newsfirstkannada.com

×

10+1 ಸೀಸನ್.. ಬಿಗ್​​ಬಾಸ್​ಗೆ ದಿಢೀರ್‌ ಗುಡ್​​ ಬೈ ಹೇಳಿದ್ದೇಕೆ ಕಿಚ್ಚ ಸುದೀಪ್‌? 10 ಕಾರಣಗಳು ಇಲ್ಲಿವೆ!

Share :

Published October 14, 2024 at 8:39pm

    ಶೋ ಕ್ವಿಟ್​ ಮಾಡೋದಕ್ಕೆ ಕಿಚ್ಚನ ಬಳಿ ಇತ್ತು ಮತ್ತೊಂದು ಪ್ರಬಲ ಕಾರಣ

    ಎಲ್ಲಾ ಚೆನ್ನಾಗಿ ನಡೀತಿರೋವಾಗ ಸುದೀಪ್​ರಿಂದ ಈ ನಿರ್ಧಾರ ಏಕೆ?​

    ಬಿಗ್​​ಬಾಸ್​​ ಸೀಸನ್ ಶುರುವಾಗೋ ಟೈಮಲ್ಲೇ ಕೊಟ್ಟಿದ್ದ ಸುಳಿವುಗಳೇನು?

ಕಿಚ್ಚ ಸುದೀಪ್ ಬಿಗ್​​ಬಾಸ್​ಗೆ ಗುಡ್​​ಬೈ ಹೇಳಿದ್ದಾರೆ. ತಾವೇ ಖುದ್ದಾಗಿ ಟ್ವೀಟ್​ ಮಾಡೋ ಮೂಲಕ ನನ್ನದು ಇದೇ ಲಾಸ್ಟ್​ ಸೀಸನ್​ ಅಂತಾ ಹೇಳಿ ಶಾಕ್​ ಕೊಟ್ಟಿದ್ದಾರೆ. ಕಿಚ್ಚನ ಈ ದಿಢೀರ್​ ನಿರ್ಧಾರ ​ ನೋಡಿದವರ ತಲೇಲಿ ಹತ್ತಲವು ಪ್ರಶ್ನೆಗಳು ಗಿರಕಿಹೊಡೆಯೋದಕ್ಕೆ ಶುರುವಾಗಿವೆ. ಅಷ್ಟಕ್ಕೂ, ಎಲ್ಲಾ ಚೆನ್ನಾಗಿ ನಡೀತಿರೋವಾಗ ಸುದೀಪ್​ ಆ ಶೋಗೆ ಬಾಯ್​ ಹೇಳಿದ್ದೇಕೆ? ಈ ಬಾರಿಯ ಬಿಗ್​​ಬಾಸ್​​ ಸೀಸನ್ ಶುರುವಾಗೋ ಟೈಮಲ್ಲೇ ಕೊಟ್ಟಿದ್ದ ಸುಳಿವುಗಳೇನು? ಎಂಬುವುದರ ಬಗ್ಗೆ ಈ ಸ್ಟೋರಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: BBK11: ಐಶ್ವರ್ಯ VS ಅನುಷಾ ಮಧ್ಯೆ ಶುರುವಾಯ್ತು ಗದ್ದಲ; ಬಿಗ್​ಬಾಸ್​ ​ಮನೆಯಲ್ಲಿ ‘ಬಕೆಟ್‌’ ಹಿಡಿಯೋದ್ಯಾರು?

ಬಿಗ್​​ಬಾಸ್​ ಅಂದ ಕೂಡಲೇ ಕಣ್ಮುಂದೆ ಕಾಣೋದು ಕಿಚ್ಚ ಸುದೀಪ್. ಅಷ್ಟರ ಮಟ್ಟಿಗೆ ಅಭಿನಯ ಚಕ್ರವರ್ತಿ ಬಿಗ್​​ಬಾಸ್​​ನ​​ ಆವರಿಸಿಕೊಂಡಿದ್ದಾರೆ. ಬರೋಬ್ಬರಿ 11 ವರ್ಷ, 11 ಸೀಸನ್​. 2013ರಿಂದ ಇಲ್ಲಿಯವರೆಗೆ ಕಿಚ್ಚ ಈ ಕಾರ್ಯಕ್ರಮದಲ್ಲಿ ಬರೀ ನಿರೂಪಕರಾಗಿ ಕಾಣ್ತಿಲ್ಲ. ಬಿಗ್​​ಬಾಸ್​​ ಅನ್ನೋ ಕುರುಕ್ಷೇತ್ರಕ್ಕೆ ಶ್ರೀಕೃಷ್ಣನೇ ಆಗಿಬಿಟ್ಟಿದ್ದಾರೆ. ಒಂದೇ ಒಂದು ದಿನ ಕಿಚ್ಚ ಬಿಗ್​​ಬಾಸ್​​ನಲ್ಲಿ ಕಾಣಿಸದಿದ್ರೂ ಚಡಪಡಿಸೋ ಫ್ಯಾನ್ಸ್​ ಇದ್ದಾರೆ. ಕಿಚ್ಚನಿಲ್ಲದ ಪಂಚಾಯ್ತಿ ಫಜೀತಿ ಆಗುತ್ತೆ. ಸುದೀಪನಿಲ್ಲದ ಸಂಡೇಗಳು ಬೋರ್​​ ಆಗ್ತವೆ. ಬಿಗ್​ಬಾಸ್​​ ಕಾರ್ಯಕ್ರಮದ ಆತ್ಮವೇ ಸುದೀಪ್ ಅನ್ನೋ ಮಟ್ಟಿಗೆ ಆ ಕಾರ್ಯಕ್ರಮದ ಜೀವಾಳವೇ ಆಗಿಬಿಟ್ಟಿದ್ದಾರೆ. ಇಂಥಾ ಹೊತ್ತಿನಲ್ಲೇ ಕಿಚ್ಚನ ಒಂದು ಟ್ವೀಟ್​​ ವಿದಾಯದ ಸಂದೇಶದಂತೆ ಕಾಣುತ್ತಿದೆ.

ಬಿಗ್​​ಬಾಸ್ ಸೀಸನ್ 11ಕ್ಕೆ ನೀವೆಲ್ಲಾ ತೋರಿರೋ ರೆಸ್ಪಾನ್ಸ್​ಗೆ ಥ್ಯಾಂಕ್ಸ್​. ಈ ಶೋಗೆ ಮತ್ತು ನನಗೆ ನೀವೆಲ್ಲರೂ ತೋರಿದ ಪ್ರೀತಿ ಎಂಥಾದ್ದು ಅಂತಾ ಟಿವಿಆರ್​ ನಂಬರ್​ಗಳೇ ಹೇಳುತ್ತಿವೆ. 10+1 ವರ್ಷಗಳ ಉತ್ತಮ ಪ್ರಯಾಣವಿದು. ಹಾಗೆಯೇ ನಾನು ಮುಂದೇನು ಮಾಡ್ಬೇಕು ಅನ್ನೋದನ್ನ ನಿರ್ಧರಿಸಲು ಸರಿಯಾದ ಸಮಯ. ಬಿಗ್ ಬಾಸ್‌ ಶೋನ ನಿರೂಪಕನಾಗಿ ಇದು ನನ್ನ ಕೊನೇ ಸೀಸನ್. ನನ್ನ ಈ ನಿರ್ಧಾರವನ್ನು ಕಲರ್ಸ್ ಕನ್ನಡ ವಾಹಿನಿ, ಇಷ್ಟು ವರ್ಷಗಳಿಂದ ಬಿಗ್ ಬಾಸ್ ಶೋ ಫಾಲೋ ಮಾಡುತ್ತಿರುವವರು ಗೌರವಿಸುತ್ತಾರೆ ಅಂತಾ ನಂಬಿದ್ದೇನೆ. ಈ ಸೀಸನ್​ನ ಸೂಪರ್ ಆಗಿ ಮಾಡೋಣ. ನಾನೂ ಕೂಡ ನಿಮ್ಮನ್ನ ರಂಜಿಸಲು ಮರೆಯಲ್ಲ.

– ಕಿಚ್ಚ ಸುದೀಪ್

ಇದೊಂದೇ​​ ಟ್ವೀಟ್​ ಅಕ್ಷರಶಃ ಬಿರುಗಾಳಿ ಹೊತ್ತಿಸಿದೆ. ಕಿಚ್ಚ ಬಿಗ್​​ಬಾಸ್​​ಗೆ ವಿದಾಯ ಹೇಳಿದ್ದಾರೆ ಅನ್ನೋ ಚರ್ಚೆ ಹುಟ್ಟು ಹಾಕಿದೆ. ಖುದ್ದು ಸುದೀಪ್ ತಾವಾಗಿಯೇ ತಮ್ಮದೇ ಎಕ್ಸ್​​ ಖಾತೆಯಲ್ಲಿ ಬರೆದುಕೊಂಡಿದ್ದು, ಇದು ನನ್ನ ಕೊನೇ ಸೀಸನ್ ಅಂತಾ ಹೇಳೋ ಮೂಲಕ ಗುಡ್​ಬೈ ಹೇಳಿದ್ದಾರೆ. ಅಷ್ಟಕ್ಕೂ ಸುದೀಪ್ ಏಕಾಏಕಿ ಇಂಥದ್ದೊಂದು ಮೆಸೇಜ್​​ ಮೂಲಕ ಮಾಂಜಾ ಕೊಟ್ರಾ? ಕಿಚ್ಚನಿಗೆ ಏನಾಯ್ತು? ಯಾಕಿಂಥಾ ನಿರ್ಧಾರ? ಅನ್ನೋ ಹತ್ತಾರು ಪ್ರಶ್ನೆಗಳು ಎದ್ದಿವೆ. ಅಸಲಿಗೆ ಖುದ್ದು ಸುದೀಪ ಬಿಗ್​ಬಾಸ್​​ ಸೀಸನ್ 11ರ ಲಾಂಚ್​​ಗೂ ಮುಂಚಿನ ಪ್ರೆಸ್​ಮೀಟ್​​ನಲ್ಲೇ ಮಹತ್ವದ ಕಾರಣಗಳನ್ನು ಕೊಟ್ಟಿದ್ದರು.

ಕಾರಣ 1: ಈ ಸೀಸನ್​​​ ಮುಂಚೆಯೇ ಮಾಡಲ್ಲ ಅಂದಿದ್ರಾ?

ಸೆಪ್ಟೆಂಬರ್​ 23ರಂದು ಬಿಗ್​​ಬಾಸ್​​ ಸೀಸನ್ 11ರ ಲಾಂಚ್​​ಗೂ ಮುಂಚೆ ಪ್ರೆಸ್​​ ಮೀಟ್ ಮಾಡಿದ್ದರು ಸುದೀಪ್​. ಈ ಟೈಮಲ್ಲಿ ಬಿಗ್​​ಬಾಸ್​​ ಟೀಮ್​​ ಜೊತೆ ಕುಳಿತಿದ್ದ ಸುದೀಪ್​​ಗೆ ನ್ಯೂಸ್​​ ಫಸ್ಟ್​​ ವರದಿಗಾರ​ ನೇರವಾಗಿಯೇ ಒಂದು ಪ್ರಶ್ನೆ ಕೇಳಿದ್ರು. ಈ ಪ್ರಶ್ನೆಗೆ ಕಿಚ್ಚ ಉತ್ತರಿಸುತ್ತಲೇ ಬಿಗ್​​ಬಾಸ್​​ ಇಷ್ಟವಿರ್ಲಿಲ್ಲ ಅಂದಿದ್ರು. ಕಿಚ್ಚನ ಈ ಮಾತುಗಳನ್ನ ಕೇಳಿದ್ರೆ ಈ ಸುದೀಪ್​ಗೆ ಈ ಸೀಸನ್​ ಶುರುವಾಗೋ ಮುಂಚೆಯೇ ಶೋ ಹೋಸ್ಟ್​ ಮಾಡೋದಕ್ಕೆ ಅಷ್ಟೇನು ಇಂಟರೆಸ್ಟ್​ ಇರಲಿಲ್ಲ ಅನ್ನೋ ಅನುಮಾನ ಹುಟ್ಟುತ್ತೆ. ಬಟ್, ಆ ರೀತಿಯ ಫೀಲಿಂಗ್​ ಬರೋದಕ್ಕೆ ಕಿಚ್ಚನ ಬಳಿ ಮತ್ತೊಂದು ಪ್ರಬಲ ಕಾರಣ ಇತ್ತು.

ಕಾರಣ 2: ಸಿನಿಮಾ ಬಗ್ಗೆ ಹೆಚ್ಚಿನ ಗಮನ ಹರಿಸುವುದು

ಸುದೀಪ್​​ರವರ ಚಿತ್ರಗಳು ಸರಿಯಾಗಿ ರಿಲೀಸ್ ಆಗ್ತಿಲ್ಲ. ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡ್ತಾರೆ ಸುದೀಪ್​. ಅಷ್ಟೇ ಅಲ್ಲ, ಸೂಪರ್​​ ಸ್ಟಾರ್ ಅನಿಸಿಕೊಂಡಿರೋ ಸುದೀಪ್​ ಆಗಾಗ ಸಿನಿಮಾ ಮಾಡ್ದೇ ಇದ್ರೆ ಸ್ಟಾರ್​ಡಮ್​ನ ಉಳಿಸಿಕೊಳ್ಳೋದು ಕಷ್ಟ. ಜೊತೆಗೆ, ಹಲವು ವರ್ಷಗಳ ಹಿಂದೆ ಯಾರೋ ಆಡಿದ್ದ ಮಾತುಗಳು ಕಿಚ್ಚನನ್ನು ಬೇಸರಗೊಳಿಸಿದ್ದವು. ಹಾಗಾಗಿಯೇ, ಕಿರುತೆರೆ ಮೇಲೆ ದಶಕಗಳ ಕಾಲ ಮೆರೆದು ಸುದೀಪ್​​ಗೆ ಸಿನಿಮಾ ಬಗ್ಗೆ ಹೆಚ್ಚಿನ ಗಮನ ತೋರುವ ಮನಸ್ಸಾಗಿತ್ತು. ಇದನ್ನೇ ಕಿಚ್ಚ ಕೂಡ ಹೇಳಿಕೊಂಡಿದ್ರು. ಆ ಮಾತುಗಳು ಮುಖಕ್ಕೆ ಹೊಡೆದಂತೆ ಇತ್ತು. ಕಿಚ್ಚನ ಬಿಗ್​ಬಾಸ್​​ ಬಗ್ಗೆ ಹೇಳೋ ಫ್ಯಾನ್ಸ್​ಗೆ, ಕಿಚ್ಚನ ಕ್ರಿಕೆಟ್​​ ಬಗ್ಗೆ ಮಾತಾಡೋ ಅಭಿಮಾನಿಗಳಿಗೆ, ಕಿಚ್ಚನ ಸಿನಿಮಾ ಬಗ್ಗೆಯೇ ಕ್ಲಾರಿಟಿ ಇಲ್ಲ ಅನ್ನೋದಾರೇ ಅದು ನಟನಾಗಿ ನನಗೂ ಬೇಸರದ ಸಂಗತಿ ಅನ್ನೋ ಸೂಕ್ಷ್ಮ ವಿಚಾರವನ್ನು ಹಂಚಿಕೊಂಡಿದ್ದರು. ಇದೇ ಕಾರಣಕ್ಕೇ ಬಿಗ್​​ಬಾಸ್​​ ಇನ್ನು ಸಾಕು ಅನ್ನೋ ಸುಳಿವು ನೀಡಿದ್ದರು.

ಕಾರಣ 3 : ಇಡೀ ರಾತ್ರಿ ಶೂಟಿಂಗ್, ಸಿನಿಮಾಕ್ಕೆ ಟೈಮ್ ಇರಲ್ಲ!

ಸುದೀರ್ಘ 10 ವರ್ಷ ಕಾಲ ಅನ್​​ಸ್ಟಾಪೇಬಲ್ ಅನ್ನೋ ರೀತಿಯಲ್ಲೇ ಬಿಗ್​ಬಾಸ್​​ ನಡೆಸಿಕೊಟ್ಟ ಸುದೀಪ್​​​ಗೆ ಸಿನಿಮಾ ವಿಷಯಕ್ಕೆ ಬಿಗ್​​ಬಾಸ್​​ ಸಹ ಅಡ್ಡಿ ಆಗ್ತಿತ್ತು ಅನ್ನೋ ಸೂಕ್ಷ್ಮ ಸಂಗತಿಯನ್ನೂ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ, ಎಷ್ಟೆಲ್ಲಾ ಒತ್ತಡಗಳ ಮಧ್ಯೆ ಸುದೀಪ್ ಬಿಗ್​ಬಾಸ್​​ ಹಾಗೂ ಸಿನಿಮಾ ಮಾಡ್ತಿದ್ರು ಅನ್ನೋ ಕಾರಣ ಕೊಟ್ಟಿದ್ದಾರೆ. ಇಲ್ಲಿ ಸುದೀಪ್ ಬಿಗ್​ಬಾಸ್​​​ಗೆ ವಿದಾಯ ಹೇಳೋದಕ್ಕೆ ಒತ್ತಡವೂ ಕಾರಣ ಅನ್ನೋ ಸುಳಿವನ್ನ ಖುದ್ದು ಸುದೀಪ್ ನೀಡಿದ್ರು. ಶೋ​ ಶುರುವಾದ್ರೆ ಸುದೀಪ್​​ಗೆ ವಾರದಲ್ಲಿ 4 ದಿನ ಮಾತ್ರ ಉಳೀತಿತ್ತು. ಇನ್ನುಳಿದ ಮೂರು ದಿನಗಳು ಬಿಗ್​ಬಾಸ್​​ ಶೂಟಿಂಗ್​ನಲ್ಲೇ ಬ್ಯುಸಿ ಆಗ್ತಿದ್ರು. ಶನಿವಾರ, ಭಾನುವಾರಗಳ ವ್ಯತ್ಯಾಸವೂ ಗೊತ್ತಾಗದಷ್ಟು ಒತ್ತಡದಲ್ಲಿ ರಾತ್ರಿ ಹಗಲು ಶೂಟಿಂಗ್​​ನಲ್ಲಿ ಭಾಗಿ ಆಗ್ತಿದ್ರು ಸುದೀಪ್.

ಕಾರಣ 4 : 10 ವರ್ಷಗಳ ರಂಜನೆ, ಸಿನಿಮಾಗೆ ಕೋವಿಡ್​ ಹೊಡೆತ!

ಕಿಚ್ಚ ಕನ್ನಡ ಇಂಡಸ್ಟ್ರಿ ಬಗ್ಗೆ ಚಿಂತಿಸುತ್ತಾರೆ. ಕೋವಿಡ್​​ ಬಳಿಕ ಕನ್ನಡ ಚಿತ್ರೋದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಹೇಗಾದ್ರೂ ಮಾಡಿ ಬಹುದೊಡ್ಡ ಸಕ್ಸಸ್ ಹಾಗೂ ಚೈತನ್ಯವನ್ನು ತುಂಬಬೇಕು ಅಂತ ಶಂಕರ್​​ನಾಗ್ ರೀತಿ ಕನಸ್ಸು ಕಂಡಿದ್ರು. ಹಾಗಾಗಿಯೇ ನೇರವಾಗಿ ಕಲರ್ಸ್​​ ಕನ್ನಡ ಜೊತೆ ಬೇರೊಬ್ಬರೊಂದಿಗೆ ಹೋಗಿ ಅನ್ನೋ ಸಂದೇಶವನ್ನೇ ನೀಡಿದ್ರಂತೆ. ಹತ್ತು ವರ್ಷವಾಯ್ತು, ಸಾಧ್ಯವಾದರೇ ಮತ್ತೊಬ್ಬರೊಂದಿಗೆ ಕಾರ್ಯಕ್ರಮ ಮಾಡಿಸಿ ಅನ್ನೋ ಮಾತನ್ನು ಹೇಳಿದ್ದು ನಿಜ. ಹಾಗಂತ ಯಾವುದೋ ವ್ಯತ್ಯಾಸ ನನಗೂ ಕಲರ್ಸ್​ ಕನ್ನಡಕ್ಕೂ ಇದೆ ಅಂತಲ್ಲ. ನನ್ನನ್ನು ಸದಾ ಕಂಫರ್ಟಬಲ್ ಆಗಿ ಇರಿಸುತ್ತಾರೆ ಅನ್ನೋ ಮೂಲಕ ಕಿಚ್ಚ ಸ್ಪಷ್ಟವಾಗಿ ಹೇಳಿಕೊಂಡಿದ್ದರು.

ಕಾರಣ 5: 11 ವರ್ಷಗಳ ಏಕತಾನತೆ, ರೀಟೇಕ್ ಇಲ್ಲದ ಶೂಟಿಂಗ್!

ಸುದೀಪ್ ಹೇಳಿಕೇಳಿ ನಿರ್ದೇಶಕರ ನಟ. ಖುದ್ದು ನಿರ್ದೇಶಕರಾಗಿ ಸ್ಮಾರ್ಟ್​​ ಆಗಿ ಯೋಚಿಸೋ ಸುದೀಪ್ ಕಾರಣಕ್ಕೇ ಬಿಗ್​ಬಾಸ್​​​ನ ವೀಕೆಂಡ್​ ಶೋಗಳು ಸಖತ್​​ ಟಿಆರ್​ಪಿ ತರೋದು. ಈ ವಿಚಾರಕ್ಕೆ ಬಂದರೇ ಸುದೀಪ್​​ಗೆ 11 ವರ್ಷಗಳ ಏಕತಾನತೆಯ ಬೇಸರವೂ ಇದೆ. ಹಾಗಂತ ಈ ಕ್ಷಣಕ್ಕೂ ರೀಟೇಕ್ ಇಲ್ಲದೇ ಶೂಟಿಂಗ್ ಮಾಡ್ತಿದ್ದಾರೆ. ಅದಕ್ಕಾಗಿಯೇ ಸಾಕಷ್ಟು ಹೋಮ್ ವರ್ಕ್ ಮಾಡಿಕೊಳ್ಳುತ್ತಾರೆ. ಇದೆಲ್ಲವೂ ಶಿಸ್ತುಗಾರ ಸುದೀಪ್​​ರನ್ನು ಚೌಕಟ್ಟಿನ ಇಕ್ಕಟ್ಟಿನಲ್ಲಿ ಸಿಕ್ಕಿಸುತ್ತಲೇ ಇವೆ. ಹೀಗೆ ಪ್ರತಿ ಹಂತದಲ್ಲೂ ಸಹ ಸುದೀಪ್​​ ಪಾಲಿಗೆ ಬಿಗ್​​ಬಾಸ್​​ ಅನ್ನೋ ಚಿಕ್ಕ ಮಗುವನ್ನುಅತ್ಯಂತ ಜತನದಿಂದ ಕಾಪಾಡೋ ಕೆಲಸದ ಮಧ್ಯೆ, ಸಿನಿಮಾ ಅನ್ನೋ ದೊಡ್ಡ ಮಗುವನ್ನು ನಿರ್ಲಕ್ಷಿಸುವಂತಾಗಿದ್ದು ಬೇಸರ ತರಿಸಿದೆ.

ಕಾರಣ 6 : ಗಂಟೆಗಟ್ಟಲೇ ನಿಲ್ಲುವ ಸುದೀಪ್​​​ ಸುಸ್ತು, ಕಾಲು ನೋವು!

ಕಿಚ್ಚನ ಪಂಚಾಯ್ತಿ, ಸೂಪರ್​ ಸಂಡೇ ವಿತ್​ ಸುದೀಪ ಎರಡೂ ಶೋಗಳಲ್ಲೂ ಸುದೀಪ್ ಗಂಟೆಗಳ ಕಾಲ ನಿಂತುಕೊಂಡೇ ಇರ್ತಾರೆ. ಈ ಟೈಮಲ್ಲಿ ಅಕ್ಷರಶಃ ಸುದೀಪ್ ಸುಸ್ತಾಗ್ತಿರ್ತಾರೆ. ಕೇವಲ ಕಾಲು ನೋವು ಮಾತ್ರವಲ್ಲ, ಒತ್ತಡವೂ ಅತಿಯಾಗಿರುತ್ತದೆ. ಇದೂ ಸಹ ಕಾರಣ ಅನ್ನೋದನ್ನ ಖುದ್ದು ಕಿಚ್ಚ ಹಂಚಿಕೊಂಡಿದ್ರು. ಹೀರೋ ಬೇರೆ ಕಾಲು ನೋವು ಅಂತ ಹೇಳಿಕೊಳ್ಳಂಗೂ ಇಲ್ಲ. ಬಿಡಂಗೂ ಇಲ್ಲ. ಹಾಗಾಗಿಯೇ ಒಳ್ಳೆಯ ಡ್ರೆಸಿಂಗ್ ರೂಮಿನಲ್ಲಿ ಹೋಗಿ ಕಿರುಚಾಡಿ, ಅರಚಾಡುತ್ತಾ ಇರ್ತೀನಿ. ಇಲ್ಲಾಂದ್ರೆ ಕಾಲು ಒತ್ತಿಸಿಕೊಂಡು ಮತ್ತೆ ಬಂದು ಶೂಟ್​ ಮಾಡ್ತೀನಿ ಅನ್ನೋ ಮಾತನ್ನು ಹೇಳಿಕೊಂಡಿದ್ದಾರೆ.

ಕಾರಣ 7: ಬಿಗ್​​ಬಾಸ್​​ ತಾನೇ ಹೊಣೆಗಾರಿಕೆ ಒತ್ತಡವೂ ಕಾಡಿದೆ!

ಒಂದು ಕಾರ್ಯಕ್ರಮದ ನಿರೂಪಣೆ ಮಾಡಿ ಸುಮ್ಮನೇ ಮನೆಗೆ ಹೋಗೋದು ಸುಲಭದ ವಿಚಾರ. ಆದರೇ, ಆ ಕಾರ್ಯಕ್ರಮದ ಸಮಸ್ತ ಹೊಣೆಯೂ ಒಬ್ಬ ಸೂಪರ್​​ಸ್ಟಾರ್​ ಮೇಲೆ ಬಿದ್ದುಬಿಟ್ಟರೇ, ಏನ್ಮಾಡೋದು? ಇದೇ ಸುದೀಪ್ ಪಾಲಿಗೆ ಬಹುದೊಡ್ಡ ಒತ್ತಡವನ್ನು ತಂದೊಡ್ಡಿದೆ. ನೋಡಿ, ಇದೇ ಕಾರಣಕ್ಕೂ ಸುದೀಪ್ ಬಿಗ್​ಬಾಸ್​​ ಮತ್ತೊಬ್ಬರು ಮಾಡಲಿ ಅಂತ ಯಾವುದೇ ಬೇಸರವೂ ಇಲ್ಲದೇ ಹೇಳಿರೋ ಸಾಧ್ಯತೆ ಇದೆ. ಇನ್ನು, ಖುದ್ದು ಸುದೀಪ್ ಅತ್ಯಂತ ಸ್ಪಷ್ಟವಾಗಿ ಹೇಳಿದ ಮಾತು ಪೇಮೆಂಟ್​​ಗಾಗಿ ನಾನು ಮಾಡಲ್ಲ ಅಂತ ಹೇಳಿಲ್ಲ ಅಂದ್ರು.

ಕಾರಣ 8: ಪೇಮೆಂಟ್​​ಗಾಗಿ ಅಲ್ಲ, ನನಗೆ ತುಂಬಾನೇ ಸುಸ್ತು ಆಗ್ತಿತ್ತು!

ಹೌದು, ಕಿಚ್ಚ ಬಿಗ್​​ಬಾಸ್​​ ನಿರೂಪಣೆ ಬೇಡ ಅನಿಸುತ್ತಿದೆ ಅನ್ನೋ ಮಾತನ್ನ ಹೇಳೋದಕ್ಕೆ ಬಹುಮುಖ್ಯ ಕಾರಣ ಪೇಮೆಂಟ್​ ಅಂತೂ ಅಲ್ಲವೇ ಅಲ್ಲ. ಪಕ್ಕಾ ಎಥಿಕಲ್ ಆಗಿರೋ ಸುದೀಪ್ ಹಣಕ್ಕಾಗಿ ಇಂಥಾ ಚೀಪ್ ಮೆಂಟಾಲಿಟಿ ತೋರಿಸೋದಿಲ್ಲ. ಅತಿಯಾದ ಓಡಾಟ, ನಿದ್ದೆ ಇಲ್ಲದ ಕೆಲಸ, ಹೆಚ್ಚಿನ ಶೂಟಿಂಗ್ ಇದೆಲ್ಲವೂ ಸಹ ಸುದೀಪ್​​ರನ್ನು ಸುಸ್ತಾಗಿಸುತ್ತಿತ್ತು. ಇದೇ ಕಾರಣವನ್ನೇ ಸುದೀಪ್ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿಯೇ ಬಿಗ್​ಬಾಸ್​​ ಬೇಡ ಅನಿಸುತ್ತಿದೆ ಅನ್ನೋ ಸಂದೇಶ ನೀಡಿದ್ದೆ ಅಂತಲೂ ಹೇಳಿಕೊಂಡಿದ್ದಾರೆ.

ಬಿಗ್​​ಬಾಸ್​​ ನಿರೂಪಣೆಗೆ ಕಿಚ್ಚ ವಿದಾಯ ಹೇಳೋದಕ್ಕೆ ಬಹುಮುಖ್ಯ ಕಾರಣ ಇದೇ ಇರಬಹುದು ಅನ್ನೋ ಗುಸುಗುಸು ಇದೆ. ಯಾಕಂದ್ರೆ, ಕಿಚ್ಚನೇ ಅದೊಂದು ಮಾತನ್ನು ಮಾರ್ಮಿಕವಾಗಿ ಹೇಳಿದ್ರು. ಅಗ್ರಿಮೆಂಟ್​ ಕಾರಣಕ್ಕೋ ಏನೋ? ಕಿಚ್ಚ ಶನಿವಾರ ಚಾಚೂ ತಪ್ಪದೇ ಬಿಗ್​ಬಾಸ್​ ಶೂಟಿಂಗ್​ಗೆ ಹೋದರೇ ಇಡೀ ರಾತ್ರಿ ಚಿತ್ರೀಕರಣ ಮಾಡ್ತಿದ್ರಂತೆ. ಶನಿವಾರ ಶೂಟಿಂಗ್​ಗೆ ಹೋದರೇ ಅವರ ಭಾನುವಾರವೇ ಬಿಡ್ತಾ ಇದ್ದಿದ್ದು ಅನ್ನೋ ಮೂಲಕ ತಮಗಾಗ್ತಿರೋ ಕೆಲಸದ ಒತ್ತಡದ ಬಗ್ಗೆ ಹಂಚ್ಕೊಂಡಿದ್ರು ಸುದೀಪ್​

ಕಾರಣ 10 : ‘ಮೊದಲ ಸಲ ಪ್ರಾಮುಖ್ಯತೆ’

ಸೀಸನ್ 11ರ ನಿರೂಪಣೆಯನ್ನ ತಾನು ಮಾಡೋಕೆ ಇಷ್ಟಪಡುತ್ತಿಲ್ಲ ಅಂತ ಕಲರ್ಸ್​ ಕನ್ನಡದ ಜೊತೆ ಸುದೀಪ್ ಹೇಳಿಕೊಂಡಾಗ ಏನಾಯ್ತು ಗೊತ್ತಾ? ಖುದ್ದು ಸುದೀಪ್ ಹೇಳುವಂತೆ, ಅವರ ಮನೆಗೆ ಕಲರ್ಸ್​ ಕನ್ನಡದವರು ಹಾಗೂ ಎಂಡೋಮಾಲ್ ಸಂಸ್ಥೆಯವರು ಓಡೋಡಿ ಹೋಗಿದ್ದರಂತೆ. ಈ ಮೂಲಕ ಮೊದಲ ಸಲ 10 ವರ್ಷಗಳ ಬಳಿಕ ತನ್ನ ಬಗ್ಗೆ ಅವರ ಇಂಪಾರ್ಟೆನ್ಸ್​​ ಕಂಡು ಅಚ್ಚರಿ ಆಯ್ತು ಎಂದಿದ್ರು ಸುದೀಪ್​ ಜಸ್ಟ್ ಕಿಡ್ಡಿಂಗ್ ಅನ್ನುತ್ತಲೇ, ಹೌದು ಬೇಸರ ಇತ್ತು ಅನ್ನೋದನ್ನ ಸುದೀಪ್ ಹೇಳಿಕೊಂಡಿದ್ದರು. ಇದೆಲ್ಲವನ್ನೂ ನೋಡಿದ್ರೆ, ಕಿಚ್ಚ ಬಿಗ್​ಬಾಸ್​ಗೆ ವಿದಾಯ ಹೇಳೋದಕ್ಕೆ ಹಲವು ಕಾರಣಗಳಿವೆ ಅನ್ನೋದು ಸ್ಪಷ್ಟವಾಗುತ್ತದೆ. ಇದಕ್ಕಿಂತಲೂ ಬಹುಮುಖ್ಯ ಅನಿಸಿದ್ದು ಆತನೂ ನನ್ನ ತಮ್ಮ, ಬಿಗ್​​ಬಾಸ್​ನ ಅವನೇ ನಿರೂಪಣೆ ಮಾಡಲಿ ಬಿಡಿ ಅಂತಾ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10+1 ಸೀಸನ್.. ಬಿಗ್​​ಬಾಸ್​ಗೆ ದಿಢೀರ್‌ ಗುಡ್​​ ಬೈ ಹೇಳಿದ್ದೇಕೆ ಕಿಚ್ಚ ಸುದೀಪ್‌? 10 ಕಾರಣಗಳು ಇಲ್ಲಿವೆ!

https://newsfirstlive.com/wp-content/uploads/2023/11/kiccha-1.jpg

Load More