/newsfirstlive-kannada/media/post_attachments/wp-content/uploads/2025/01/kiccha-sudeep1.jpg)
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್.. ಕಳೆದ 11 ಸೀಸನ್ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ ಕಿಚ್ಚ ಸುದೀಪ್. ಆದ್ರೆ ಬಿಗ್ಬಾಸ್ ಸೀಸನ್ 11 ನಡೆಯುತ್ತಿದ್ದಾಗಲೇ ಕಿಚ್ಚ ಸುದೀಪ್ ಅವರು ವಿದಾಯ ಹೇಳಿದ್ದರು. ಇದು ನನ್ನ ಕೊನೆಯ ಶೋ ಅಂತ ಹೇಳಿ ಶಾಕ್ ಕೊಟ್ಟಿದ್ದರು. ಈ ಮಾತು ಅಭಿಮಾನಿಗಳ ಕಿವಿಗೆ ಬಿಳುತ್ತಿದ್ದಂತೆ ತೀವ್ರವಾಗಿ ಬೇಸರಗೊಂಡಿದ್ದರು.
ಇದನ್ನೂ ಓದಿ: ಅಣ್ಣಾವ್ರ ಮನೆಯಲ್ಲಿ ಅಮೃತಾಧಾರೆ ಸೀರಿಯಲ್ ನಟ ರಾಜೇಶ್ ನಟರಂಗ್; ಏನಾದ್ರೂ ವಿಶೇಷ ಉಂಟಾ?
ಅಲ್ಲದೇ ಮುಂದಿನ ಸೀಸನ್ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡ್ಬೇಕು, ಇಲ್ಲವಾದರೇ ನಾವು ಬಿಗ್ಬಾಸ್ ನೋಡೋದಿಲ್ಲ ಅಂತ ಅಭಿಮಾನಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದೀಗ ಬಿಗ್ಬಾಸ್ ಸೀಸನ್ 12 ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ಬಾರಿ ಬಿಗ್ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ ಅನ್ನೋದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಹೋಸ್ಟ್ ಆಗಿ ವಾಪಸ್ ಬರ್ತಾರಾ? ಅಥವಾ ಇಲ್ವಾ ಎಂಬ ಡೌಟ್ ವೀಕ್ಷಕರಿಗೆ ಕಾಡುತ್ತಿದೆ.
ವಾಹಿನಿ ಕಡೆಯಿಂದ ಎಷ್ಟೇ ಮನವೊಲಿಸುವ ಪ್ರಯತ್ನ ನಡೆದಿದ್ರೂ ಕಿಚ್ಚ ಒಪ್ಪಿರಲಿಲ್ಲ. ಆದ್ರೀಗ ಬಿಗ್ ಬಾಸ್ ಸೀಸನ್ 12 ಆರಂಭವಾಗುವ ಸನಿಹದಲ್ಲಿದ್ದು, ಕಿಚ್ಚ ಸುದೀಪ್ ಬಿಗ್ಬಾಸ್ ವೇದಿಕೆಗೆ ಕಂಬ್ಯಾಕ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಅಲ್ಲದೇ ಕಲರ್ಸ್ ವಾಹಿನಿಗೆ ಒಂದಷ್ಟು ಷರತ್ತುಗಳನ್ನು ವಿಧಿಸಿದ್ದು, ಅದೆಲ್ಲದಕ್ಕೂ ಓಕೆ ಅಂದರೇ ಮಾತ್ರ, ಕಿಚ್ಚ ಸುದೀಪ್ ಹೋಸ್ಟ್ ಮಾಡಲು ಸಿದ್ಧರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ