Advertisment

ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ಕೆಂಗಣ್ಣಿಗೆ ಗುರಿಯಾದ ಸ್ಯಾಂಡಲ್​ವುಡ್​ ನಟ..!

author-image
Bheemappa
Updated On
ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ಕೆಂಗಣ್ಣಿಗೆ ಗುರಿಯಾದ ಸ್ಯಾಂಡಲ್​ವುಡ್​ ನಟ..!
Advertisment
  • ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡುತ್ತಿರೋ ಸೆಲೆಬ್ರೆಟಿಗಳು
  • ನಟರೊಬ್ಬರು ಭೇಟಿ ಕೊಟ್ಟಾಗ ನಡೆದ ಗಂಭೀರ ಚರ್ಚೆ
  • ಮಗನಿಗೆ ಚಿತ್ರಹಿಂಸೆ ಕೊಟ್ಟಿದ್ದನ್ನ ಸಹಿಸಲಾಗ್ತಿಲ್ಲ- ತಂದೆ, ತಾಯಿ

ಪುತ್ರ ಶೋಕಂ ನಿರಂತರಂ ಅಂತಾರೆ.. ಸದ್ಯ ರೇಣುಕಾಸ್ವಾಮಿಯನ್ನು ಕಳೆದುಕೊಂಡು ಅವರ ಕುಟುಂಬ ಕಣ್ಣೀರಿಡ್ತಿದೆ. ಮನೆಯ ನೊಗ ಹೊತ್ತಿದ್ದವನನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. ಪರಿಸ್ಥಿತಿ ಹೀಗಿರುವಾಗ ನಟ ಗಣೇಶ್ ರಾವ್ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಾತ್ರವಲ್ಲದೆ ದರ್ಶನ್ ಪರವಾಗಿ ಮಾತಾಡಿ ರೇಣುಕಾ ಸಂಬಂಧಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisment

ಇದನ್ನೂ ಓದಿ: Breaking: ಮೇಘಾಲಯದ ರಾಜ್ಯಪಾಲರಾಗಿ ಸಿ.ಹೆಚ್ ವಿಜಯಶಂಕರ್ ನೇಮಕ.. ರಾಜಕೀಯ ಹಿನ್ನೆಲೆ ಏನು..?

ರೇಣುಕಾಸ್ವಾಮಿ ದರ್ಶನ್​ ಌಂಡ್​ ಗ್ಯಾಂಗ್​ನಿಂದ ಬರ್ಬರವಾಗಿ ಸಾವನ್ನಪ್ಪಿದ ಬಳಿಕ ಬಹುತೇಕರು ರೇಣುಕಾ ಕುಟುಂಬದ ಮೇಲೆ ಮರುಕಪಟ್ಟಿದ್ದಾರೆ. ಮೇಲಿಂದ ಮೇಲೆ ರಾಜಕಾರಣಿಗಳು, ಸೆಲೆಬ್ರೆಟಿಗಳು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳ್ತಿದ್ದಾರೆ. ಅವರ ಮನೆಗೆ ಕನ್ನಡದ ನಟರೊಬ್ಬರು ಭೇಟಿ ಕೊಟ್ಟಿದ್ದು ಈ ವೇಳೆ ಗಂಭೀರವಾದ ಚರ್ಚೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಡ್ಯಾಂಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ; ಈಗಷ್ಟೇ ನಾಟಿ ಶುರುಮಾಡಿದ್ದ ಅನ್ನದಾತರಿಗೆ ಸಂಕಷ್ಟ

Advertisment

publive-image

ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ನಟ ಗಣೇಶ್ ರಾವ್ ಭೇಟಿ

ಚಿತ್ರದುರ್ಗದ VRS ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ನಿವಾಸಕ್ಕೆ ನಟ ಗಣೇಶ್ ರಾವ್ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿದ್ದಾರೆ. ರೇಣುಕಾಸ್ವಾಮಿ ತಂದೆಯ ಕಾಲಿಗೆ ನಮಸ್ಕರಿಸಿ ರೇಣುಕಾಸ್ವಾಮಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ಈ ವೇಳೆ ಕುಟುಂಬಕ್ಕೆ ತಾರಕೇಶ್ವರ ಚಿತ್ರತಂಡ ಧನ ಸಹಾಯ ಮಾಡಿದೆ.

ಈ ವೇಳೆ ಗಣೇಶ್ ರಾವ್ ಮುಂದೆ ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ ನೋವು ತೋಡಿಕೊಂಡಿದ್ದಾರೆ. ನನ್ನ ಮಗನಿಗೆ ಹಿಂಸೆ ಕೊಟ್ಟದ್ದನ್ನು ನೆನೆದ್ರೆ ಸಂಕಟವಾಗುತ್ತೆ. ಮಗನಿಗೆ ಚಿತ್ರಹಿಂಸೆ ಕೊಟ್ಟಿದ್ದನ್ನು ಸಹಿಸಲು ಆಗ್ತಿಲ್ಲ ಅಂತ ಕಣ್ಣೀರಿಟ್ಟಿದ್ದಾರೆ. ಆಗ ಅವರ ಭುಜ ಸ್ಪರ್ಶಿಸಿ ಗಣೇಶ್​ ರಾವ್ ಸಂತೈಸಿದ್ದಾರೆ.

ಗಣೇಶ್ ರಾವ್-ಷಡಕ್ಷರಯ್ಯ ಮಧ್ಯೆ ಗಂಭೀರ ಚರ್ಚೆ

ಇನ್ನು ಇದೇ ವೇಳೆ ದರ್ಶನ್ ಕೊಲೆ ಮಾಡುವಷ್ಟು ಕ್ರೂರ ಮನುಷ್ಯ ಅಲ್ಲ. ಅವ್ರ ಜೊತೆಯಲ್ಲಿರೋರು ಮಾಡಿರೋದ್ರಿಂದ, ಸೆಲೆಬ್ರಿಟಿ ದರ್ಶನ್ ಹೆಸರು ಬರ್ತಿದೆ ಅಂತ ಗಣೇಶ್ ರಾವ್ ಹೇಳಿದ್ದಾರೆ. ಇದಕ್ಕೆ ರೇಣುಕಾಸ್ವಾಮಿ ಸಂಬಂಧಿ ಷಡಕ್ಷರಯ್ಯ ಕೂಡಲೇ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.

Advertisment

ಗಣೇಶ್ ರಾವ್: ದರ್ಶನ್ ಸೆಲೆಬ್ರಿಟಿ ಹಾಗಾಗಿ ಅವರ ಹೆಸರು ಹೊರಗೆ ಬರುತ್ತಿದೆ. ಅವರು ಆ ಮಟ್ಟಕ್ಕೆ ಇಳಿಯುವಂತ ಮನುಷ್ಯರಲ್ಲ. ಜೊತೆಗಿದ್ದ ಸಂಗಡಿಗರು ಮಾಡಿದ್ದರಿಂದ ಆ ಅಪವಾದ ದರ್ಶನ್ ಮೇಲೆ ಬಂದಿದೆ.

ರೇಣುಕಾಸ್ವಾಮಿ ಸಂಬಂಧಿ: ಹೆಡ್​ ಆಫೀಸ್​ಗೆ ಯಾರು ಹೆಡ್ ಇರುತ್ತಾರೋ ಅವರದ್ದೇ ತಪ್ಪು. ಅವತ್ತು ಮೃತದೇಹ ಸಿಕ್ಕಿರಲಿಲ್ಲ ಅಂದರೆ ನಾವು ನೋಡೋಕು ಆಗ್ತಿರಲಿಲ್ಲ.

ಇದನ್ನೂ ಓದಿ: IAS ಕೋಚಿಂಗ್​ ಸೆಂಟರ್​ಗೆ ಮಳೆ ನೀರು ನುಗ್ಗಿ ದುರಂತ.. ಮೂವರು ವಿದ್ಯಾರ್ಥಿಗಳು ಸಾವು

Advertisment

publive-image

ಬಳಿಕ ಮಾತನಾಡಿದ ಗಣೇಶ್​, ದರ್ಶನ್ ಆರೋಪಿಯಷ್ಟೆ, ಅಪರಾಧಿ ಅಲ್ಲ ಅಂತ ಮತ್ತೆ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ. ಈ ಪರ-ವಿರೋಧ ಏನೇ ಇರಲಿ ಮೊದಲೇ ಮಗನನ್ನು ಕಳೆದುಕೊಂಡ ನೋವಿನಲ್ಲಿ ರೇಣುಕಾಸ್ವಾಮಿ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಇಂತದ್ರಲ್ಲಿ ಸಾಂತ್ವನ ಹೇಳುವ ಭರದಲ್ಲಿ ಹೋಗಿ ಯಾರೂ ಕೂಡ ಆ ನೋವಿನ ಮೇಲೆ ಬರೆ ಕೊಡುವ ಕೆಲಸ ಮಾಡಬಾರದು ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment