ಕ್ಷಮೆ ಕೇಳಲ್ಲ, ಕ್ಷಮೆ ಕೇಳಲ್ಲ.. ಮತ್ತೊಮ್ಮೆ ನಿರಾಕರಿಸಿದ ನಟ ಕಮಲ್ ಹಾಸನ್; ಈಗ ಏನಂದ್ರು?

author-image
admin
Updated On
ಕ್ಷಮೆ ಕೇಳಲ್ಲ, ಕ್ಷಮೆ ಕೇಳಲ್ಲ.. ಮತ್ತೊಮ್ಮೆ ನಿರಾಕರಿಸಿದ ನಟ ಕಮಲ್ ಹಾಸನ್; ಈಗ ಏನಂದ್ರು?
Advertisment
  • ಕನ್ನಡಿಗರ ಆಕ್ರೋಶದ ಬಳಿಕವೂ ಹಠ ಬಿಡದ ಕಮಲ್ ಹಾಸನ್!
  • ತಮ್ಮ ಹೇಳಿಕೆಯಿಂದ ಹಿಂದೆ ಸರಿಯಲು ನಿರಾಕರಿಸಿದ ತಮಿಳು ನಟ
  • ಕ್ಷಮೆಯಾಚಿಸಲು ಪಟ್ಟು ಹಿಡಿದಿರುವವರಿಗೆ ಉತ್ತರ ಕೊಟ್ಟ ಕಮಲ್ ಹಾಸನ್

ಚೆನ್ನೈ: ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ 2 ದಿನಗಳಿಂದ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಪ್ರತಿಭಟನೆ ನಡೆಸಿ ಕ್ಷಮೆಯಾಚಿಸಲು ಪಟ್ಟು ಹಿಡಿದಿದ್ದಾರೆ.

ಕನ್ನಡಿಗರ ತೀವ್ರ ಆಕ್ರೋಶದ ಬಳಿಕವೂ ನಟ ಕಮಲ್ ಹಾಸನ್ ಅವರು ಮತ್ತೊಮ್ಮೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಚೆನ್ನೈನಲ್ಲಿ ಇಂದು ಮಾತನಾಡಿದ ಕಮಲ್ ಹಾಸನ್, ನಾನು ಕ್ಷಮೆ ಕೇಳಲ್ಲ. ನಾನು ತಪ್ಪು ಮಾಡಿದ್ದರೆ ಮಾತ್ರ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.


">May 30, 2025

ಕಮಲ್ ಈಗ ಏನಂದ್ರು? 

ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಾನು ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳವನ್ನು ನಿಜವಾಗಲೂ ಪ್ರೀತಿಸುತ್ತೇನೆ. ನಾನು ಏನಾಂದ್ರು ತಪ್ಪು ಮಾಡಿದ್ರೆ ಕ್ಷಮೆ ಕೇಲುತ್ತೇನೆ. ನಾನು ತಪ್ಪೇ ಮಾಡಿಲ್ಲ. ಬೆದರಿಕೆಗಳಿಂದ ನಾನು ತಬ್ಬಿಬ್ಬು ಆಗಿಲ್ಲ. ತಮ್ಮ ಹೇಳಿಕೆಯಿಂದ ಹಿಂದೆ ಸರಿಯಲು, ಕರ್ನಾಟಕ, ಕನ್ನಡಿಗರ ಕ್ಷಮೆ ಕೇಳಲು ಕಮಲ್ ಹಾಸನ್ ಅವರು ಮತ್ತೊಮ್ಮೆ ನಿರಾಕರಿಸಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ ಕ್ರೇಜಿಸ್ಟಾರ್​ಗೆ ಸರ್​ಪ್ರೈಸ್​ ಕೊಟ್ಟ ಮಾಲಾಶ್ರೀ, ಸುಧಾರಾಣಿ; ಕನಸುಗಾರನ ಬಗ್ಗೆ ಹೇಳಿದ್ದೇನು? 

ಈ ಕನ್ನಡ ಭಾಷಾ ವಿವಾದದಲ್ಲಿ ಸುದ್ದಿಯಾಗಿರುವ ನಟ ಕಮಲ್ ಹಾಸನ್ ಅವರು ಇದೇ ವೇಳೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಸಿಎಂ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment