/newsfirstlive-kannada/media/post_attachments/wp-content/uploads/2024/09/ntr1.jpg)
ತೆಲುವು ಚಿತ್ರರಂಗದ ಸ್ಟಾರ್​ ನಟ ಜೂನಿಯರ್​ ಎನ್​ಟಿಆರ್​ ಅಭಿನಯದ ದೇವರ ಚಿತ್ರ ಇಂದು ತೆರಳಗಪ್ಪಳಿಸಿದೆ. ಕರ್ನಾಟಕದ ಸೇರಿದಂತೆ ದೇಶ್ಯಾದ್ಯಂತ ಚಿತ್ರ ಬಿಡುಗಡೆಯಾಗಿದೆ. ಮುಂಜಾನೆಯಿಂದಲೇ ಚಿತ್ರಮಂದಿರದತ್ತ ಅಭಿಮಾನಿಗಳು ಲಗ್ಗೆ ಇಟ್ಟಿದ್ದಾರೆ. ಆದ್ರೇ ಈ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿದೆ.
ಟಾಲಿವುಡ್​​ನ ಯಂಗ್​ ಟೈಗರ್​​ ಜೂನಿಯರ್​ ಎನ್​ಟಿಆರ್​ ಅಭಿನಯದ ದೇವರ ಚಿತ್ರ ಇವತ್ತು ದೇಶಾದ್ಯಂತ ಬಿಡುಗಡೆಯಾಗಿದೆ.
ಇದನ್ನೂ ಓದಿ: BIGG BOSS ಹೊಸ ಪ್ರೊಮೋದಲ್ಲಿ ಅಡಗಿದೆ ಗುಟ್ಟು.. ಆ ಫೋಟೋದಲ್ಲಿರೋ ಸೆಲೆಬ್ರಿಟಿಗಳು ಯಾರು?
/newsfirstlive-kannada/media/post_attachments/wp-content/uploads/2024/09/ntr-1.jpg)
ಆರು ವರ್ಷಗಳ ಬಳಿಕ ನಟ ಜೂನಿಯರ್​ ಎನ್​ಟಿಆರ್​ ಸೋಲೋ ಹೀರೋ ಆಗಿ ತೆರೆ ಮೇಲೆ ಬಂದಿದ್ದು, ತಮ್ಮ ನೆಚ್ಚಿನ ಹೀರೋ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಮುಂಜಾನೇಯಿಂದಲೇ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ಆದ್ರೇ ಈ ವೇಳೆ ಕೆಲ ಅಹಿತಕರ ಘಟನೆಗಳು ವರದಿಯಾಗಿದೆ. ಗಡಿ ಜಿಲ್ಲೆ ಬಳ್ಳಾರಿಯಲ್ಲಿ ದೇವರ ಸಿನಿಮಾ ರಿಲೀಸ್​​ ಆಗಿದೆ. ನಗರದ ರಾಧಿಕ ಚಿತ್ರಮಂದಿರದಲ್ಲಿ ತಡರಾತ್ರಿ ಫ್ಯಾನ್ಸ್​​ ಶೋ ಆಯೋಜಿಸಲಾಗಿತ್ತು, ಆದ್ರೇ ತಡರಾತ್ರಿಯಿಂದಲೇ ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್​ ಮುಂದೆ ಜಮಾಯಿಸಿದ್ರು. ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಥಿಯೇಟರ್​​​​​​​​​ ಗೇಟ್​​ ಮುರಿದು ಅವಾಂತರ ಸೃಷ್ಟಿಯಾಗಿದೆ. ಇದ್ದಷ್ಟೇ ಅಲ್ಲದೇ ಕೆಲ ಅಭಿಮಾನಿಗಳು ಟಿಕೆಟ್​​​​​ ಖರೀದಿಸದೇ ಚಿತ್ರಮಂದಿರಕ್ಕೆ ನುಗ್ಗಿ ಹುಚ್ಚಾಟ ಮೆರೆದಿದ್ದಾರೆ.
/newsfirstlive-kannada/media/post_attachments/wp-content/uploads/2024/09/ntr2.jpg)
ಸುದ್ದಿ ತಿಳಿದು ತಕ್ಷಣವೇ ರಾಧಿಕ ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ಬಳ್ಳಾರಿ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಒಂದು ತಾಸಿನ ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ರು. ಆಂಧದ್ರದಲ್ಲಿ ಥಿಯೇಟರ್​ ಮುಂದೆ ಅಳವಡಿಸಿದ್ದ ಜೂನಿಯರ್​ ಎನ್​ಟಿಆರ್​​ ಕಟೌಟ್​ ಧಗಧಗನೇ ಹೊತ್ತಿ ಉರಿದಿದೆ. ಹೈದ್ರಾಬಾದ್​​ ನಗರದ ಹಿಮ್ಮಾಯತ್​​ ನಗರದ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ದೇವರ ಸಿನಿಮಾ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚಣೆ ಮಾಡ್ತಿದ್ರು. ಈ ವೇಳೆ ಆಕಸ್ಮಿಕವಾಗಿ ಕಟೌಟ್​​ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣ ಸುಟ್ಟು ಹೋಗಿದೆ.
కడపలో ఎన్టీఆర్ అభిమానుల మీద విరిగిన కూటమి ప్రభుత్వ పోలిసుల లాఠీ! #Devara#NTR#Kadapa#UANowpic.twitter.com/qRk5VtuYYK
— ఉత్తరాంధ్ర నౌ! (@UttarandhraNow)
కడపలో ఎన్టీఆర్ అభిమానుల మీద విరిగిన కూటమి ప్రభుత్వ పోలిసుల లాఠీ! #Devara#NTR#Kadapa#UANowpic.twitter.com/qRk5VtuYYK
— ఉత్తరాంధ్ర నౌ! (@UttarandhraNow) September 27, 2024
">September 27, 2024
ಮತ್ತೊಂದೆಡೆ, ದೇವರ ಸಿನಿಮಾ ನೋಡಲು ಬಂದ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದ ದರ್ಘಟನೆ ನಡೆದಿದೆ. ಆಂಧ್ರಪ್ರದೇಶದ ಕಡಪದ ಥಿಯೇಟರ್​ವೊಂದರಲ್ಲಿ ಅಭಿಮಾನಿಗಳಿಗಾಗಿ ಸ್ಪೇಷಲ್​ ಏರ್ಪಡಿಸಲಾಗಿತ್ತು. ಸ್ಪೆಷಲ್ ಶೋಗೆ ಬಂದಿದ್ದ ಮಸ್ತಾನ್ ಸಿನಿಮಾ ನೋಡ್ತಿದ್ದಂತೆ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾದ್ರು. ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/09/ntr3.jpg)
ಇನ್ನು, ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರಲ್ಲಿ ನೂಕುನುಗ್ಗಲು ಉಂಟಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಥಿಯೇಟರ್ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕೆಲವೆಡೆ ಅಭಿಮಾನಿಗಳು ಮಿತಿಮೀರಿ ವರ್ತಿಸಿದ್ದು, ಥಿಯೇಟರ್​​​ನಲ್ಲಿ ಭಾರಿ ಗದ್ದಲ ಶುರುವಾಗಿ ಶೋಗಳು ಕ್ಯಾನ್ಸಲ್​​​ ಕೂಡ ಆಗಿವೆ. ಒಟ್ಟಾರೆ ಕಳೆದೊಂದು ವಾರದಿಂದಲೇ ದೇವರ ಸಿನಿಮಾ ಟಿಕೆಟ್​​ ಎಲ್ಲೆಡೆ ಸೋಲ್ಡ್​ ಔಟ್​ ಆಗಿದ್ದು, ಹೀಗಾಗಿ ಮೊದಲ ದಿನವೇ ದೇವರ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್​​ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us