newsfirstkannada.com

ನಟ, ಮಾಜಿ IAS ಅಧಿಕಾರಿ ಕೆ. ಶಿವರಾಮ್ ಸ್ಥಿತಿ ಚಿಂತಾಜನಕ; ಚಿಕಿತ್ಸೆಗೆ ನೆರವಾಗಲು ಅಭಿಮಾನಿಗಳ ಒತ್ತಾಯ

Share :

Published February 28, 2024 at 4:22pm

  ಕೆ.ಶಿವರಾಮ್ ಅವರಿಗೆ ಹೃದಯ ಸ್ತಂಭನ ಹಾಗೂ ಬ್ರೈನ್ ಡೆಡ್!

  ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ

  ಶಿವರಾಮ್ ಚಿಕಿತ್ಸೆಗೆ ನೆರವಾಗಲು ಸರ್ಕಾರಕ್ಕೆ ಅಭಿಮಾನಿಗಳ ಒತ್ತಾಯ

ಬೆಂಗಳೂರು: ಕನ್ನಡದಲ್ಲೇ ಮೊದಲ ಬಾರಿ IAS ಪರೀಕ್ಷೆ ಪಾಸ್ ಮಾಡಿದ, ಕನ್ನಡದ ಖ್ಯಾತ ನಟ ಕೆ. ಶಿವರಾಮ್ ಅವರ ಸ್ಥಿತಿ ಚಿಂತಾಜನಕವಾಗಿದೆ. ನಗರದ ಹೆಚ್.ಸಿ.ಜಿ ಆಸ್ಪತ್ರೆಗೆ ದಾಖಲಾಗಿರುವ ಶಿವರಾಮ್ ಅವರಿಗೆ ಹೃದಯ ಸ್ತಂಭನ ಹಾಗೂ ಬ್ರೈನ್ ಡೆಡ್ ಆಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ನಟ ಕೆ. ಶಿವರಾಮ್ ಅವ್ರಿಗೆ ಈಗ 71 ವರ್ಷ ವಯಸ್ಸಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆ. ಶಿವರಾಮ್ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಶಿವರಾಮ್ ಅವರ ಅಭಿಮಾನಿ ಮೈಕೋ ನಾಗರಾಜ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ 20 ದಿನಗಳಿಂದ ಶಿವರಾಮ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಬಹು ಅಂಗಾಂಗ ವೈಫಲ್ಯ ಹಾಗೂ ಹಾರ್ಟ್ ಅಟ್ಯಾಕ್ ಆಗಿದೆ ಎಂದಿದ್ದಾರೆ. ಡಾ.ಶೇಖರ್ ಪಾಟೀಲ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಟ ಕೆ.ಶಿವರಾಮ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಐಎಎಸ್ ಅಧಿಕಾರಿಯಾಗಿ ಶಿವರಾಮ್ ಅವರು ಸಾಕಷ್ಟು ಜನಸೇವೆ ಮಾಡಿದ್ದಾರೆ. ಈ ನಾಡಿಗೆ ಅವರ ಕೊಡುಗೆ ಅಪಾರ. ಹೀಗಾಗಿ ಶಿವರಾಮ್ ಅವರ ಚಿಕಿತ್ಸೆ ಬಗ್ಗೆ ರಾಜ್ಯ ಸರ್ಕಾರ ಈ ಕಡೆ ಗಮನ ಹರಿಸಬೇಕು ಎಂದು ಶಿವರಾಮ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಕೆ.ಶಿವರಾಮ್ ನಟ ಹಾಗೂ ರಾಜಕಾರಣಿಯಾಗಿದ್ದಾರೆ. 1993ರಲ್ಲಿ ಶಿವರಾಮ್ ನಟನೆಯ ಮೊದಲ ಚಿತ್ರವೇ ಬಾ ನಲ್ಲೆ ಮಧುಚಂದ್ರಕೆ. ಆ ಬಳಿಕ ವಸಂತಕಾವ್ಯ, ಸಾಂಗ್ಲಿಯಾನ 3, ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ನಾಗ, ಓ ಪ್ರೇಮ ದೇವತೆ ಚಿತ್ರಗಳಲ್ಲಿ ಶಿವರಾಮ್ ನಟನೆ ಮಾಡಿದ್ದಾರೆ. ಪ್ರದೀಪ್ ನಟನೆಯ ಟೈಗರ್ ಚಿತ್ರದಲ್ಲಿ ಶಿವರಾಮ್‌ ಅವರು ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದರು. 2007ರ ಬಳಿಕ ಶಿವರಾಮ್ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ, ಮಾಜಿ IAS ಅಧಿಕಾರಿ ಕೆ. ಶಿವರಾಮ್ ಸ್ಥಿತಿ ಚಿಂತಾಜನಕ; ಚಿಕಿತ್ಸೆಗೆ ನೆರವಾಗಲು ಅಭಿಮಾನಿಗಳ ಒತ್ತಾಯ

https://newsfirstlive.com/wp-content/uploads/2024/02/K-Shivaram-Actor-1.jpg

Load More