/newsfirstlive-kannada/media/post_attachments/wp-content/uploads/2025/05/seeta-rama1.jpg)
ಕನ್ನಡ ಕಿರುತೆರೆಯ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿಯ ಸ್ಲಾಟ್. ಈ ಧಾರಾವಾಹಿ ಸ್ವಲ್ಪ ಸ್ಪೆಷಲ್ ಅಂದ್ರೆ ತಪ್ಪಾಗೋಲ್ಲ. ಏಕೆಂದರೆ ಕಿರುತೆರೆಗೆ ನಿಧಾನವಾಗಿ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಧಾರಾವಾಹಿ ತೆರೆ ಮೇಲೆ ಬಂದಿತ್ತು. ಇನ್ನೂ, ಎರಡು ವರ್ಷವನ್ನೂ ಪೂರೈಸದೇ ವೀಕ್ಷಕರಿಗೆ ವಿದಾಯ ಹೇಳಿದೆ.
/newsfirstlive-kannada/media/post_attachments/wp-content/uploads/2025/05/seetarama1.jpg)
ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ, ಗಗನ್​ ಚಿನ್ನಪ್ಪ ಮುಖ್ಯಭೂಮಿಕೆಯಲ್ಲಿದ್ದ ಸೀತಾ ರಾಮ ಧಾರಾವಾಹಿ ಮುಕ್ತಾಯ ಕಂಡಿದೆ. ತೆರೆಗೆ ಬಂದ ಕೆಲವೇ ದಿನಗಳಲ್ಲಿ ಈ ಸೀರಿಯಲ್​ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.
/newsfirstlive-kannada/media/post_attachments/wp-content/uploads/2025/05/seeta-rama2.jpg)
ಆದ್ರೆ ಇದೀಗ ಧಾರಾವಾಹಿ ಅಂತ್ಯವಾಗುವ ಸಮಯ ಬಂದಿದೆ. ಈಗಾಗಲೇ ಸೀತಾ ರಾಮ ಸೀರಿಯಲ್‌ನ ಕೊನೇ ದಿನದ ಶೂಟಿಂಗ್‌ನಲ್ಲಿ ಕೂಡ ನಡೆದಿದ್ದು, ಈ ವೇಳೆ ಇಡೀ ತಂಡ ಭಾಗಿಯಾಗಿತ್ತು. ಇದೇ ವೇಳೆ ಸೀತಾರಾಮ ಸೀರಿಯಲ್ ಕೊನೆ ಶಾರ್ಟ್​ನಲ್ಲಿ ಕಟ್​ ಹೇಳುತ್ತಿದ್ದಂತೆ ನಟ ಗಗನ್​ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2025/05/seeta-rama4.jpg)
ಏಕೆಂದರೆ ಈ ಸೀರಿಯಲ್ ಇಡೀ ಕಲಾವಿದರಿಗೆ ಹೆಸರನ್ನು ತಂದುಕೊಟ್ಟಿತ್ತು. ಗಗನ್​ ಮತ್ತು ಸಿಹಿ ಆಗಿರೋ ರೀತು ಸಿಂಗ್​, ವೈಷ್ಣವಿ ಗೌಡ, ಅಶೋಕ್​ ಹಾಗೂ ಮೇಘನಾ ಎಷ್ಟು ಮಜಾ ಮಾಡ್ತಾ ಇದ್ರೂ ಅಂತ ವೀಕ್ಷಕರು, ಅಭಿಮಾನಿಗಳು ಈಗಾಗಲೇ ನೋಡಿದ್ದಾರೆ.
View this post on Instagram
/newsfirstlive-kannada/media/post_attachments/wp-content/uploads/2025/05/seeta-rama3.jpg)
ಅದರಲ್ಲೂ ಪುಟಾಣಿ ರೀತುಗೆ ದೊಡ್ಡ ಮಟ್ಟದ ಸ್ಟಾರ್​ ಪಟ್ಟ ಕೊಟ್ಟಿದ್ದೇ ಈ ಸೀತಾರಾಮ ಸೀರಿಯಲ್​ ಹೀಗಾಗಿ ಕೊನೆಯ ದಿನದ ಶೂಟಿಂಗ್​ನಲ್ಲಿ ಇಡೀ ಸೀರಿಯಲ್ ತಂಡ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಇದೇ ವಿಡಿಯೋವನ್ನು ಜೀ ಕನ್ನಡ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಜೊತೆಗೆ ನವಿರಾದ ಕಥೆಗೆ ಸಿಹಿಯಾದ ವಿದಾಯ.. ಮತ್ತೆ ಭೇಟಿಯಾಗೋಣ ಹೊಸ ರೂಪದಲ್ಲಿ ಅಂತ ಬರೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us