Advertisment

ಕ್ಷಮೆ ಕೇಳಲ್ಲ.. ಕನ್ನಡ, ತಮಿಳು ಭಾಷಾ ವಿವಾದಕ್ಕೆ ಕಮಲ್ ಹಾಸನ್ ಹೊಸ ಟ್ವಿಸ್ಟ್; ಹೇಳಿದ್ದೇನು?

author-image
admin
Updated On
ಕಮಲ್‌ ಸಿನಿಮಾ ರಿಲೀಸ್ ಆದ್ರೆ ಸ್ಕ್ರೀನ್ ಹರಿದು ಹಾಕ್ತೇವೆ; ಮಾಲ್‌ ಮುಖ್ಯಸ್ಥರಿಗೆ ಕನ್ನಡ ಸಂಘಟನೆಗಳ ವಾರ್ನಿಂಗ್‌
Advertisment
  • ಕನ್ನಡಿಗರ ಹೋರಾಟ, ಆಕ್ರೋಶಕ್ಕೆ ಮಣಿಯದ ಕಮಲ್ ಹಾಸನ್
  • ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳು ಅರ್ಹರಲ್ಲ ಎಂದ ಕಮಲ್
  • ಇತಿಹಾಸಕಾರರು ನನಗೆ ಏನು ಕಲಿಸಿದ್ದಾರೋ ಅದನ್ನೇ ಹೇಳಿದ್ದೇನೆ

ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಅನ್ನೋ ಹೇಳಿಕೆಯನ್ನು ನಟ ಕಮಲ್ ಹಾಸನ್ ಅವರು ಸಮರ್ಥಿಸಿಕೊಂಡಿದ್ದಾರೆ. ಕನ್ನಡಿಗರ ಹೋರಾಟ, ಆಕ್ರೋಶಕ್ಕೆ ಮಣಿಯದ ಕಮಲ್ ಹಾಸನ್ ಅವರು ಇದು ನನ್ನ ವೈಯಕ್ತಿಕ ವಿವರಣೆ. ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳು ಅರ್ಹರಲ್ಲ ಎಂದು ತಮ್ಮ ಹೇಳಿಕೆಯನ್ನು ವಿರೋಧಿಸುವವರಿಗೆ ತಿರುಗೇಟು ಕೊಟ್ಟಿದ್ದಾರೆ.

Advertisment

ಇದನ್ನೂ ಓದಿ: ಕನ್ನಡಕ್ಕೆ 2,500 ವರ್ಷದ ಇತಿಹಾಸವಿದೆ.. ಕಮಲ್ ಹಾಸನ್ ಹೇಳಿಕೆಗೆ ನಟ ಜಗ್ಗೇಶ್ ಖಡಕ್ ತಿರುಗೇಟು 

ಥಗ್‌ ಲೈಫ್‌ ಸಿನಿಮಾ ಪ್ರಮೋಷನ್ ವೇಳೆ ಕಮಲ್ ಹಾಸನ್ ಅವರು ತಮ್ಮ ವಿವಾದಾತ್ಮಕ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Advertisment


">May 28, 2025

ಕಮಲ್ ಸಮರ್ಥನೆ ಏನು?
ನಾನು ಹೇಳಿರೋದು ಪ್ರೀತಿಯಿಂದ ಹೇಳಿದ್ದೇನೆ. ಇತಿಹಾಸಕಾರರು ನನಗೆ ಏನು ಕಲಿಸಿದ್ದಾರೋ ಅದನ್ನೇ ಹೇಳಿದ್ದೇನೆ. ನಮ್ಮಲ್ಲಿ ಮೆನನ್ ಮುಖ್ಯಮಂತ್ರಿಗಳಾಗಿದ್ದಾರೆ. ರೆಡ್ಡಿಯರು ಮುಖ್ಯಮಂತ್ರಿಗಳಾಗಿದ್ದಾರೆ. ಕನ್ನಡಿಗ ಅಯ್ಯಂಗಾರ ಕೂಡ ಮುಖ್ಯಮಂತ್ರಿಗಳಾಗಿದ್ದಾರೆ. ಚೆನ್ನೈನಲ್ಲಿ ಸಮಸ್ಯೆಗಳಾದಾಗ ಕರ್ನಾಟಕ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಕನ್ನಡಿಗರು ನನಗೆ ಬೆಂಬಲ ಕೊಟ್ಟಿದ್ದಾರೆ. ನೀವು ನಮ್ಮಲಿಗೆ ಬನ್ನಿ ಎಂದಿದ್ರು. ನನ್ನ ಹಿಡ್ಕೊಂಡು ರಾಜಕಾರಣಿಗಳು, ಸಿನಿಮಾದವರು ಯಾರೇ ಆಗಲಿ ಭಾಷೆ ಬಗ್ಗೆ ಮಾತನಾಡೋದಿಕ್ಕೆ ಅರ್ಹರಲ್ಲ. ಇದನ್ನ ಇತಿಹಾಸಕಾರರಿಗೆ ಬಿಡೋಣ. ಪ್ರೀತಿ ಎಂದಿಗೂ ಕ್ಷಮೆ ಕೇಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment