/newsfirstlive-kannada/media/post_attachments/wp-content/uploads/2025/01/HONEY-ROSE.jpg)
ರೇಣುಕಾಸ್ವಾಮಿ ಕೇಸ್​​ ನಿಮಗೆಲ್ಲಾ ಗೊತ್ತೆ ಇದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್​​ ಮಾಡಿದ್ದಲ್ಲಿಂದ ಶುರುವಾದ ಪ್ರಕರಣ ಪಟ್ಟಣಗೆರೆ ಶೆಡ್​ಗೆ ತಲುಪಿ, ಅಲ್ಲಿಂದ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿವರೆಗೆ ಕೇಸ್ ಸದ್ದು ಮಾಡಿದ್ದು ಗೊತ್ತೇ ಇದೆ. ಆದ್ರೀಗ ಪವಿತ್ರಾಗೌಡ ರೀತಿ ಮತ್ತೊಬ್ಬ ನಟಿಗೆ ಮೆಸೇಜ್ ಕಾಟ ಶುರುವಾಗಿದೆ. ಮಲೆಯಾಳಂ ನಟಿ ಹನಿರೋಸ್​ಗೆ ಕಿರಾತಕರು ಕೆಟ್ಟ ಕೆಟ್ಟದಾಗಿ ಕಮೆಂಟ್ಸ್ ಮಾಡಿ ಕಿರುಕುಳ ನೀಡ್ತಿದ್ದಾರಂತೆ. ಕಮೆಂಟ್ಸ್ ಮಾಡಿದವರ ವಿರುದ್ಧ ಸಮರ ಸಾರಿದ ನಟಿ ಹನಿ ರೋಸ್ ಪವಿತ್ರಾ ಗೌಡ ರೀತಿ ಕಾನೂನನ್ನ ಕೈಗೆತ್ತಿಕೊಳ್ಳದೇ ನೇರವಾಗಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.. ಈ ನಟಿ ದೂರು ನೀಡಿರೋದು ಒಬ್ಬಿಬ್ಬರ ವಿರುದ್ಧ ಅಲ್ಲ.. ಬದಲಾಗಿ ಬರೊಬ್ಬರಿ 30 ಮಂದಿ ಕಮೆಂಟ್ಸ್​ ಕಿರಾತಕರ ವಿರುದ್ಧ.
ಇದನ್ನೂ ಓದಿ: ನಟ ದರ್ಶನ್ ಗ್ಯಾಂಗ್‌ಗೆ ಮತ್ತೆ ಸಂಕಷ್ಟ.. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದಾಗುತ್ತಾ?
ಸದ್ಯ 30 ಮಂದಿಯ ವಿರುದ್ಧ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ನಟಿ ಹನಿರೋಸ್ ದೂರು ದಾಖಲಿಸಿದ್ದಾರೆ. ಹನಿರೋಸ್ ದೂರ ಆಧರಿಸಿ ಸದ್ಯ ಕೊಚ್ಚಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಅಶ್ಲೀಲವಾಗಿ ಕಮೆಂಟ್ ಮಾಡಿದ ಅಕೌಂಟ್​ಗಳ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು. ಒಟ್ಟು ಮೂವತ್ತು ಅಕೌಂಟ್​​ಗಳ ಜನ್ಮ ಜಾಲಾಡಿದ್ದಾರೆ. ಸದ್ಯಲ್ಲಿಯೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೊಚ್ಚಿ ಪೊಲೀಸರು ಸಜ್ಜಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಡಿರುವ ನಟಿ ಹನಿರೋಸ್, ಆರೋಪಿಗಳ ಮಾಹಿತಿ ಕಲೆ ಹಾಕಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಹನಿರೋಸ್ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಅದರಲ್ಲೂ ಮಲೆಯಾಳಂ ಸಿನಿಮಾ ಉದ್ಯಮ ಅವರ ಬೆನ್ನಿಗೆ ನಿಂತಿದೆ. ಎಲ್ಲ ನಟ-ನಟಿಯರು ಹನಿ ರೋಸ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸದ್ಯ ನಟಿ ತೆಗೆದುಕೊಂಡಿರುವ ಕಾನೂನು ಸಮರ ಯಾವ ಹಂತಕ್ಕೆ ತಲುಪಲಿದೆ ಎಂದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us