/newsfirstlive-kannada/media/post_attachments/wp-content/uploads/2025/02/giri-dinesh.jpg)
ಬೆಂಗಳೂರು: ನವಗ್ರಹ ಸಿನಿಮಾ ಖ್ಯಾತಿಯ ಗಿರಿ ದಿನೇಶ್​ ನಿಧನರಾಗಿದ್ದಾರೆ. ಇವರು ಹಿರಿಯ ನಟ ದಿನೇಶ್​ ಅವರ ಪುತ್ರರಾಗಿದ್ದು, ನವಗ್ರಹ ಸಿನಿಮಾದಿಂದ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.
ಗಿರಿ ದಿನೇಶ್​ ಅವರಿಗೆ 45 ವರ್ಷ ಆಗಿತ್ತು. ಸಂಜೆ ಪೂಜೆ ಮಾಡುವ ವೇಳೆ ದಿಢೀರ್​ ಹಾರ್ಟ್​ ಅಟ್ಯಾಕ್​ ಆಗಿದೆ. ಹೃದಯಾಘಾತ ಆಗುತ್ತಿದ್ದಂತೆ ಮನೆಯಲ್ಲೇ ಗಿರಿ ಅವರು ಕುಸಿದು ಬಿದ್ದಿದ್ದರು. ಈ ಕೂಡಲೇ ಇವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲು ಮುಂದಾದರು. ಆದರೆ, ದಾರಿ ಮಧ್ಯೆಯೇ ಇವರು ಜೀವಬಿಟ್ಟಿದ್ದಾರೆ.
ಇನ್ನು, ಗಿರಿ ಅವರಿಗೆ ವಿವಾಹ ಆಗಿರಲಿಲ್ಲ. ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರ ನಿಭಾಯಿಸಿದ್ದರು. ಇವರು ನಟ ದರ್ಶನ್​ ಅವರಿಗೆ ಬಹಳ ಆಪ್ತರು.
/newsfirstlive-kannada/media/post_attachments/wp-content/uploads/2025/02/Navagraha.jpg)
ನವಗ್ರಹ ಸಿನಿಮಾಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ನಿರ್ದೇಶನ ಮಾಡಿದ್ದಾರೆ. ಅದು ಅವರ ಎರಡನೇ ಸಿನಿಮಾ ಆಗಿತ್ತು. ದರ್ಶನ್ ಜೊತೆ ತರುಣ್ ಸುಧೀರ್​, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್​, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್​, ವರ್ಷಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. 2008ರ ನವೆಂಬರ್​ 7ರಂದು ತೆರೆಕಂಡಿದ್ದ ಈ ಸಿನಿಮಾ ಸೂಪರ್​ ಹಿಟ್ ಆಗಿತ್ತು.
ಇದನ್ನೂ ಓದಿ:ಕೇವಲ 4 ಲಕ್ಷದಲ್ಲಿ ಕೋಟಿ ಕೋಟಿ ದುಡಿಯೋದು ಹೇಗೆ? ಇದು ಯಾವ ಬ್ಯುಸಿನೆಸ್​ಗೂ ಕಮ್ಮಿ ಇಲ್ಲ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us