/newsfirstlive-kannada/media/post_attachments/wp-content/uploads/2025/07/actor-jaggesh4.jpg)
ದರ್ಶನ್ ಫ್ಯಾನ್ಸ್ ಅಂತ ಹೇಳಿಕೊಂಡು ಒಂದು ಹೆಣ್ಣಿನ ಬಗ್ಗೆ ಅಶ್ಲೀಲವಾಗಿ ಮಾತಾಡಿ ಸ್ಟಾರ್ ನಟನ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ರೇಣುಕಾಸ್ವಾಮಿ ಬದಲು ನಿನ್ನನ್ನೂ ಕೊ*ಲೆ ಮಾಡಬೇಕಿತ್ತು ಎಂದು ನಟಿ ರಮ್ಯಾಗೆ ದರ್ಶನ್ ಫ್ಯಾನ್ಸ್ ಪೇಜ್ನಿಂದ ಸಂದೇಶ ರವಾನೆ ಆಗಿತ್ತು.
ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!
ಹೀಗಾಗಿ ನಟಿ ರಮ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಿನ್ನೆ 43 ಇನ್ಸ್ಟಾ ಖಾತೆಗಳನ್ನ ಉಲ್ಲೇಖಿಸಿ ನಟಿ ರಮ್ಯಾ ದೂರು ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಎಫ್ಐಆರ್ನಲ್ಲಿ ಪ್ರಮೋದ್ ಗೌಡ A1 ಆದ್ರೆ ಉಳಿದವರು A2 ಆಗಿದ್ದಾರೆ. ಸೈಬರ್ ಕ್ರೈಮ್ ಹಾಗೂ ಐಟಿ ಕಾಯಿದೆ ಪ್ರಕಾರ ತನಿಖೆ ನಡೆಸುತ್ತಿದ್ದಾರೆ. ಆದ್ರೆ, ಇದರ ಬೆನ್ನಲ್ಲೇ ನಟ ಜಗ್ಗೇಶ್ ಅವರು ಹೆಸರನ್ನು ಉಲ್ಲೇಖಿಸದೇ ಬುದ್ಧಿ ಮಾತು ಹೇಳಿದ್ದಾರೆ.
80 ವರ್ಷದ ಇತಿಹಾಸವಿರೋ ಇಂಡಸ್ಟ್ರಿ ಹೆಸರು ಹಾಳು ಮಾಡ್ಬೇಡಿ. ಒಗಟ್ಟಾಗಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅನ್ಯಭಾಷಿಕರು ನಮ್ಮ ನೋಡಿ ನಗುವಂತಾಗಿದೆ. ಲೈಕ್, ಪ್ರಮೋಷನ್ನಿಂದ ಯಾರೂ ಬೆಳೆಯಲ್ಲ.. ಕ್ಷೇತ್ರಕ್ಕೆ ವಿಧೇಯರಾಗಿ ಕೆಲಸ ಮಾಡ್ಬೇಕು ಅಂತಾ ತಿಳಿವಳಿಕೆ ಹೇಳಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡ ನಟ ಜಗ್ಗೇಶ್ ಅವರು, ಕುಂಬಾರನಿಗೆ ವರ್ಷ ಒಡೆಯುವವನಿಗೆ ನಿಮಿಷ! 80 ವರ್ಷದ ಚಿತ್ರರಂಗ ಬೆಳೆಸಿ ಕೆಡವಬೇಡಿ! ಅವರವರು ಅವರ ಜೀವನದ ಮೇಲೆ ಗಮನಹರಿಸಿ ಇನ್ನೊಬ್ಬರ ತಂಟೆ ತಕರಾರು ಏಕೆ ಬೇಕು? ಕೆಣಕಿದರೆ ದ್ವೇಷ ನಕ್ಕರೆ ಸ್ನೇಹ ಅಲ್ಲವೆ! ಅನ್ಯಭಾಷಿಗರು ನಮ್ಮ ನೋಡಿ ನಗುತ್ತಿದ್ದಾರೆ.
ಕುಂಬಾರನಿಗೆ ವರ್ಷ ಒಡೆಯುವವನಿಗೆ ನಿಮಿಷ!80ವರ್ಷದ ಚಿತ್ರರಂಗ ಬೆಳೆಸಿ ಕೆಡವಬೇಡಿ!ಅವರವರು ಅವರ ಜೀವನದ ಮೇಲೆ ಗಮನಹರಿಸಿ ಇನ್ನೊಬ್ಬರ ತಂಟೆ ತಕರಾರು ಏಕೆ ಬೇಕು?ಕೆಣಕಿದರೆ ದ್ವೇಷ ನಕ್ಕರೆ ಸ್ನೇಹ ಅಲ್ಲವೆ!ಅನ್ಯಭಾಷಿಗರು ನಮ್ಮ ನೋಡಿ ನಗುತ್ತಿದ್ದಾರೆ.
ದಯಮಾಡಿ ಉಧ್ಯಮದ ಉದ್ಧಾರದ ಚಿಂತೆ ಮಾಡಿ ಪ್ರೇಕ್ಷಕರ ಸಂತೋಷ ಪಡಿಸುವ😍
ಸಿರಿಗನ್ನಡದ ಕಲಾಬಂಧು. pic.twitter.com/xRycS23f24— ನವರಸನಾಯಕ ಜಗ್ಗೇಶ್ (@Jaggesh2)
ಕುಂಬಾರನಿಗೆ ವರ್ಷ ಒಡೆಯುವವನಿಗೆ ನಿಮಿಷ!80ವರ್ಷದ ಚಿತ್ರರಂಗ ಬೆಳೆಸಿ ಕೆಡವಬೇಡಿ!ಅವರವರು ಅವರ ಜೀವನದ ಮೇಲೆ ಗಮನಹರಿಸಿ ಇನ್ನೊಬ್ಬರ ತಂಟೆ ತಕರಾರು ಏಕೆ ಬೇಕು?ಕೆಣಕಿದರೆ ದ್ವೇಷ ನಕ್ಕರೆ ಸ್ನೇಹ ಅಲ್ಲವೆ!ಅನ್ಯಭಾಷಿಗರು ನಮ್ಮ ನೋಡಿ ನಗುತ್ತಿದ್ದಾರೆ.
ದಯಮಾಡಿ ಉಧ್ಯಮದ ಉದ್ಧಾರದ ಚಿಂತೆ ಮಾಡಿ ಪ್ರೇಕ್ಷಕರ ಸಂತೋಷ ಪಡಿಸುವ😍
ಸಿರಿಗನ್ನಡದ ಕಲಾಬಂಧು. pic.twitter.com/xRycS23f24— ನವರಸನಾಯಕ ಜಗ್ಗೇಶ್ (@Jaggesh2) July 30, 2025
">July 30, 2025
ಲೈಕ್ಸ್ ಅಥವ ಪ್ರಮೋಷನ್ ಬೇಕು ಅಂದರೆ ಮೊಬೈಲ್ ಆನ್ ಮಾಡಿ ಮಾತಾಡಿದರೆ ನಾನು ಮೇಲೆ ಬರುವೆ ಎಂಬ ಭ್ರಮೆ ಹೆಚ್ಚಾಗಿದೆ ಹಾಗು ಇಂಥಹ ಕಾರ್ಯ ಕ್ಷಣಿಕ, ಜನ ಬೇಗ ಮರೆಯುತ್ತಾರೆ! ಅದರ ಬದಲು ನಿಮ್ಮ ಕೇತ್ರಕ್ಕೆ ವಿಧೇಯರಾಗಿ ಉತ್ತಮ ಕಾರ್ಯಮಾಡಿ ಜನ ವರ್ಷಗಳು ನಿಮ್ಮ ನೆನೆಯುತ್ತಾರೆ, ಹಿರಿಯರ ಶ್ರಮದ ಚಿತ್ರರಂಗ ಇಂದು ಆಡಿಕೊಳ್ಳುವರ ಗಿಳಿಪಾಠವಾಗಿದೆ! ಒಂದುಗಾದೆ. ದಯಮಾಡಿ ಉಧ್ಯಮದ ಉದ್ಧಾರದ ಚಿಂತೆ ಮಾಡಿ ಪ್ರೇಕ್ಷಕರ ಸಂತೋಷ ಪಡಿಸುವ ಸಿರಿಗನ್ನಡದ ಕಲಾಬಂಧು.
Life is beautiful.. ಮನುಷ್ಯರು ಸಾವಿರ ವರ್ಷ ಬದುಕೋಲ್ಲಾ!ನಾವು ಹುಡುಕಬೇಕಾದದ್ದು ಹಣ ಹೆಸರು ಅಲ್ಲಾ ನೆಮ್ಮದಿಯನ್ನ! ನೆಮ್ಮದಿ ಸಿಗೋದು ಹೋರಾಟ ದ್ವೇಷ ಜಗಳದಿಂದ ಅಲ್ಲಾ! ಪ್ರೀತಿಯಿಂದ. ಹಾಗಾಗಿ ದಿನ ಪ್ರೀತಿ ಹಾಗು ಪ್ರೀತಿಸುವ ಅಂಶ ಹುಡುಕಿ ನಗುತ್ತ ಸಂತೋಷದಿಂದ ಬಾಳಿ! ಇಂದಿನ ಸಾಮಾಜಿಕ ತಾಣ ಮೆನೆಗೆ ಮನಸ್ಸಿಗೆ ಬೆಂಕಿ ಹಚ್ಚುವ ತಾಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ