newsfirstkannada.com

ಗುಡ್ ಬೈ ಬ್ರದರ್.. ವಿಲ್ ಮಿಸ್ ಯು.. ಅಗಲಿದ ಸ್ನೇಹಿತನಿಗೆ ಭಾವುಕ ವಿದಾಯ ಹೇಳಿದ ನಟ ಕಿಶೋರ್​

Share :

Published March 30, 2024 at 4:15pm

Update March 30, 2024 at 4:20pm

  ಯಶ್​ ‘ಕಿರಾತಕ’ ಸಿನಿಮಾದ ವಿಲನ್​​ ಡ್ಯಾನಿಯಲ್​ ಬಾಲಾಜಿ ಸಾವು

  ಡ್ಯಾನಿಯಲ್​ ಬಾಲಾಜಿ ಸಾವಿಗೆ ಕಂಬನಿ ಸುರಿಸಿದ ನಟ-ನಟಿಯರು

  ಬಾಲಾಜಿ ಜೊತೆ ಒಡನಾಟವಿದ್ದ ಕನ್ನಡದ ನಟನ ಮನದಾಳ ಮಾತು ಕೇಳಿದ್ರಾ?

ಹುಟ್ಟು ಉಚಿತ ಸಾವು ಖಚಿತ ಎಂಬ ಮಾತಿದೆ. ಆದರೆ ಯಾರು, ಯಾವಾಗ ಸಾಯುತ್ತಾರೆಂದು ಹೇಳತೀರದು. ಇಂದು ಇದ್ದವರು ನಾಳೆ ಇಲ್ಲದೇ ಇರಬಹುದು. ಕಳೆದುಕೊಂಡ ಮೇಲೆ ವ್ಯಕ್ತಿಯ ಒಡನಾಟ, ಸ್ನೇಹ ಎಲ್ಲವೂ ಅರ್ಥವಾಗೋದು. ಅದರಂತೆಯೇ ‘ಕಿರಾತಕ’ ಸಿನಿಮಾದ ವಿಲನ್​ ನಿನ್ನೆ ಹಲಗಲು ಇದ್ದವರು ರಾತ್ರಿ ವೇಳೆ ಅಸುನೀಗುತ್ತಾರೆಂದರೆ ಸಹಿಸಿಕೊಳ್ಳಲು ಸಾಧ್ಯವೇ?. ಡ್ಯಾನಿಯಲ್​ ಬಾಲಾಜಿ ಯನ್ನು ಕಳೆದುಕೊಂಡ ನಟ ಕಿಶೋರ್​ ಭಾವುಕರಾಗಿದ್ದಾರೆ.  

ಬಹುಭಾಷಾ ನಟ ಕಿಶೋರ್​ ಮತ್ತು ಡ್ಯಾನಿಯಲ್​ ಬಾಲಾಜಿ ಉತ್ತಮ ಒಡನಾಟದಲ್ಲಿ ಇದ್ದವರು. ಆದರೆ ಸ್ನೇಹಿತನನ್ನು ಕಳೆದುಕೊಂಡ ಬೇಸರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಕ್ಷರ ಮೂಲಕ ಬಾಲಾಜಿಗೆ ವಿದಾಯ ಹೇಳಿದ್ದಾರೆ.

ಅಣ್ಣಾ .. ಎಪ್ಪಡಿ ಇರುಕ್ಕೀಂಗ 

ಗುಡ್ ಬೈ ಬ್ರದರ್.. ವಿಲ್ ಮಿಸ್ ಯು… ಪೊಲ್ಲಾದವನ್ ನಮಗೆಲ್ಲರಿಗೆ ಕೇವಲ ಸಿನಿಮಾ ಆಗಿರಲಿಲ್ಲ ಮನೆಯಾಗಿತ್ತು, ಕುಟುಂಬವಾಗಿತ್ತು. ನಿಯಮಿತವಾಗಿ ಯಾವುದೇ ಮಾತುಕತೆಯಿಲ್ಲದಿದ್ದರೂ… ನಮ್ಮಲ್ಲಿ ಒಬ್ಬರ ಆಲೋಚನೆಗಳು, ಚಲನಚಿತ್ರಗಳು ಮತ್ತು ಯಶಸ್ಸಿನ ಬಗ್ಗೆ ಯಾವಾಗಲಾದರೂ ಬರುವ ಸುದ್ದಿ ಅಥವಾ ವಿಡಿಯೋವನ್ನು ನೋಡಿದಾಗ ನಮ್ಮ ಮುಖದಲ್ಲಿ ಮೂಡುವ ಆ ಮುಗುಳ್ನಗೆ

ನಾವು ಪರಸ್ಪರರ ಬಗ್ಗೆ ಮಾತನಾಡುವಾಗ .. ಹೊಮ್ಮುವ ಆ ಹೆಮ್ಮೆಯ ಭಾವ .. ನಮ್ಮೊಂದಿಗೆ ಅಥವಾ ನಾವಿಲ್ಲದೆ ನಮ್ಮಲ್ಲಿ ಯಾರು ಯಾವ ಕೆಲಸ ಮಾಡಿದರೂ ನಾವು ಪಡುವ ಆ ಸಂತೋಷ … ಏನೆಂದು ಹೇಳಲಿ.. ನಾನು ಎಲ್ಲಿ ಹೋದರೂ ಜನ ಯಾವಾಗ ವಡಚೆನ್ನೈ -2 ಎಂದು ಕೇಳುತ್ತಲೇ ಇರುತ್ತಾರೆ .. ನಾನು ತಮಾಷೆಯಾಗಿ ಹೇಳುತ್ತಿರುತ್ತೇನೆ ವೆಟ್ರಿ ಒಪ್ಪಿಕೊಂಡಿರುವ ಸಿನಿಮಾಗಳ ಸಾಲು ನೋಡಿದರೆ ನಾವು 70 ವರ್ಷ ವಯಸ್ಸಿನವರಾದಾಗ ಮಾತ್ರ ಮಾಡಲು ಸಾಧ್ಯವಾಗಬಹುದು ಎಂದು … ಆದರೆ… ಈಗಲೂ ಅನಿಸುತ್ತಿದೆ ನಾನು ಕರೆ ಮಾಡಿದರೆ ಆ ಕಡೆಯಿಂದ ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ… ಅಣ್ಣಾ .. ಎಪ್ಪಡಿ ಇರುಕ್ಕೀಂಗ.

ಇದನ್ನೂ ಓದಿ: ಅಬ್ಬಾ..! ವಿಶ್ವದ ಅತಿ ವೇಗದ ಮೀನು ಇದು! ಗಂಟೆಗೆ 110km ಕ್ರಮಿಸುತ್ತಂತೆ

ಇದು ನಟ ಕಿಶೋರ್​​ ಸ್ನೇಹಿತ ಡ್ಯಾನಿಯಲ್​ ಬಗ್ಗೆ ಬರೆದ ಮನದಾಳದ ಮಾತುಗಳು. ನೆಚ್ಚಿನ ನಟನನ್ನು ಕಳೆದುಕೊಂಡ ಅಭಿಮಾನಿಗಳು ಒಂದೆಡೆ ಭಾವುಕರಾದರೆ, ಅವರ ಸ್ನೇಹವನ್ನು ಗಳಿಸಿದ ಸ್ನೇಹಿತ ವೃಂದ ಕೂಡ ಕಣ್ಣೀರ ಕಡಲಲ್ಲಿ ತೇಲಾಡುತ್ತಿದೆ. ಒಟ್ಟಿನಲ್ಲಿ ಭಗವಂತನ ಪಾದ ಸೇರಿದ ಡ್ಯಾನಿಯಲ್​ಗೆ ಆ ದೇವರು ಸದ್ಗತಿ ನೀಡಲಿ. ಸ್ನೇಹಿತರು, ಕುಟುಂಬಸ್ಥರು ಅವರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಡ್ ಬೈ ಬ್ರದರ್.. ವಿಲ್ ಮಿಸ್ ಯು.. ಅಗಲಿದ ಸ್ನೇಹಿತನಿಗೆ ಭಾವುಕ ವಿದಾಯ ಹೇಳಿದ ನಟ ಕಿಶೋರ್​

https://newsfirstlive.com/wp-content/uploads/2024/03/Kishor.jpg

Load More