ನಾಗದೇವತೆ ಸಿನಿಮಾ ಖ್ಯಾತಿಯ ಖಳನಟ
ಹಠಾತ್ ನಿಧನದಿಂದ ಚಿತ್ರರಂಗಕ್ಕೆ ಆಘಾತ
ಕಜನ್ ಖಾನ್ ಸಾವಿಗೆ ಸಂತಾಪ ಸೂಚಿಸಿದ ಸಿನಿ ತಾರೆಯರು
ಕನ್ನಡ, ತಮಿಳು, ಮಲಯಾಳಂ ಸಿನಿಮಾರಂಗದಲ್ಲಿ ಖ್ಯಾತ ಖಳನಟನಾಗಿ ಗುರುತಿಸಿಕೊಂಡಿದ್ದ ಕಜನ್ ಖಾನ್ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ಹೃದಯಾಘಾತಕ್ಕೆ ತುತ್ತಾಗಿ ನಿಧನರಾಗಿದ್ದಾರೆ.
ಕಜನ್ ಖಾನ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲೂ ಹೆಚ್ಚಾಗಿ ಖಳನಟನಾಗಿಯೇ ಗುರುತಿಸಿಕೊಂಡಿದ್ದರು. 1992ರಲ್ಲಿ ‘ಸೆಂತಮಿಜ್ ಪಾಟ್ಟು’ ಎಂಬ ತಮಿಳು ಸಿನಿಮಾದ ಮೂಲಕ ಬಣ್ಣ ಹಚ್ಚಿದರು. ಆ ಬಳಿಕ 1993 ಮಲಯಾಳಂನತ್ತ ಪಾದಾರ್ಪಣೆ ಮಾಡಿದರು.
ಕನ್ನಡ ಸಿನಿಮಾದಲ್ಲೂ ಕಜನ್ ಖಾನ್ ನಟಿಸಿದ್ದಾರೆ. 1999ರಲ್ಲಿ ‘ಹಬ್ಬ’ ಸಿನಿಮಾದ ಮೂಲಕ ಕಾಣಿಸಿಕೊಂಡರು. ಆ ಬಳಿಕ ‘ನಾಗದೇವತೆ’ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದಾರೆ.
ಖಳನಟ ಕಜನ್ ಖಾನ್ ನಿಧನವು ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ. ಇವರ ಹಠಾತ್ ನಿಧನವು ಸಿನಿ ತಾರೆಯರ ಬೇಸರಕ್ಕೆ ಕಾರಣವಾಗಿದೆ. ಅನೇಕ ತಾರೆಯರು ಇವರ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ