/newsfirstlive-kannada/media/post_attachments/wp-content/uploads/2024/09/kiran-raj5.jpg)
ಕನ್ನಡ ಕಿರುತೆರೆ ನಟ ಕಿರಣ್ ರಾಜ್ ಅವರು ಪ್ರಯಾಣಿಸುತ್ತಿದ್ದ ಕಾರು ತಡರಾತ್ರಿ 9 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿತ್ತು. ಅಪಘಾತದ ಪರಿಣಾಮ ಕಿರಣ್ ರಾಜ್ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿತ್ತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ನಟ ಕಿರಣ್ ರಾಜ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:BREAKING: ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ಗೆ ಅಪಘಾತ
ಆದರೆ ಅಪಘಾತಕ್ಕೂ ಮುನ್ನ ಕಿರಣ್ ರಾಜ್ ಹೋಗಿದ್ದು ಎಲ್ಲಿಗೆ ಎಂಬ ಪ್ರಶ್ನೆ ಮೂಡುತ್ತೆ. ಮುದ್ದಯ್ಯನಪಾಳ್ಯದಲ್ಲಿರುವ ಶ್ರೀ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮಕ್ಕೆ ನಿನ್ನೆ ರಾತ್ರಿ ಕಿರಣ್ ರಾಜ್ ಭೇಟಿ ಕೊಟ್ಟಿದ್ದರು. ಆಶ್ರಮದಲ್ಲಿ ಇರೋ ವೃದ್ಧರಿಗೆ ಊಟ ಬಡಿಸಿ, ಚೇರ್ ವ್ಯವಸ್ಥೆ ಮಾಡ್ತೇನೆ ಎಂದು ಭರವಸೆ ನೀಡಿದ್ದರು. ಬಳಿಕ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮದ ಸಂಸ್ಥಾಪಕ ಪ್ರವೀಣ್ ಜೊತೆಗೆ ಕೆಲ ಹೊತ್ತು ಮಾತಾಡಿ ಹೊರಟಿದ್ದರು. ಏಕಾಏಕಿ ಕಾರಿನ ಮುಂದೆ ಮುಂಗುಸಿ ಅಡ್ಡ ಬಂದ ಪರಿಣಾಮ ಅಪಘಾತವಾಗಿದೆ.
ಕಿರಣ್ ರಾಜ್ಗೆ ಮಾತ್ರ ಗಾಯ ಆಗಿದ್ದೇಕೆ?
ನಟ ಕಿರಣ್ ರಾಜ್ ಅವರು ಶ್ರೀ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮಕ್ಕೆ ಭೇಟಿ ಕೊಟ್ಟ ಹೊರಡುವಾಗ ಕಾರಿನ ಹಿಂದಿನ ಸೀಟ್ನಲ್ಲಿ ಕುಳಿತುಕೊಂಡಿದ್ದಾರೆ. ಆದರೆ ಕಾರು ಚಲಿಸುತ್ತಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಅವರು ಪಾರಾಗಿದ್ದಾರೆ. ಸದ್ಯ ಆ ಕೂಡಲೇ ಕಿರಣ್ ರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಗ್ಗೆ ವಿಡಿಯೋ ರಿಲೀಸ್ ಮಾಡಿರುವ ಕಿರಣ್ ರಾಜ್, ನಾನು ಆರಾಮಾಗಿದ್ದೇನೆ. ಯಾರೂ ಕೂಡ ಆಘಾತಕ್ಕೆ ಒಳಗಾಗೋದು ಬೇಡ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ