/newsfirstlive-kannada/media/post_attachments/wp-content/uploads/2025/06/gagan2.jpg)
ಕನ್ನಡ ಕಿರುತೆರೆಯ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿಯ ಸ್ಲಾಟ್. ಸೀತಾರಾಮ ಸೀರಿಯಲ್​ ಮುಕ್ತಾಯಗೊಂಡಿದೆ. ಇದೇ ಸೀರಿಯಲ್ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದು ಎಂದರೆ ಅದು ರಾಮ.
/newsfirstlive-kannada/media/post_attachments/wp-content/uploads/2025/06/gagan3.jpg)
ರಾಮ ಪಾತ್ರಕ್ಕೆ ಬಣ್ಣ ಹಚ್ಚಿದ್ದರು ಗಗನ್​ ಚಿನ್ನಪ್ಪ. ಸೀತಾರಾಮ ಸೀರಿಯಲ್​ ಕೊನೆಯ ದಿನದ ಶೂಟಿಂಗ್​ ವೇಳೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದರು. ಅಲ್ಲದೇ ಸಂದರ್ಶನವೊಂದರಲ್ಲಿ ಕೂಡ ತಾವು ಸೀತಾರಾಮ ಸೀರಿಯಲ್​ನಿಂದ ಎಷ್ಟು ಜನಪ್ರಿಯತೆ ಪಡೆದುಕೊಂಡೆ ಅಂತ ಕೂಡ ವಿವರಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಬಳಿಯಿದ್ದ ಐಷಾರಾಮಿ ಕಾರುಗಳ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/06/gagan5.jpg)
ಈ ಬಗ್ಗೆ ಮಾತಾಡಿದ ಅವರು, ಸ್ವಲ್ಪ ಹುಡುಗಾಟದಲ್ಲಿ ಐದಾರು ಕಾರನ್ನು ಖರೀದಿ ಮಾಡಿಬಿಟ್ಟೆ. ಸದ್ಯಕ್ಕೆ ಎಲ್ಲಾ ಮಾರಾಟ ಮಾಡಿ 2 ಕಾರನ್ನು ಮಾತ್ರ ನಾನು ಇಟ್ಟಕೊಂಡಿದ್ದೇನೆ. ಲಿಮಿಟೆಡ್ ಎಡಿಷನ್ 3.5 ಲೀಟರ್ v6 ಇಂಜಿನ್​, ಜಿಪ್ಸಿ, ಕ್ಯಾಮ್ರಿ, ಆಡಿ ಮಾರಿ ಬಿಟ್ಟೆ. ಸದ್ಯಕ್ಕೆ ಅರ್ಕಾಡ್ ಮಹೀಂದ್ರ ಥಾರ್ ನನ್ನ ಹತ್ತಿರ ಇದೆ. ಇಷ್ಟೇಲ್ಲಾ ಕಾರು ಪಾರ್ಕಿಂಗ್​ಗೇ 15 ಸಾವಿರ ಕಟ್ಟುತ್ತಿದ್ದೆ. ಶೋಕಿ ಜಾಸ್ತಿ ಆಯ್ತು ಅಂತ ಬೇಡ ಈ ಲೈಫ್​ ಸ್ಟೈಲ್​ ಅಂತ ನನ್ನ ಸ್ನೇಹಿತನಿಗೆ ಕೊಟ್ಟು ಬಿಟ್ಟೆ. ಸದ್ಯಕ್ಕೆ ಕೂರ್ಗ ಅಲ್ಲಿ ಮನೆ ಕಟ್ಟಿಸುತ್ತಿದ್ದೇನೆ ಅಂತ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/06/gagan4.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us