ಧ್ರುವ ಅಭಿನಯದ KD ಸಿನಿಮಾ ಬಗ್ಗೆ ಬಿಗ್ ಅಪ್​ಡೇಟ್ಸ್​.. ಸುದೀಪ್ ನಟಿಸೋದು ​ನಿಜನಾ..?

author-image
Veena Gangani
Updated On
ಧ್ರುವ ಅಭಿನಯದ KD ಸಿನಿಮಾ ಬಗ್ಗೆ ಬಿಗ್ ಅಪ್​ಡೇಟ್ಸ್​.. ಸುದೀಪ್ ನಟಿಸೋದು ​ನಿಜನಾ..?
Advertisment
  • ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆ.ಡಿ ಸಿನಿಮಾ
  • ಜೋಗಿ ಪ್ರೇಮ್ ನಿರ್ದೇಶನದಲ್ಲಿ ನಟಿಸಬೇಕಿದ್ದ ಕಿಚ್ಚ ಸುದೀಪ್
  • ಕೆ.ಡಿ ಚಿತ್ರದಲ್ಲಿ ಕಿಚ್ಚನ ಗ್ರ್ಯಾಂಡ್ ಎಂಟ್ರಿಗೆ ಪ್ಲಾನ್ ನಡೆದಿತ್ತು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೆ.ಡಿ ಸಿನಿಮಾದಿಂದ ಆಚೆ ಬಂದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ದಿ ವಿಲನ್’ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಅಭಿನಯಿಸಿದ್ದರು.

ಇದನ್ನೂ ಓದಿ: Yoga Day: ನೀವು ಸ್ಲಿಮ್​​ ಅಂಡ್​ ಫಿಟ್​ ಆಗಿ ಕಾಣಬೇಕೇ? ಯೋಗಾಸನದಿಂದ ಇರೋ ಲಾಭಗಳೇನು?

publive-image

ಇದಾದ ಬಳಿಕ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಕೆ.ಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಅವರು ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಧ್ರುವ ಸರ್ಜಾ ನಾಯಕನಾಗಿರೋ ನಟಿಸಿರುವ ಈ ಸಿನಿಮಾದಲ್ಲಿ ಕಿಚ್ಚನ ಗ್ರ್ಯಾಂಡ್ ಎಂಟ್ರಿಗೆ ಬಿಗ್ ಪ್ಲಾನ್ ನಡೆದಿದೆ. ವಿಕ್ರಂ‌ ಸಿನಿಮಾದ ರೋಲೆಕ್ಸ್ ಪಾತ್ರದಂತೆ ಕಿಚ್ಚ ಎಂಟ್ರಿಗೆ ಪ್ಲಾನ್ ಆಗಿತ್ತು ಅಂತಾ ಹೇಳಲಾಗಿತ್ತು.

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಕೆ.ಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿಲ್ಲ. ಕಾರಣಾಂತರಗಳಿಂದ ಸುದೀಪ್ ಅವರು ಈ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗಿದೆ. ಬಹು ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆಗ್ತಿರುವ ಈ ಚಿತ್ರವು ಜುಲೈ 11 ರಂದು ತೆರೆಗೆ ಬರಲು ಸಿದ್ಧತೆ ನಡೆಸ್ತಿದೆ. ಕನ್ನಡ, ಹಿಂದಿಯಲ್ಲಿ ಮೂಡಿಬರ್ತಿರುವ ಈ ಚಿತ್ರವನ್ನು KVN ಪ್ರೊಡೆಕ್ಷನ್ ನಿರ್ಮಾಣ ಮಾಡ್ತಿದೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ, ಸಂಗೀತ ಸಂಯೋಜನೆ ಮಾಡ್ತಿದ್ದು, ಹಿರಿಯ ಕಲಾವಿದರಾದ ರಮೇಶ್ ರವಿಂದ್, ರವಿಚಂದ್ರನ್, ಬಾಲಿವುಡ್ ಸ್ಟಾರ್ ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡ ಈ ಚಿತ್ರದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment