ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

author-image
Bheemappa
Updated On
ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?
Advertisment
  • ನಟ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ ಆ್ಯಕ್ಟರ್ ಸುದೀಪ್
  • ಈಗಾಗಲೇ ಕೊಲೆ ಪ್ರಕರಣದಲ್ಲಿ ಕಸ್ಟಡಿಯಲ್ಲಿರುವ ನಟ ದರ್ಶನ್
  • ನಮ್ಮನ್ನು ದೇವರನ್ನಾಗಿ ಮಾಡಬೇಡಿ, ನಾವು ಮನುಷ್ಯರೇ- ನಟ​

ಬೆಂಗಳೂರು: ಸೆಲೆಬ್ರಿಟಿ ಆದ ಮಾತ್ರಕ್ಕೆ ನಾವು ದೇವರಲ್ಲ, ನಮ್ಮನ್ನು ದೇವರನ್ನಾಗಿ ಮಾಡಬೇಡಿ ಎಂದು ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುದ್ದು ನಾಯಿಗಳ ಜೊತೆ ಟೈಮ್ ಸ್ಪೆಂಡ್ ಮಾಡಿದ MS ಧೋನಿ, ಝೀವಾ.. ಬರ್ತ್​​ಡೇ ಯಾವಾಗ?

ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ನಟ ಸುದೀಪ್ ಅವರು, ನಾವು ಸೆಲೆಬ್ರಿಟಿ ಆದ ಮಾತ್ರಕ್ಕೆ ನಾವು ದೇವರಲ್ಲ. ಇದಕ್ಕಾಗಿ ನಮ್ಮನ್ನ ದೇವರನ್ನಾಗಿ ಮಾಡಬೇಡಿ. ಏಕೆಂದರೆ ನಾವೂ ಕೂಡ ಮನುಷ್ಯರೇ ಆಗಿದ್ದೇವೆ. ಸೆಲೆಬ್ರಿಟಿಗಳು ಎಲ್ಲವನ್ನೂ ಒಳ್ಳೆಯದನ್ನೇ ಮಾಡಬೇಕು ಅಂತ ಅಪೇಕ್ಷಿಸಬೇಡಿ. ಕೆಲವೊಮ್ಮೆ ನಮಗೆ ತಿಳಿಯದೆ ಏನೇನೋ ನಡೆದು ಹೋಗುತ್ತವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕಂಬಿ ಹಿಂದೆ ದರ್ಶನ್.. ಮಾಧ್ಯಮ, ಪೊಲೀಸರ ಕಾರ್ಯಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ; ಏನಂದ್ರು?

publive-image

ಚಿತ್ರರಂಗಕ್ಕೆ ನಾನು ಸೇರಿದ್ದರಿಂದ ಆ ಚಿತ್ರರಂಗಕ್ಕೆ ಕಪ್ಪುಚುಕ್ಕೆ ತರೋದು ನಮಗೂ ಇಷ್ಟವಿಲ್ಲ. ನ್ಯಾಯಾ ಬೇರೆ, ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ. ನಾನು ಯಾವತ್ತೂ ಯಾರ ಬಗ್ಗೆನೂ ಮಾತನಾಡಿದವನಲ್ಲ. ಅದು ನನಗೆ ಬೇಕಾಗಿಲ್ಲ. ನಾನೋಬ್ಬ ಕನ್ನಡಿಗ. ಕರ್ನಾಟಕದ ಮೂಲೆ ಮೂಲೆಗೂ ಸೇರುತ್ತೇನೆ. ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಎಲ್ಲರೂ ಕೂಡ ಕನ್ನಡಿಗರು. ಅನ್ಯಾಯ ಯಾರಿಗೇ ಆದರು ಕನ್ನಡಿಗರಿಗೆ ಆಗೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment