ದರ್ಶನ್‌ಗಾಗಿ ಹೋಮ.. ಕಲಾವಿದರ ಸಂಘದ ಪೂಜೆಯಲ್ಲಿ ಭಾಗಿಯಾದ ನಟ ಜಗ್ಗೇಶ್‌ ಬೇಸರ; ಏನಂದ್ರು?

author-image
admin
Updated On
ದರ್ಶನ್‌ಗಾಗಿ ಹೋಮ.. ಕಲಾವಿದರ ಸಂಘದ ಪೂಜೆಯಲ್ಲಿ ಭಾಗಿಯಾದ ನಟ ಜಗ್ಗೇಶ್‌ ಬೇಸರ; ಏನಂದ್ರು?
Advertisment
  • ಸ್ಯಾಂಡಲ್‌ವುಡ್‌ ಕಲಾವಿದರ ಸಂಘದಲ್ಲಿ ವಿಶೇಷ ಹೋಮ-ಹವನ!
  • ದರ್ಶನ್ ಅವರಿಗೆ ಒಳ್ಳೆಯದಾಗಲಿ ಅನ್ನೋ ಕಾರಣಕ್ಕೆ ಮಾಡಲಾಯ್ತಾ?
  • ಕಲಾವಿದರ ಸಂಘದ ಪೂಜೆಯಲ್ಲಿ ಭಾಗಿಯಾದ ನಟ ಜಗ್ಗೇಶ್ ಫುಲ್ ಗರಂ

ಕನ್ನಡ ಚಲನಚಿತ್ರ ರಂಗಕ್ಕೆ ಒಳ್ಳೆಯದಾಗಲಿ ಎಂದು ಕಲಾವಿದರ ಸಂಘ ಇಂದು ಹೋಮ-ಹವನ ನಡೆಸಿದೆ. ಕನ್ನಡ ಕಲಾವಿದರು ದೇವರ ಮೊರೆ ಹೋಗಿರೋದು ಒಂದು ವಿಶೇಷವಾದ್ರೆ ಈ ಹೋಮ-ಹವನ ವಿವಾದಕ್ಕೂ ಗುರಿಯಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಹೋಮ-ಹವನ ನಟ ದರ್ಶನ್ ಅವರಿಗೆ ಒಳ್ಳೆಯದಾಗಲಿ ಅನ್ನೋ ಕಾರಣಕ್ಕೆ ಮಾಡಲಾಗುತ್ತೆ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಕನ್ನಡ ಚಿತ್ರರಂಗದ ಹಿರಿಯ ನಟರು, ಕಲಾವಿದರು ಇದನ್ನ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ‘ನನ್ನ ಕೋಪಕ್ಕೆ ಬಲಿ ಆಗ್ಬೇಡಿ, ಹೇಳಿದಂತೆ ಮಾಡಿ’- ಜಗ್ಗೇಶ್, ದೊಡ್ಡಣ್ಣ ಮುಂದೆ ಚಿತ್ರರಂಗಕ್ಕೆ ನಾಗದೇವರು ವಾರ್ನಿಂಗ್!

ಸ್ಯಾಂಡಲ್‌ವುಡ್‌ ಕಲಾವಿದರ ಸಂಘದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗಾಗಿ ಹೋಮ ನಡೆದಿಲ್ಲ ಅಂತ ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ನಟ ಜಗ್ಗೇಶ್ ಅವರು ದರ್ಶನ್‌ಗಾಗಿ ಹೋಮ ನಡೆದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ಕನ್ನಡ ಇಂಡಸ್ಟ್ರಿಯ ಒಳಿತಿಗಾಗಿ ಮಾಡ್ತಿರೋ ಹೋಮ ಇದು.

publive-image

ನನಗೂ ಆ ರೀತಿಯ ಸುದ್ದಿ ಬಂದಿತ್ತು. ಆದರೆ ವಾಸ್ತವವೇ ಬೇರೆ. ದರ್ಶನ್‌ಗಾಗಿ ಮಾಡಿರೋ ಹೋಮ ಆಗಿದ್ದರೆ ನಾನು ಬರ್ತಾನೆ ಇರಲಿಲ್ಲ. ಅದು ಸುಳ್ಳು ಅಂತ ಗೊತ್ತಾದ ಮೇಲೆ ನಾನು ಇಲ್ಲಿಗೆ ನಾನು ಬಂದಿದ್ದೇನೆ ಎಂದು ಜಗ್ಗೇಶ್ ಅವರು ಗರಂ ಆಗಿಯೇ ಉತ್ತರಿಸಿದ್ದಾರೆ.

publive-image

ಇದನ್ನೂ ಓದಿ: ನಾಗದೇವರ ದರ್ಶನ.. ನೋಡ ನೋಡ್ತಿದ್ದಂಗೆ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಏನಿದರ ವಿಶೇಷ?

ಜೈಲಿಗೆ ಪ್ರಸಾದ ತೆಗೆದುಕೊಂಡು ಹೋದ ನಟರು!
ಕಲಾವಿದರ ಸಂಘದಲ್ಲಿ ನಡೆದ ಹೋಮ-ಹವನದ ಬಳಿಕ ಸ್ಯಾಂಡಲ್‌ವುಡ್ ನಟರು ಜೈಲಿನಲ್ಲಿರುವ ದರ್ಶನ್ ಅವರ ಭೇಟಿಗೆ ತೆರಳಿದ್ದಾರೆ. ಕಲಾವಿದರ ಸಂಘದ ಹೋಮ, ಹವನದಲ್ಲಿ ಭಾಗಿಯಾದ ನಟ ಅಭಿಷೇಕ್ ಅಂಬರೀಶ್, ಧನ್ವೀರ್ ಹಾಗೂ ಚಿಕ್ಕಣ್ಣ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದಾರೆ. ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ ಹವನ ನಡೆದಿದ್ದು, ಪ್ರಸಾದ ಪಡೆದ ಸ್ಯಾಂಡಲ್‌ವುಡ್ ನಟರು ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾರೆ.

ಅಭಿಷೇಕ್ ಅಂಬರೀಶ್, ಧನ್ವೀರ್, ಚಿಕ್ಕಣ್ಣ ಅವರು ದರ್ಶನ್ ಅವರ ಭೇಟಿ ಸಮಯಾವಕಾಶ ಕೇಳಿದ್ದು, ಜೈಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಸ್ಯಾಂಡಲ್‌ವುಡ್‌ ನಟರು ಕಲಾವಿದರ ಸಂಘದಲ್ಲಿ ನಡೆದ ಪೂಜೆಯ ಪ್ರಸಾದವನ್ನು ದರ್ಶನ್‌ಗೆ ನೀಡಿ ಚರ್ಚೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment