‘ಗುರುಪ್ರಸಾದ್​​ ಮಗುವಿಗೆ ಸಹಾಯ ಮಾಡ್ತೀನಿ’- ನಟ ಜಗ್ಗೇಶ್​​ ಸಂಕಲ್ಪ

author-image
Ganesh Nachikethu
Updated On
‘ಗುರುಪ್ರಸಾದ್​​ ಮಗುವಿಗೆ ಸಹಾಯ ಮಾಡ್ತೀನಿ’- ನಟ ಜಗ್ಗೇಶ್​​ ಸಂಕಲ್ಪ
Advertisment
  • ಮಠ ಖ್ಯಾತಿಯ ಡೈರೆಕ್ಟರ್​ ಗುರುಪ್ರಸಾದ್‌ ಸಾವು
  • ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆ!
  • ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ಶಂಕೆ

ಬೆಂಗಳೂರು: ಮಠ ಖ್ಯಾತಿಯ ಗುರುಪ್ರಸಾದ್‌ ಇನ್ನಿಲ್ಲ. ಗುರುಪ್ರಸಾದ್​​​ ತಮ್ಮ ಮಾದನಾಯಕಹಳ್ಳಿ ಇರೋ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸೀಲಿಂಗ್​ ಫ್ಯಾನ್​​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇವರ ಬಗ್ಗೆ ನಟ ಜಗ್ಗೇಶ್​​ ಮಾತಾಡಿದ್ದಾರೆ.

ಜಗ್ಗೇಶ್​​ ಏನಂದ್ರು?

ನಾನು ರಂಗನಾಯಕ ಸಿನಿಮಾಗೆ ಗುರುಪ್ರಸಾದ್‌ಗೆ ಬರೋಬ್ಬರಿ 90 ಲಕ್ಷ ಕೊಡಿಸಿದ್ದೆ. ಸಿನಿಮಾದಿಂದ ಬಂದ ಹಣದಿಂದ ಉತ್ತಮ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೆ, ಕುಡಿತದ ಚಟದಿಂದ ಜೀವನವನ್ನೇ ಹಾಳು ಮಾಡಿಕೊಂಡ. ಆತನ 2ನೇ ಹೆಂಡತಿ ಗರ್ಭಿಣಿ, ಒಂದು ಹೆಣ್ಣುಮಗು ಕೂಡ ಇದೆ. ನಾನು ಆ ಹೆಣ್ಣು ಮಗುವಿನ ಭವಿಷ್ಯಕ್ಕೆ ಸಹಾಯ ಮಾಡುತ್ತೇನೆ ಎಂದರು.

ಗುರುಪ್ರಸಾದ್​​ ನನಗೆ ಮಠ ಹಾಗೂ ಎದ್ದೇಳು ಮಂಜುನಾಥ ಅನ್ನೋ ಸೂಪರ್​ ಹಿಟ್​ ಸಿನಿಮಾಗಳು ನೀಡಿದ್ರು. ರಂಗನಾಯಕ ಸಿನಿಮಾದ ಬಳಿಕ ನನ್ನ ಮತ್ತು ಗುರುಪ್ರಸಾದ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ನಮ್ಮಿಬ್ಬರ ಮಧ್ಯೆ ಮಾತು ಅಷ್ಟಕ್ಕಷ್ಟೇ ಇತ್ತು ಎಂದರು.

ಸಿನಿಮಾದಲ್ಲಿ ನಟಿಸಲು ಬಂದ ಹುಡುಗಿಯನ್ನೇ ಮದುವೆ ಆದ. ಈಗ ಆತನ ಗರ್ಭಿಣಿ ಹೆಂಡತಿ ಹಾಗೂ ಹೆಣ್ಣು ಮಗುವನ್ನು ನೋಡಿದರೆ ಬೇಜಾರಾಗುತ್ತದೆ. ನಾನು ಆ ಹೆಣ್ಣು ಮಗುವಿನ ಭವಿಷ್ಯಕ್ಕೆ ಸಹಾಯ ಮಾಡುವ ಸಂಕಲ್ಪ ತೊಟ್ಟಿದ್ದೇನೆ ಎಂದರು.

ಆತ್ಮಹತ್ಯೆಗೆ ಕಾರಣವೇನು?

ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಗುರುಪ್ರಸಾದ್​​​ ಕೋಟ್ಯಾಂತರ ರೂ. ಸಾಲು ಮಾಡಿಕೊಂಡಿದ್ದರು. ಸಾಲದ ಹೊರೆ ತಾಳಲಾರದೆ ಆಗಾಗ ತನ್ನ ಮನೆ ಬದಲಾವಣೆ ಮಾಡುತ್ತಿದ್ದರು. ಇವರ ವಿರುದ್ಧ ಹಲವು ದೂರುಗಳು ಕೂಡ ದಾಖಲಾಗಿದ್ದವು. ರಂಗನಾಯಕ ಸಿನಿಮಾ ಕೂಡ ಸೋತಿತ್ತು. ಈ ಕಾರಣದಿಂದಲೇ ಗುರುಪ್ರಸಾದ್​​ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment