ಕಮಲ್ ಹಾಸನ್‌ಗೆ ನಿರಾಸೆ.. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಥಗ್‌ ಲೈಫ್ ಚಿತ್ರತಂಡಕ್ಕೆ ಹಿನ್ನಡೆ

author-image
admin
Updated On
‘ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ’ ಕಮಲ್ ಹಾಸನ್​ಗೆ ಹೈಕೋರ್ಟ್ ಜಡ್ಜ್ ತರಾಟೆ
Advertisment
  • ಕನ್ನಡಿಗರ ಬಳಿ ಕ್ಷಮೆಯಾಚಿಸಲು ನಿರಾಕರಿಸಿರುವ ಕಮಲ್ ಹಾಸನ್
  • ಕರ್ನಾಟಕದಲ್ಲಿ ಪೊಲೀಸ್ ರಕ್ಷಣೆಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ
  • ಕ್ಷಮೆ ಕೇಳಿದ್ದರೆ ಮುಗಿದೇ ಹೋಗುತ್ತಿತ್ತು ಅಲ್ವಾ ಎಂದಿದ್ದ ಹೈಕೋರ್ಟ್

ಕನ್ನಡಿಗರನ್ನ ಕೆರಳಿಸಿ ಕ್ಷಮೆಯಾಚಿಸಲು ನಿರಾಕರಿಸಿರುವ ನಟ ಕಮಲ್ ಹಾಸನ್ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಥಗ್‌ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವರ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆಗೆ ನಿರಾಕರಿಸಿದೆ.

ಕಮಲ್ ಹಾಸನ್ ಅಭಿನಯದ ಥಗ್‌ ಲೈಫ್ ಸಿನಿಮಾ ಕಳೆದ ಜೂನ್ 5ರಂದು ವರ್ಲ್ಡ್ ವೈಡ್‌ ರಿಲೀಸ್ ಆಗಿತ್ತು. ಆದರೆ ಕನ್ನಡಿಗರ ಹೋರಾಟ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಡುಗಡೆಗೆ ಅನುಮತಿ ಸಿಕ್ಕಿರಲಿಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾ ಬಿಡುಗಡೆಯಾದ್ರೆ ಬಂದ್ ಮಾಡುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದರು.

publive-image

ಕನ್ನಡ ಸಂಘಟನೆಗಳ ಹೋರಾಟದ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಅವರ ಚಿತ್ರತಂಡ ಹೈಕೋರ್ಟ್‌ಗೆ ಭದ್ರತೆ ನೀಡುವಂತೆ ಮನವಿ ಮಾಡಿತ್ತು. ಆದರೆ ಹೈಕೋರ್ಟ್ ಕ್ಷಮೆ ಕೇಳಿದ್ದರೆ ಮುಗಿದೇ ಹೋಗುತ್ತಿತ್ತು ಅಲ್ವಾ ಎಂದು ವಿಚಾರಣೆಯನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ: ಕ್ಷಮೆ ಕೇಳೋ ಬದಲು ಕಮಲ್ ಹಾಸನ್ ಮತ್ತೆ ಉದ್ಧಟತನ.. ಕನ್ನಡ ಫಿಲ್ಮ್‌ ಚೇಂಬರ್‌ಗೆ ಪತ್ರ; ಹೇಳಿದ್ದೇನು? 

ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿರುವುದರಿಂದ ಥಗ್‌ ಲೈಫ್ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮತ್ತು ಕರ್ನಾಟಕದಲ್ಲಿ ಪೊಲೀಸ್ ರಕ್ಷಣೆಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ತಕ್ಷಣವೇ ತಮ್ಮ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಥಗ್‌ ಲೈಫ್ ಚಿತ್ರತಂಡಕ್ಕೆ ಹೈಕೋರ್ಟ್‌ಗೆ ಹೋಗುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment