/newsfirstlive-kannada/media/post_attachments/wp-content/uploads/2025/07/actor-jaggesh.jpg)
ನಟ ದರ್ಶನ್ ಬೆನ್ನಲ್ಲೇ ಕೊಟ್ಟಿಯೂರು ದೇವಸ್ಥಾನಕ್ಕೆ ನವರಸ ನಾಯಕ ಜಗ್ಗೇಶ್ ಅವರು ಭೇಟಿ ಕೊಟ್ಟಿದ್ದಾರೆ. ಕೇರಳದ ಕೊಣ್ಣುರು ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನಟ ಜಗ್ಗೇಶ್ ತೆರಳಿದ್ದಾರೆ.
ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?
ವರ್ಷಕ್ಕೆ 30 ದಿನ ಮಾತ್ರ ತೆರೆದಿರುವ ಕೇರಳದ ಪುಣ್ಯಕ್ಷೇತ್ರಕ್ಕೆ ನಟ ಜಗ್ಗೇಶ್ ಭೇಟಿ ಕೊಟ್ಟು ವಿಶೇಷ ಪೂಜೆ ಪುನಸ್ಕಾರ ಮಾಡಿಸಿದ್ದಾರೆ. ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಹೋಗಿರೋ ವಿಡಿಯೋವನ್ನು ನಟ ಜಗ್ಗೇಶ್ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋ ಜೊತೆಗೆ ಶ್ರೀ ಕೊಟ್ಟಿಯೂರು ಶಿವನ ಆಲಯಕ್ಕೆ ಭೇಟಿ ನೀಡಿದ ಆಧ್ಯಾತ್ಮಿಕ ಕ್ಷಣ. ದಕ್ಷಬ್ರಹ್ಮನ ಶಿರಚ್ಛೇದ ಮಾಡಿದ ಶಿವನ ಅಂಶ ವೀರಭದ್ರನ ಐತಿಹಾಸಿಕ ಕ್ಷೇತ್ರ ಎಂಬ ದೃಡನಂಬಿಕೆಯ. ವರ್ಷಕ್ಕೆ 28ದಿನಗಳು ಮಾತ್ರ ಪೂಜಾ ಕಾರ್ಯ ನಡೆಯುತ್ತದೆ ಈ ಕ್ಷೇತ್ರದಲ್ಲಿ. ಹಿಂದೆ ಕಾಡಿನ ಸುತ್ತಮುತ್ತ ವಾಸಮಾಡುತ್ತಿದ್ದ ಜನರ ಆರಾಧನ ಕ್ಷೇತ್ರವಾಗಿತ್ತು. ಇಂದು ಶಬರಿಮಲೆ ಅಯ್ಯಪ್ಪನ ಆಲಯದಂತೆ ಪ್ರಸಿದ್ಧಿ ಪಡೆದಿದೆ. ನನ್ನ ಆತ್ಮೀಯ ಮಿತ್ರ ಕೇರಳ ರಾಜ್ಯದ (DIG) ಪೋಲಿಸ್ ಆಧಿಕಾರಿ ಶ್ರೀ ಯತೀಶ್ ಚಂದ್ರರವರು ನನ್ನ ಬರಮಾಡಿಕೊಂಡು ದರ್ಶನಕ್ಕೆ ಸಹಕಾರಿಯಾದರು ಅಂತ ಬರೆದುಕೊಂಡಿದ್ದಾರೆ.
View this post on Instagram
ಕೊಟ್ಟಿಯೂರು ಶಿವ ದೇವಸ್ಥಾನದ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪುರಾತನ ಹಾಗೂ ಪವಿತ್ರ ಕ್ಷೇತ್ರಗಳ ಪೈಕಿ ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನವೂ ಒಂದು. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ದೇವಸ್ಥಾನ ತೆರೆದಿರುವುದು ವರ್ಷಕ್ಕೆ 30 ದಿನಗಳು ಮಾತ್ರ. ಇದು ಶಿವ ತಪಸ್ಸು ಮಾಡಿದ ಪುಣ್ಯ ಸ್ಥಳ ಎಂಬ ನಂಬಿಕೆ ಇದೆ. ಈ ದೇವಾಲಯದ ದೊಡ್ಡ ವಿಶೇಷತೆಯೆಂದರೆ ಅದರ ವಾರ್ಷಿಕ ಉತ್ಸವ, ಇದನ್ನು ವೈಶಾಖಮೋತ್ಸವ ಎಂದು ಕರೆಯಲಾಗುತ್ತದೆ.
ಈ ದೇವಾಲಯದ ಶಿವಲಿಂಗವು ಸ್ವಯಂಭು ಅಂದರೆ ನೆಲದೊಳಗಿನಿಂದ ಸ್ವಯಂ ಪ್ರತ್ಯಕ್ಷವಾಗಿದ್ದು ಎಂದು ನಂಬಲಾಗಿದೆ. ನದಿಯ ದಡದಲ್ಲಿ ಅಕ್ಕರೆ ಕೊಟ್ಟಿಯೂರು ಮತ್ತು ಇಕ್ಕರೆ ಕೊಟ್ಟಿಯೂರು ಎಂಬ ಎರಡು ದೇವಾಲಯಗಳಿವೆ. ಅಕ್ಕರೆ ಕೊಟ್ಟಿಯೂರು ಶಿವನ ದೇವಾಲಯವಾಗಿದ್ದು, ವಾರ್ಷಿಕ ವೈಶಾಖ ಮಹೋತ್ಸವದ ಸಮಯದಲ್ಲಿ ವರ್ಷದಲ್ಲಿ 28 ದಿನಗಳು ಮಾತ್ರ ತೆರೆದಿರುತ್ತದೆ. ಕೊಟ್ಟಿಯೂರು ದೇವಸ್ಥಾನದಲ್ಲಿ 28 ದಿನಗಳ ಕಾಲ ನಡೆಯುವ ವೈಶಾಖಮೋತ್ಸವವು ದೇವರಿಗೆ ತುಪ್ಪ ಸ್ನಾನ ಮಾಡಿಸುವ ಮೂಲಕ ಪ್ರಾರಂಭವಾಗುತ್ತದೆ. ಇದನ್ನು ನೆಯ್ಯಟ್ಟಂ ಎಂದು ಕರೆಯಲಾಗುತ್ತದೆ. ವೈಶಾಖಮೋತ್ಸವವು ಭಗವಂತನಿಗೆ ತೆಂಗಿನ ನೀರಿನಿಂದ ಅಭಿಷೇಕ ಮಾಡುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ.
ಇದನ್ನೂ ಓದಿ: ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ; ಅಣ್ಣಾವ್ರ ಆಶೀರ್ವಾದ ಪಡೆದು ಹೇಳಿದ್ದೇನು..?
ಈ ಆಚರಣೆಯನ್ನು ಎಲೆನೀರಟ್ಟಂ ಎಂದು ಕರೆಯಲಾಗುತ್ತದೆ. ಕೊಟ್ಟಿಯೂರು ದೇವಾಲಯಗಳ ನವೀಕರಣವನ್ನು ಆದಿ ಗುರು ಶಂಕರಾಚಾರ್ಯರ ಕಾಲದಲ್ಲಿ ಮಾಡಲಾಯಿತು. ಜೊತೆಗೆ ಇಲ್ಲಿನ ವಾರ್ಷಿಕ ಉತ್ಸವವಾದ ವೈಶಾಖಮೋತ್ಸವದ ನಿಯಮಗಳನ್ನು ಸಹ ಶಂಕರಾಚಾರ್ಯರೇ ಮಾಡಿದ್ದಾರೆಂದು ಹೇಳಲಾಗುತ್ತದೆ. ಈ ವರ್ಷದ ಜೂನ್ 8 ರಿಂದ ಜುಲೈ 4ರವರೆಗೆ ಈ ದೇವಸ್ಥಾನ ಭಕ್ತರಿಗಾಗಿ ತೆರೆದಿದೆ. ಇಂತಹ ಸುಸಂದರ್ಭದಲ್ಲಿ ಕೊಟ್ಟಿಯೂರು ಶಿವ ದೇಗುಲಕ್ಕೆ ನಟ ಜಗ್ಗೇಶ್ ಭೇಟಿ ನೀಡಿದ್ದಾರೆ. ನೀರಿನಲ್ಲಿ ನಡೆದುಕೊಂಡು ಹೋಗಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸಿದ್ದಾರೆ.
ಈಗಾಗಲೇ ಕೊಣ್ಣುರು ಸಮೀಪದಲ್ಲೇ ಇರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ದರ್ಶನ್, ನಟ ಜಗ್ಗೇಶ್ ಅವರು ಭೇಟಿ ಕೊಟ್ಟಿದ್ದಾರೆ. ಈಗ ಮತ್ತೆ ಈ ದೇವಸ್ಥನಕ್ಕೂ ಕರ್ನಾಟಕದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ