/newsfirstlive-kannada/media/post_attachments/wp-content/uploads/2024/02/kamal-hasan.jpg)
ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಅನ್ನೋ ಹೇಳಿಕೆಗೆ ಬದ್ಧವಾಗಿರೋ ನಟ ಕಮಲ್ ಹಾಸನ್ ಅವರು ಮತ್ತೆ ಉದ್ಧಟತನ ಮೆರೆದಿದ್ದಾರೆ. ಕನ್ನಡಿಗರ ಹೋರಾಟಕ್ಕೆ ಮಣಿದು ಕ್ಷಮೆ ಕೇಳಲು ನಿರಾಕರಿಸಿರುವ ಅವರು, ಕನ್ನಡ ಫಿಲ್ಮ್ ಚೇಂಬರ್​ಗೆ ಪತ್ರ ಬರೆದು ಸ್ಪಷ್ಟನೆ ಕೊಟ್ಟಿದ್ದಾರೆ.
ವಿವಾದಾತ್ಮಕ ಹೇಳಿಕೆಯ ಬಳಿಕ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನಟ ಕಮಲ್ ಹಾಸನ್​ಗೆ ಕ್ಷಮೆ ಕೇಳುವಂತೆ ಒತ್ತಾಯಿಸಿ ಪತ್ರ ಬರೆದಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಸ್ಪಷ್ಟನೆ ಕೊಟ್ಟಿರುವ ಕಮಲ್ ಹಾಸನ್, ಕನ್ನಡ ನಾಡು, ನುಡಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ.
/newsfirstlive-kannada/media/post_attachments/wp-content/uploads/2025/06/Kamal-Hassan-On-Kannada-tamil-5.jpg)
ಥಗ್ ಲೈಫ್ ಚಿತ್ರದ ಇವೆಂಟ್​ನಲ್ಲಿ ನಾನು ಡಾ.ರಾಜ್​ಕುಮಾರ್ ಕುಟುಂಬದ ಬಗ್ಗೆ ಗೌರವದಿಂದ ಮಾತನಾಡಿದ್ದೇನೆ. ಆದ್ರೆ ನನ್ನ ಮಾತುಗಳನ್ನ ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಉದ್ದೇಶ ಆ ಕುಟುಂಬ ಮತ್ತು ಕನ್ನಡದ ಬಗ್ಗೆ ಪ್ರೀತಿ ವ್ಯಕ್ತಪಡಿಸಬಹುದಾಗಿತ್ತು.
ಇದನ್ನೂ ಓದಿ: ‘ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ’ ಕಮಲ್ ಹಾಸನ್​ಗೆ ಹೈಕೋರ್ಟ್ ಜಡ್ಜ್ ತರಾಟೆ
ತಮಿಳಿನಂತೆ ಕನ್ನಡ ಭಾಷೆಗೂ ಶ್ರೀಮಂತವಾದ ಇತಿಹಾಸ ಮತ್ತು ಸಾಂಸ್ಕ್ರತಿಕ ಹಿನ್ನೆಲೆ ಇದೆ. ಕನ್ನಡ ಭಾಷಿಕರ ಬಗ್ಗೆ ನನಗೆ ಮೊದಲಿನಿಂದಲೂ ಅಪಾರವಾದ ಗೌರವ ಇದೆ. ಸಿನಿಮಾ ಜನರನ್ನು ಬೆಸೆಯುವ ಸೇತುವೆ ಆಗಬೇಕು. ಒಡೆಯಬಾರದು. ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ. ಕನ್ನಡಿಗರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us