/newsfirstlive-kannada/media/post_attachments/wp-content/uploads/2024/10/kiccha3.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಬಹಳ ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಬಿಗ್ಬಾಸ್ ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಇಂದು ಶನಿವಾರ ಆಗಿರುವುದರಿಂದ ಕಿಚ್ಚ ಸುದೀಪ್ ಅವರು ವಾರದ ಕತೆಗೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು.
ಇದನ್ನೂ ಓದಿ:BBK11: ಬಿಗ್ ಬಾಸ್‌ಗೆ ಸವಾಲು.. ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಕೊಟ್ರು ಸಖತ್ ಮಾಂಜಾ!
ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ಸಖತ್ ಸ್ಟೈಲಿಶ್ ಆಗಿ ಬಿಗ್ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಕಿಚ್ಚ ಸುದೀಪ್ ಬರಿಗಾಲಿನಲ್ಲಿ ವೇದಿಕೆಗೆ ಬಂದು ಅಚ್ಚರಿ ಮೂಡಿಸಿದ್ದರು. ವೇದಿಕೆಗೆ ಬಂದಿದ್ದ ಕಿಚ್ಚ ಸುದೀಪ್ ಅವರು ಮೊದಲು ಹೇಳಿದ್ದ ಮಾತು.. ಅಮ್ಮ ಓಕೆನಾ ಗ್ರೇ ಕಲರ್. ಬರಿಗಾಲು ನವರಾತ್ರಿ ಅಂತ ಹೇಳಿ ಶೋ ಶುರು ಮಾಡಿದ್ದಾರೆ.
ಹೌದು, ಶಾರದೀಯ ನವರಾತ್ರಿಯನ್ನು ಅತ್ಯಂತ ಮಂಗಳಕರ ಹಬ್ಬವೆಂದು ಪರಿಗಣಿಸಲಾಗುತ್ತದೆ. ಒಂಬತ್ತು ದಿನಗಳು ಮತ್ತು ರಾತ್ರಿಗಳವರೆಗೆ ಇರುತ್ತದೆ. ನವರಾತ್ರಿ ನಿಮಿತ್ತ ಕಿಚ್ಚ ಸುದೀಪ್ ಅವರು ಬೂದು ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಬಂದಿದ್ದಾರೆ. ಜೊತೆಗೆ ವೇದಿಕೆಗೆ ಚಪ್ಪಲಿಯನ್ನು ಹಾಕಿಕೊಳ್ಳದೇ ಬಂದಿದ್ದಾರೆ. ಹಾಗೇ ಚಪ್ಪಲಿ ಹಾಕಿಕೊಳ್ಳದೇ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ