ ಫಾಸಿಲ್.. ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಕೊಟ್ಟ ನಟ

author-image
AS Harshith
Updated On
ADHD ಕಾಯಿಲೆಯಿಂದ ಬಳಲುತ್ತಿರುವ ಫಾಹದ್ ಫಾಸಿಲ್.. ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಕೊಟ್ಟ ನಟ
Advertisment
  • ‘ಪುಷ್ಪ’ ಸಿನಿಮಾ ಖ್ಯಾತಿಯ ನಟ ಫಾಹದ್​ ಫಾಸಿಲ್​
  • ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದ ಮಾಲಿವುಡ್​ ಸ್ಟಾರ್​
  • ADHD ಅಂದ್ರೆ ಏನು? ಅದರ ಗುಣಲಕ್ಷಣಗಳೇನು? ಇಲ್ಲಿದೆ ಮಾಹಿತಿ

'ಪುಷ್ಪ', ‘ಆವೇಶಂ’ ಸಿನಿಮಾ ಖ್ಯಾತಿಯ ಮಲಯಾಳಂ ನಟ ಫಾಹದ್ ಫಾಸಿಲ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಈ ಬಗ್ಗೆ ಅವರೇ ಮನಬಿಚ್ಚಿ ಮಾತನಾಡಿದ್ದಾರೆ. ನೆಚ್ಚಿನ ನಟನ ಮಾತನ್ನು ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ.

ಇತ್ತೀಚೆಗಷ್ಟೇ ಫಾಹದ್​ ಫಾಸಿಲ್​ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ತಾನು ADHD ಅಂದ್ರೆ ಅಟೆನ್ಷನ್ ಡಿಫಿಸಿಟ್ ಹೈಪರ್ಅ್ಯಕ್ಟಿವ್ ಡಿಸಾರ್ಡರ್ ( Attention-deficit/hyperactivity disorder ) ನಿಂದ ಬಳಲುತ್ತಿದ್ದೇನೆ ಎಂದಿದ್ದಾರೆ. ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

publive-image

41 ವರ್ಷದ ಫಾಹದ್ ಸಹ ADHD ರೋಗಕ್ಕೆ ಸಿಲುಕಿದ್ದಾರಂತೆ. ಇದು ಮನುಷ್ಯನ ನರಕ್ಕೆ ಸಂಬಂಧಪಟ್ಟಿದ್ದು, ಮಿದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಕೈಕೊಟ್ಟ ಮಳೆ! KRS ಡ್ಯಾಂನ ಒಳಹರಿವಿನ ಪ್ರಮಾಣ ಇಳಿಕೆ; ನೀರಿನ ಮಟ್ಟ ಎಷ್ಟಕ್ಕೆ ತಲುಪಿದೆ ಗೊತ್ತಾ?

publive-image

ಇನ್ನು ಫಾಹದ್​ ಫಾಸಿಲ್ ಕೈಯಲ್ಲಿ ಮಾರೀಸನ್​, ವೆಟ್ಟಯ್ಯನ್​ ಸಿನಿಮಾವಿದೆ. ಪುಷ್ಟ-2 ಸಿನಿಮಾದ ಬಳಿಕ ಈ ಸಿನಿಮಾಗಳಲ್ಲಿ ಫಾಹದ್​ ಫಾಸಿಲ್​ ಬ್ಯುಸಿಯಾಗಲಿದ್ದು, ಒಂದೊಂದರಂತೆ ತೆರೆಗೆ ಬರಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment