ಹೋಗಿ ಬಾ ಗೆಳೆಯ.. ಬ್ಯಾಂಕ್​ ಜನಾರ್ಧನ್ ಬಗ್ಗೆ ನಟ ಜಗ್ಗೇಶ್​ ಭಾವುಕ ನುಡಿ

author-image
Veena Gangani
Updated On
ಹೋಗಿ ಬಾ ಗೆಳೆಯ.. ಬ್ಯಾಂಕ್​ ಜನಾರ್ಧನ್ ಬಗ್ಗೆ ನಟ ಜಗ್ಗೇಶ್​ ಭಾವುಕ ನುಡಿ
Advertisment
  • 76ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಹಿರಿಯ ಹಾಸ್ಯ ನಟ
  • ಗೆಳೆಯನ ಸಾವಿಗೆ ಕಂಬನಿ ಮಿಡಿದ ನವರಸ ನಾಯಕ ಜಗ್ಗೇಶ್
  • ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ್‌ (76) ಅವರು ವಿಧಿವಶರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಟ ಬ್ಯಾಂಕ್ ಜನಾರ್ಧನ್ ಅವರು ಮಧ್ಯರಾತ್ರಿ 2.30ರ ಸುಮಾರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: 3 ಬಾರಿ ಹೃದಯಾಘಾತ.. 500ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದ ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ವಿಧಿವಶ

publive-image

ಬ್ಯಾಂಕ್‌ ಜನಾರ್ಧನ್‌ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕನ್ನಡ ಚಿತ್ರರಂಗವೇ ಶಾಕ್​ಗೆ ಒಳಗಾಗಿದೆ. ಅದರಲ್ಲೂ ಬ್ಯಾಂಕ್‌ ಜನಾರ್ಧನ್‌ ನಿಧನದ ವಿಚಾರ ತಿಳಿಯುತ್ತಿದ್ದಂತೆ ನವರಸ ನಾಯಕ ಜಗ್ಗೇಶ್ ಅವರು ಟ್ವೀಟ್​ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.


">April 14, 2025

ಆತ್ಮೀಯ ಗೆಳೆಯ ಜನಾರ್ಧನ್ ಹೋಗಿ ಬಾ. ನಾವಿಬ್ಬರು ಪಾತ್ರಕ್ಕಾಗಿ ಹಸಿದು ಅಲೆದು ಪಡೆದು ಗೆದ್ದವರು. ನಾನು ನಿನ್ನ ಚಿತ್ರದಲ್ಲಿ ಕರೆಯುತ್ತಿದ್ದ ಬಾಂಡ್ಲಿ ಫಾದರ್ ಪದ ನಿನ್ನ ಓಡನಾಟ ನೆನೆದು ಭಾವುಕನಾದೆ. ಆತ್ಮಕ್ಕೆ ಶಾಂತಿ ಅಂತ ಬರೆದುಕೊಂಡಿದ್ದಾರೆ.

publive-image

ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ ಸಂದರ್ಭದಲ್ಲಿ ನಟ ಜಗ್ಗೇಶ್​ ಜತೆ ಬ್ಯಾಂಕ್ ಜನಾರ್ಧನ್ ಹೆಚ್ಚು ಕಾಲ ಕಳೆದಿದ್ದರು. ಜಗ್ಗೇಶ್ ಬಹುತೇಕ ಚಿತ್ರಗಳಲ್ಲಿ ನಟಿಸಿರುವ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ. ಜಗ್ಗೇಶ್​​ಗೆ ತಂದೆಯಾಗಿ ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು. ಸೂಪರ್​ನನ್ ಮಗ, ತರ್ಲೆ ನನ್ ಮಗ ಚಿತ್ರದಲ್ಲಿ ತಂದೆಯಾಗಿ ನಟಸಿದ್ದರು. ಹಾಸ್ಯಕ್ಕೆ ಕನ್ನಡದಲ್ಲಿ ಮುಸರಿ ಕೃಷ್ಣಮೂರ್ತಿ, ನರಸಿಂಹರಾಜು ಬಳಿಕ ಅವರ ಸ್ಥಾನವನ್ನ ತುಂಬಿದ್ದರು. ಬ್ಯಾಂಕ್ ಜನಾರ್ಧನ್ ಅವರು ಸತತ 20 ವರ್ಷಗಳ ಕಾಲ ಕಾಮಿಡಿ ಪಾತ್ರಗಳಲ್ಲಿ ಬ್ಯುಸಿಯಾಗಿದ್ದರು. ಜಗ್ಗೇಶ್​ ಹಾಗೂ ಬ್ಯಾಂಕ್ ಜನಾರ್ಧನ್ ಅವಕಾಶಕ್ಕಾಗಿ ಬೆಂಗಳೂರಿನಲ್ಲಿ ಒಟ್ಟಿಗೆ ಓಡಾಡುತ್ತಿದ್ದರಂತೆ.

publive-image

ಜಗ್ಗೇಶ್ ಸಿನಿಮಾ ಬಂದರೆ ಬ್ಯಾಂಕ್ ಜನಾರ್ಧನ್ ಒಂದು ಪಾತ್ರ ಮೀಸಲಿಡಲಾಗುತ್ತಿತ್ತು. ಉಪೇಂದ್ರ, ಕೆವಿ ರಾಜು, ರವಿಚಂದ್ರನ್, ಎಸ್ ಮಹೇಂದರ್, ಪಣಿ ರಾಮಚಂದ್ರ, ಮಲ್ಲೇಶ್ ರಂತ ನಿರ್ದೇಶಕರ ಆಕ್ಷನ್ ಕಟ್​ಗೆ ನಟಿಸಿ ಸೈ ಎನಿಸಿಕೊಂಡಿದ್ದರು ನಟ ಬ್ಯಾಂಕ್ ಜನಾರ್ಧನ್. ಕನ್ನಡ ರಾಜ್ಯೋತ್ಸವ, ಅಣ್ಣಮ್ಮ ದೇವಿ, ಗಣೇಶ ಕಾರ್ಯಕ್ರಮಗಳಿಗೆ ತಮ್ಮದೇ ತಂಡದ ಮೂಲಕ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದರು. ಶಂಕರ್​ನಾಗ್ ಹಾಗೂ ಅನಂತ್​ನಾಗ್​ ಅಚ್ಚುಮೆಚ್ಚಿನ ನಟರಾಗಿದ್ದರು. ಮುಖ್ಯಮಂತ್ರಿ ಚಂದ್ರುಗೆ ಒಡನಾಡಿಯಾಗಿದ್ದರು. ಟೈಗರ್ ಪ್ರಭಾಕರ್​ಗೂ ಕೂಡ ಆತ್ಮೀಯರಾಗಿದ್ದರು ಬ್ಯಾಂಕ್ ಜನಾರ್ಧನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment