/newsfirstlive-kannada/media/post_attachments/wp-content/uploads/2025/05/manu-madiyuru.jpg)
ಬೆಂಗಳೂರು: ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಮನು ಜೈಲಿನಲ್ಲಿದ್ದಾರೆ. ಸಾಲು ಸಾಲು ಗಂಭೀರ ಆರೋಪ ಮಧ್ಯೆ ಮಡೆನೂರು ಮನುರನ್ನ ಕನ್ನಡ ಕಿರುತರೆ ಹಾಗೂ ಸ್ಯಾಂಡಲ್‌ವುಡ್‌ನಿಂದಲೇ ಬ್ಯಾನ್ ಮಾಡುವ ಆಗ್ರಹ ಕೇಳಿ ಬಂದಿತ್ತು.
/newsfirstlive-kannada/media/post_attachments/wp-content/uploads/2025/05/madenuru-manu.jpg)
ಇದಕ್ಕೆ ಕಾರಣ ಮಡೆನೂರು ಮನು ಅವರ ಆ ಒಂದು ಆಡಿಯೋ. ನಟನ ಬಂಧನದ ಬಳಿಕ ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿರೋ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಶಿವಣ್ಣನ ಅಭಿಮಾನಿಗಳು ದೂರು ಕೊಟ್ಟ ಬೆನ್ನಲ್ಲೇ ಫಿಲ್ಮ್ ಚೇಂಬರ್ ಮಹತ್ವದ ತಿರ್ಮಾನ ಕೈಗೊಂಡಿದೆ.
/newsfirstlive-kannada/media/post_attachments/wp-content/uploads/2025/05/Shivanna-Madenuru-Manu.jpg)
ಆಡಿಯೋ ವೈರಲ್​ ಬೆನ್ನಲ್ಲೇ ಮಡೆನೂರು ಮನು ಅವರನ್ನು ಕಿರಿತೆರೆ ಹಾಗೂ ಹಿರಿತೆರೆಯಿಂದ ಬ್ಯಾನ್ ಮಾಡಲಾಗಿದೆ. ಅಲ್ಲದೇ ಮಡೆನೂರು ಮನು ವಿರುದ್ಧ ವಾಣಿಜ್ಯ ಮಂಡಳಿಯೂ ದೂರು ಕೊಡ್ತೀವಿ ಅಂತ ಹೇಳಿದೆ. ವೈರಲ್ ಆಗಿರುವ ಆಡಿಯೋ ಕುರಿತಾಗಿ ಮಾತಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಎಲ್ಲಾ ಸಂಸ್ಥೆಗಳನ್ನೂ ಕರೆದು ಸಭೆ ಮಾಡಿದ್ದೇವೆ. ದುರಹಂಕಾರಿ ಮಾತನ್ನ ಆಡಿದ್ದಾರೆ. ನಾವು ಅಸಹಕಾರ ತೋರಿಸಬೇಕು ಎಂದು ತೀರ್ಮಾನಿಸಲಾಗಿದೆ. ಈಗಾಗಲೇ ಜೈಲಲ್ಲಿದ್ದಾರೆ. ಎಲ್ಲಾ ಅಂಗ ಸಂಸ್ಥೆಗಳಿಂದಲೂ ಸಹಾಯ ಮಾಡುವುದಿಲ್ಲ. ಅವರು ಯಾವುದೇ ರೀತಿಯಲ್ಲೂ ಚಟುವಟಿಕೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us