/newsfirstlive-kannada/media/post_attachments/wp-content/uploads/2025/06/KARNA.jpg)
ಕನ್ನಡ ಕಿರುತೆರೆಯಲ್ಲಿ ಬಹುನಿರೀಕ್ಷೆ ಹುಟ್ಟಿಸಿದ್ದ ಧಾರಾವಾಹಿ ಎಂದರೆ ಅದು ಕರ್ಣ. ಅಂದುಕೊಂಡಂತೆ ಆಗಿದ್ದರೇ ಇವತ್ತು ಮೊದಲ ಎಪಿಸೋಡ್ ಟೆಲಿಕಾಸ್ಟ್ ಆಗಬೇಕಿತ್ತು. ಭವ್ಯಾ, ಕಿರಣ್​ ರಾಜ್​ ಜೋಡಿಯ ಪ್ರೋಮೋ ಈಗಾಗಲೇ ಕನ್ನಡ ನಾಡಿನ ಜನರ ಮನ ಗೆದ್ದಿತ್ತು. ಆದರೆ ಕರ್ಣ ಲಾಂಚ್ ಮುಂದೂಡಿಕೆ ಹಿನ್ನೆಲೆಯಲ್ಲಿ ನಟ ಕಿರಣ್ ರಾಜ್ ಅವರು ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ.
ನಾನು ಇವತ್ತು ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ. ನೀವು ಕೊಟ್ಟ ರೆಸ್ಪಾನ್ಸ್​, ಪ್ರೀತಿಯಿಂದ ಒಳ್ಳೆಯ, ಉತ್ತಮವಾದ ಪ್ರಾಜೆಕ್ಟ್ ಅನ್ನು ಪ್ರೆಸೆಂಟ್ ಮಾಡಬೇಕು ಎಂದು ಕುತೂಹಲ ನಮ್ಮಲ್ಲಿ ಇತ್ತು. ಮೊದಲ ಎಪಿಸೋಡ್​ ಯಾವಾಗ ಲಾಂಚ್ ಆಗುತ್ತೆ. ವೀಕ್ಷಕರ ರೆಸ್ಪಾನ್ಸ್​ ಹೇಗಿರುತ್ತೆ ಎಂದು ಕಾಯುತ್ತಿದ್ದೇವು ಎಂದು ಹೇಳಿದ್ದಾರೆ.
ಇವತ್ತು ಶುರುವಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದೇ, ಎರಡು ವರ್ಷಗಳ ನಂತರ ಬರುತ್ತಿರುವ ಬಗ್ಗೆ ಕಾತುರತೆ ಇತ್ತು. ಕರ್ಣನಾಗಿ ನಾನು ಮನೆಗೆ ಬರಲು ತುಂಬಾ ಕುತೂಹಲದಿಂದ ಇದ್ದೇ. ನನಗೆ ಗೊತ್ತಿರುವ ಪ್ರಕಾರ ಕಾನೂನು ಸಮಸ್ಯೆ ಏನೋ ಆಗಿದೆ. ಆದಷ್ಟು ಬೇಗ ನಾವು ನಿಮ್ಮ ಮುಂದೆ ಬರುತ್ತೇವೆ. ತಡ ಆಗಬಹುದು. ಆದರೆ ಖಂಡಿತವಾಗಿ ಬಂದೇ ಬರುತ್ತೇವೆ ಎಂದು ಹೇಳಿದ್ದಾರೆ.
ಧಾರಾವಾಹಿ ಲಾಂಚ್ ಆಗದಿದ್ದಕ್ಕೆ ಕ್ಷಮೆ ಇರಲಿ. ಇದಕ್ಕಾಗಿ ನಿಮ್ಮ ಬಳಿ ಇನ್ನು ಸ್ವಲ್ಪ ಸಮಯ ಕೇಳುತ್ತಿದ್ದೇನೆ. ಈ ರೀತಿ ಆಗಬಾರದಿತ್ತು. ಪ್ರತಿಯೊಂದು ನಮ್ಮ ಕೈಯಲ್ಲಿ ಇರಲ್ಲ. ಕರ್ಣ ಧಾರಾವಾಹಿಗೆ ಕೋಟ್ಯಂತರ ರೂಪಾಯಿ ನಿರ್ಮಾಪಕರು ಹಾಕಿದ್ದಾರೆ. ಕಲಾವಿದರು, ಟೆಕ್ನಿಷಿಯನ್ಸ್ ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಎಲ್ಲರ ಶ್ರಮಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಕಿರಣ್ ರಾಜ್ ಭರವಸೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ