ಕರ್ಣನ ಪ್ರೋಮೋಗೆ ವೀಕ್ಷಕರು ಭಾರೀ ಮೆಚ್ಚುಗೆ; ಭವ್ಯಾ ಗೌಡ, ಕಿರಣ್​ ರಾಜ್​ ಕ್ಯೂಟ್​ ವಿಡಿಯೋ ಇಲ್ಲಿದೆ

author-image
Veena Gangani
Updated On
ಕರ್ಣನ ಪ್ರೋಮೋಗೆ ವೀಕ್ಷಕರು ಭಾರೀ ಮೆಚ್ಚುಗೆ; ಭವ್ಯಾ ಗೌಡ, ಕಿರಣ್​ ರಾಜ್​ ಕ್ಯೂಟ್​ ವಿಡಿಯೋ ಇಲ್ಲಿದೆ
Advertisment
  • ಹೈ ಬಜೆಟ್​ ಧಾರಾವಾಹಿಯಲ್ಲಿ ಬಿಗ್​ಬಾಸ್​ ಬೆಡಗಿಯರು
  • ಶ್ರುತಿ ನಾಯ್ಡು ಸಂಸ್ಥೆಯಿಂದ ಮೂಡಿ ಬರ್ತಿರೋ ಸೀರಿಯಲ್​
  • ಅಕ್ಕ-ತಂಗಿಯರ ಪಾತ್ರದಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ

ಕರ್ಣ.. ಶ್ರುತಿ ನಾಯ್ಡು ಸಂಸ್ಥೆಯಿಂದ ಮೂಡಿ ಬರ್ತಿರೋ ಬಹು ನಿರೀಕ್ಷಿತ ಧಾರಾವಾಹಿ. ನಾವು ಮಾಹಿತಿ ನೀಡಿದಂತೆ ಕಿರಣ್​ ರಾಜ್​ಗೆ ನಾಯಕಿಯರಾಗಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ಅಟ್ಯಾಕ್.. ಹೌತಿ ಉಗ್ರರ ವಿರುದ್ಧ ಕೆರಳಿದ ಪ್ರಧಾನಿ

publive-image

ಸದ್ಯ ಭವ್ಯಾ ಹಾಗೂ ಕಿರಣ್​ ರಾಜ್​ ಜೋಡಿ ಆಗಿರೋ ಕ್ಯೂಟ್​ ಪ್ರೋಮೋ ರಿಲೀಸ್​ ಆಗಿದೆ. ರಿಲೀಸ್​ ಆಗಿರೋ ಹೊಸ ಪ್ರೋಮೋಗೆ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಕರ್ಣ ಶೂಟಿಂಗ್​ ಭರದಿಂದ ನಡೆಯಿತ್ತಿದ್ದು, ಹೈ ಬಜೆಟ್​ ಧಾರಾವಾಹಿ ಅಂದ್ರೂ ತಪ್ಪಲ್ಲ.

publive-image

ಕಳೆದ ಬಾರಿ ಮಾಹಿತಿ ನೀಡಿದಂತೆ ಸರಿಗಮಪ ಕಾರ್ಯಕ್ರಮ ಸಿಂಧನೂರಿನಲ್ಲಿ ನಡೆಯಿತು. ಜನರ ಮುಂದೆ ಕರ್ಣ ತಂಡ ಮೊಟ್ಟ ಮೊದಲ ಬಾರಿಗೆ ಹಾಜರ್​ ಆಗಿತ್ತು. ಕಿರಣ್​ ರಾಜ್​ ಪಾತ್ರ ಗೈನಾಕಾಲಜಿಸ್ಟ್​.

publive-image

ಹೆರಿಗೆ ತಜ್ಞನ ಪಾತ್ರ ಮಾಡ್ತಿರೋ ನಟ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಅಕ್ಕ-ತಂಗಿಯರ ಪಾತ್ರದಲ್ಲಿ ಭವ್ಯಾ, ನಮ್ರತಾ ಗೌಡ ಕಾಣಿಸಿಕೊಳ್ತದ್ದಾರೆ. ನಿತ್ಯಾ ಹಾಗೂ ನಿಧಿ ಎಂಬುದು ಪಾತ್ರದ ಹೆಸರು. ಭವ್ಯಾ ಸಾಫ್ಟ್​ ಆದ್ರೇ ನಮ್ರತಾ ಪ್ರ್ಯಾಕ್ಟಿಕಲ್​ ಆಗಿರೋ ಹುಡುಗಿ.

ಒಟ್ಟಾರೆ ನಮ್ರತಾ ಇಂಟ್ರಡಕ್ಷನ್​ ಪ್ರೋಮೋ ರಿಲೀಸ್​ ಆಗ್ಬೇಕಿದೆ. ಉಳಿದಂತೆ ಕರ್ಣ ಸಖತ್​ ಸೌಂಡ್​ ಮಾಡ್ತಿದ್ದು ಈ ತಿಂಗಳ ಕೊನೆ ವಾರದಲ್ಲಿ ಮನೆ ಮನೆಗೆ ಡಾಕ್ಟರ್​ ಕರ್ಣ ಬರಲಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment