newsfirstkannada.com

ಜನಸೇವೆಗಾಗಿ ರಾಜಕೀಯಕ್ಕೆ ಧುಮುಕಿದ K ಶಿವರಾಮ್​; ಆ ಒಂದು ಕಾರಣಕ್ಕೆ ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಿದ್ರು!

Share :

Published February 29, 2024 at 6:17pm

    ಬಡ ಜನರ ಸೇವೆಗೆ ರಾಜಕೀಯಕ್ಕೆ ಧುಮುಕಿದ ಶಿವರಾಮ್​

    ಲೋಕ ಚುನಾವಣೆ ಎದುರಿಸಿದ್ದ ಮಾಜಿ ಐಎಎಸ್​ ಅಧಿಕಾರಿ

    ಐಎಎಸ್​, ಸಿನಿಮಾ, ರಾಜಕೀಯ.. ಶಿವರಾಮ್ ದಾರಿಯೇ ವಿಭಿನ್ನ

ಐಎಎಸ್​ ಎಂಬ ಪ್ರತಿಷ್ಠಿತ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಸಿನಿಮಾದಲ್ಲೂ ಶಿವರಾಮ್​ ಕಾಣಿಸಿಕೊಂಡರು. 9ಕ್ಕೂ ಹೆಚ್ಚು ಸಿನಿಮಾ ಮಾಡಿ ನಾಯಕ ಎಂದೆನಿಸಿಕೊಂಡರು. ಆ ಬಳಿಕ ಬಡ ಜನರ ಸೇವೆಗೆ ಇಳಿಯಬೇಕು ಎಂದೆನಿಸಿಕೊಂಡ ಶಿವರಾಮ್​ ರಾಜಕೀಯದತ್ತ ಧುಮುಕಿದರು.

ಶಿವರಾಮ್​ ಕಾಂಗ್ರೆಸ್​, ಜೆಡಿಎಸ್​ ಪಕ್ಷದ ಬಳಿಕ ಬಿಜೆಪಿಗೆ ಪಾದಾರ್ಪಣೆ ಮಾಡಿದರು. ಜನಸೇವೆ ಜನಾರ್ಧನ ಸೇವೆ ಎಂದು ತಿಳಿದ ಅವರು ತಮ್ಮೂರಿನ ಅಭಿವೃದ್ಧಿಗೆ ಶ್ರಮವಹಿಸಿದರು. ಆದರೆ ಇವರ ರಾಜಕೀಯ ಜೀವನ ಹೇಗಿತ್ತು? ಲೋಕಸಭಾ ಚುನಾವಣೆ ಎದುರಿಸಿದ ಬಗೆ ಇವೆಲ್ಲದ ಬಗ್ಗೆವ ಮಾಹಿತಿ ಇಲ್ಲಿದೆ.. ಓದಿ.

ರಾಜಕೀಯದಲ್ಲೂ ಶಿವರಾಮ್​ ಸಂಚಲನ

ಶಿವರಾಮ್​ ಸರ್ಕಾರಿ ಕೆಲಸ, ಸಿನಿಮಾದ ಬಳಿಕ ರಾಜಕೀಯದತ್ತ ಒಲವು ಬೆಳೆಸಿ ಪ್ರಯಾಣ ಮಾಡಿದ್ದರು. 2013ರಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನಿವೃತ್ತರಾದ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ಸೇರಿದರು. 2014ರಲ್ಲಿ ಜನತಾ ದಳ ಸದಸ್ಯರಾಗಿ ಕಾಣಿಸಿಕೊಂಡರು. ಆ ಬಳಿಕ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದರು. ಬಿಜಾಪುರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಆ ಚುನಾವಣೆಯಲ್ಲಿ ರಮೇಶ್​ ಜಿಗಜಿಣಗಿ ವಿರುದ್ಧ ಸೋತರು.

2014ರಲ್ಲಿ ಡಾ. ಜಿ ಪರಮೇಶ್ವರ್​ ಅವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮತ್ತು ದಲಿತ ನಾಯಕ ಉಪಮುಖ್ಯಮಂತ್ರಿಯಾಗಬೇಕೆಂಬ ಬೆಂಬಲದೊಂದಿಗೆ ಅವರು ಮತ್ತೆ ಕಾಂಗ್ರೆಸ್​ ಸೇರಿದರು. ಆದರೆ ಕಾಂಗ್ರೆಸ್​ ಪಕ್ಷ ಅಂದು ಈ ವಿಚಾರದಲ್ಲಿ ವಿಫಲವಾದ ಕಾರಣ ಶಿವರಾಮ್​ ಅವರು ಬಿಜೆಪಿಗೆ ಪಾದಾರ್ಪಣೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನಸೇವೆಗಾಗಿ ರಾಜಕೀಯಕ್ಕೆ ಧುಮುಕಿದ K ಶಿವರಾಮ್​; ಆ ಒಂದು ಕಾರಣಕ್ಕೆ ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಿದ್ರು!

https://newsfirstlive.com/wp-content/uploads/2024/02/Shivaram-5.jpg

Load More