/newsfirstlive-kannada/media/post_attachments/wp-content/uploads/2025/06/huli-karthik2.jpg)
ಕನ್ನಡ ಕಿರುತೆರೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು ಗಿಚ್ಚಿ ಗಿಲಿಗಿಲಿ ಶೋ. ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಹುಲಿ ಕಾರ್ತಿಕ್​ ಗಿಚ್ಚಿ ಗಿಲಿಗಿಲಿ ಸೀಸನ್ 3 ವಿನ್ನರ್ ಆಗಿ ಹೊರ ಹೊಮ್ಮಿದ್ದರು.
ಕಲರ್ಸ್ ಸೂಪರ್​ನಲ್ಲಿ ಮೂಡಿ ಬರುತ್ತಿದ್ದ ಮಜಾ ಭಾರತ, ಬಳಿಕ ಗಿಚ್ಚಿ ಗಿಲಿಗಿಲಿ ಶೋ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದರು. ಬರೋಬ್ಬರಿ 8 ವರ್ಷದ ಬಳಿಕ ಹುಲಿ ಕಾರ್ತಿಕ್​ ವಿನ್ನರ್​ ಪಟ್ಟ ಗಿಟ್ಟಿಸಿಕೊಂಡಿದ್ದರು. ಸದ್ಯ ಹುಲಿ ಕಾರ್ತಿಕ್​ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/huli-karthik4.jpg)
ಕಳೆದ ವಾರ ಎಲ್ಲ ಟಾಪ್​ 10 ಮಂದಿ ಬ್ಯಾಚುಲರ್ಸ್ ತಮ್ಮ ಮೆಂಟರ್ಸ್​ಗಳಿಗೆ ಸರ್​ಪ್ರೈಸ್​ಗಳನ್ನು ಕೊಟ್ಟಿದ್ದಾರೆ. ಈ ವಾರ ಬ್ಯಾಚುಲರ್ಸ್​ಗಳಿಗೆ ಜಡ್ಜಸ್ ಟಾಸ್ಕ್​ವೊಂದನ್ನು ಕೊಟ್ಟಿದ್ದರು. ಅದುವೇ ಪ್ರಪೋಸಲ್ ರೌಂಡ್​. ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಮೇಲೆ ಒಬ್ಬೊಬ್ಬರಾಗಿ ಬಂದು ತಮ್ಮ ಮೆಂಟರ್ಸ್​ಗಳಿಗೆ ಬ್ಯಾಚುಲರ್ಸ್​ ಪ್ರಪೋಸ್​ ಮಾಡಿದ್ದಾರೆ. ಭಿನ್ನ ವಿಭಿನ್ನ ಥೀಮ್​ನಲ್ಲಿ ವೇದಿಕೆ ರೆಡಿ ಮಾಡಿ ಸರ್​ಪ್ರೈಸ್​ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/06/huli-karthik3.jpg)
ಅದೇ ರೀತಿ ಹುಲಿ ಕಾರ್ತಿಕ್​ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ತಾವು ಪ್ರೀತಿಸಿದ ಹುಡುಗಿಯನ್ನು ನೆನೆದು ಭಾವುಕರಾಗಿದ್ದಾರೆ. ವೇದಿಕೆ ಮೇಲೆ ಹುಡುಗಿಯ ಬಗ್ಗೆ ಮಾತಾಡಿ ಪ್ರಾಮಿಸ್ ಮಾಡಿದ್ದಾರೆ. ವೇದಿಕೆ ಮೇಲೆ ಧನ್ಯ ಅವರ ಪಕ್ಕದಲ್ಲಿ ನಿಂತುಕೊಂಡಿದ್ದ ಹುಲಿ ಕಾರ್ತಿಕ್​, ನೀವೇ ನಾನು ಪ್ರೀತಿಸುತ್ತಿರೋ ಹುಡುಗಿ ಅಂತ ಅಂದುಕೊಂಡು ಹೇಳುತ್ತಿದ್ದೇನೆ. ಐಎಂ ವೆರಿ ಸಾರಿ ಮುದ್ದು, ಚೆನ್ನಾಗಿ ದುಡ್ಡು ಮಾಡ್ಬೇಕು, ಚೆನ್ನಾಗಿ ಹೆಸರು ಮಾಡಬೇಕು ಅಂತ ಅಂದುಕೊಂಡಿದ್ದೇ. ಆದ್ರೆ ಹೀಗೆ ಮಾಡುತ್ತಾ ಅವಳಿಗೆ ಟೈಮ್​ ಕೋಡೋದಕ್ಕೆ ಆಗಲಿಲ್ಲ. ಅವರಿಗೆ ಏನೂ ದೊಡ್ಡ ಆಸೆ ಇರಲಿಲ್ಲ. ಅವಳಿಗೆ ಬೇಕಾಗಿದ್ದು ಇಷ್ಟೇ. ನಾನು ಇಷ್ಟೇಲ್ಲಾ ತಪ್ಪು ಮಾಡಿದ್ದೇನೆ. ದಯವಿಟ್ಟು ಕ್ಷಮಿಸಿ ಮುದ್ದಮ್ಮ. ನಿನಗೆ ಇನ್ನೂ ಮುಂದೆ ನಿನಗೆ ಜಾಸ್ತಿ ಟೈಮ್ ಕೊಡ್ತೀನಿ. ನಿನಗೆ ನಾನು ಸ್ಮೋಕ್ ಮಾಡೋದು ಇಷ್ಟ ಇಲ್ಲ. ಅದಕ್ಕೆ ನಾನು ಸ್ಮೋಕ್ ಮಾಡೋದನ್ನು ಬಿಟ್ಟು ಬಿಡ್ತೀನಿ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us