Advertisment

ಹೋಗಿ ಬಾ ಭೈರವ.. ಇಡೀ ಕುಟುಂಬದ ಪ್ರೀತಿಯ ನಾಯಿ ಸಾವಿಗೆ ನಟ ಜಗ್ಗೇಶ್‌ ಕಣ್ಣೀರು

author-image
admin
Updated On
ಹೋಗಿ ಬಾ ಭೈರವ.. ಇಡೀ ಕುಟುಂಬದ ಪ್ರೀತಿಯ ನಾಯಿ ಸಾವಿಗೆ ನಟ ಜಗ್ಗೇಶ್‌ ಕಣ್ಣೀರು
Advertisment
  • ರಾಯರದಿನ ರಾಯರಭಕ್ತನ ಪ್ರೀತಿಯ ಭೈರವ ಪ್ರಾಣ ಬಿಟ್ಟಿದ್ದಾನೆ
  • ನನ್ನ ಕಣ್ಣೀರು ನಿಲ್ಲುತ್ತಿಲ್ಲ.. ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇವೆ
  • ಪ್ರೀತಿಯ ನಾಯಿಗೆ ಕುಲದೇವರ ಹೆಸರಿಟ್ಟಿದ್ದ ಜಗ್ಗೇಶ್, ಕೋಮಲ್

ನವರಸ ನಾಯಕ ಜಗ್ಗೇಶ್ ಅವರದ್ದು ಮಗುವಿನಂತಹ ಮನಸು.. ತಮ್ಮ ಜೀವನದಲ್ಲಾದ ಬೇಸರದ ಸಂಗತಿಗಳನ್ನು ಅವರು ಭಾವುಕರಾಗಿಯೇ ವ್ಯಕ್ತಪಡಿಸುತ್ತಾರೆ. ಅವರ ಕುಟುಂಬಸ್ಥರಿಗೆ ಪ್ರೀತಿ ಪಾತ್ರವಾದ ನಾಯಿ ಇಂದು ಮೃತಪಟ್ಟಿದ್ದು, ಜಗ್ಗೇಶ್ ಅವರು ಕಂಬನಿ ಮಿಡಿದಿದ್ದಾರೆ.

Advertisment

ನಟ ಜಗ್ಗೇಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಒಂದು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಶ್ರೀ ಕೃಷ್ಣ ಹೇಳಿದಂತೆ ಒಂದು ದಿನ ಇದ್ದದ್ದು ಮತ್ತೊಂದು ದಿನ ಇರದು ನಶ್ವರ ಜಗತ್ತು ಎಂದು. ಇಂದು ರಾಯರದಿನ ರಾಯರಭಕ್ತನ ಪ್ರೀತಿಯ ಭೈರವ ಪ್ರಾಣ ಬಿಟ್ಟಿದ್ದಾನೆ. ಹೋಗಿ ಬಾ ಕಂದ. ಮುಂದಿನ ಜನ್ಮ ಅದ್ಭುತ ಜೀವ ನಿನಗೆ ಸಿಗುತ್ತದೆ ಮಾದೇವಿ ಮಮ್ಮಿ ನಿನ್ನ ನೋಡಲಾಗದೆ ಮಗುವಂತೆ ಅಳುತ್ತಿದ್ದಾಳೆ. ನನ್ನ ಕಣ್ಣೀರು ನಿಲ್ಲುತ್ತಿಲ್ಲ. ಕೋಮಲ್ ಇವನನ್ನ ಭೈರವ ದೇವರೆ ಎಂದು ನಂಬಿದ್ದ. ನಾವೆಲ್ಲರೂ ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಅಬ್ಬಾ.. ಹಿಮಪಾತಕ್ಕೂ ಜಗ್ಗದ ಲಲಿತ್ ಮಹಾರಾಜ ಸನ್ಯಾಸಿ; ಮೈ ಜುಮ್ಮೆನ್ನಿಸೋ ವಿಡಿಯೋ ವೈರಲ್‌!

Advertisment

ಜಗ್ಗೇಶ್ ಅವರ ಮನೆಯಿಲ್ಲಿದ್ದ ಭೈರವ ಅನ್ನೋ ಮುದ್ದಿನ ನಾಯಿ ಸಾವನ್ನಪ್ಪಿದೆ. ಈ ಶ್ವಾನವನ್ನು ಜಗ್ಗೇಶ್‌ ಅವರ ಅಕ್ಕನ ಮಗ ತಂದುಕೊಟ್ಟಿದ್ದಂತೆ. ಅಕ್ಕನ ಮಗನಿಗೆ ಅಮೆರಿಕಾದಲ್ಲಿ ಕೆಲಸ ಸಿಕ್ಕಿ ಜಗ್ಗೇಶ್ ಅವರ ಬಳಿ ಬಿಟ್ಟು ಹೋಗಿದ್ದರಂತೆ. ಜಗ್ಗೇಶ್ ಹಾಗೂ ಕೋಮಲ್ ಭೈರವನನ್ನು ಬಹಳ ಪ್ರೀತಿಸಿ ಜೋಪಾನವಾಗಿ ನೋಡಿಕೊಂಡಿದ್ದಾರೆ. ಪ್ರೀತಿಯ ನಾಯಿಗೆ ಕುಲದೇವರು ಭೈರವ ಎಂದು ಹೆಸರಿಟ್ಟಿದ್ದೆವು. ಇಂದು ಭೈರವ ಭೈರವನ ಬಳಿಯೇ ಹೋದ ಎನ್ನುತ್ತಾ ಜಗ್ಗೇಶ್ ಅವರು ನೋವಿನ ವಿದಾಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment