/newsfirstlive-kannada/media/post_attachments/wp-content/uploads/2025/05/Madenuru-Manu-Case.jpg)
ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನುಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಆರೋಪಿಯನ್ನು ಬಂಧಿಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇಂದು ಕೋರ್ಟ್‌ಗೆ ಹಾಜರುಪಡಿಸಿದ್ದರು. ಬೆಂಗಳೂರಿನ 6ನೇ ACJM ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಆರೋಪಿ, ನಟ ಮಡೆನೂರು ಮನು ಅವರನ್ನ ಮೇ 27ರವರೆಗೂ ಪೊಲೀಸ್ ಕಸ್ಟಡಿಗೆ ಕರೆದುಕೊಂಡು ಹೋಗಲಾಗಿದೆ. ಇಂದಿನಿಂದ ಪೊಲೀಸರು FIRನಲ್ಲಿ ದಾಖಲಾದ ಆರೋಪಗಳ ಬಗ್ಗೆ ತೀವ್ರ ವಿಚಾರಣೆ ನಡೆಸಲಿದ್ದಾರೆ.
ಮಡೆನೂರು ಮನು ಪೊಲೀಸ್ ಕಸ್ಟಡಿಗೆ ಹೋಗುವುದಕ್ಕೆ ಮುಂಚೆಯೇ ದೂರು ಕೊಟ್ಟ ಸಂತ್ರಸ್ತೆ ವಿಚಾರಣೆಗೆ ಹಾಜರಾಗಿದ್ದರು. ಸುದೀರ್ಘ ವಿಚಾರಣೆ ಮುಗಿಸಿ ಹೊರ ಬಂದ ಸಂತ್ರಸ್ತೆ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ. ವೈರಲ್ ಆಗಿರೋ ಆಡಿಯೋ, ವಿಡಿಯೋಗಳ ಬಗ್ಗೆ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.
ನಟ ಅಪ್ಪಣ್ಣ ಅವರ ವಿಚಾರದಲ್ಲಿ ಮನು ಒತ್ತಾಯ ಮಾಡಿ ರೆಕಾರ್ಡ್ ಮಾಡಿಸಿದ್ದ. ಅದು ಕಳೆದ ಏಪ್ರಿಲ್‌ನಲ್ಲಿ ಬ್ಲಾಕ್ ಮೇಲ್ ಮಾಡಿ ಅವನೇ ವಿಡಿಯೋ ಮಾಡಿಸಿದ್ದ. ಅಪ್ಪಣ್ಣ ಜೊತೆ ಕಾರ್ಯಕ್ರಮಗಳಿಗೆ ಹೋಗಬಾರದು ಅಂತಾ ಬೆದರಿಸಿದ್ದ. ಈ ವಿಡಿಯೋ ಮಾಡಿದ್ರೆ ನಾನು ನಿನ್ನ ಕೈ ಬಿಡಲ್ಲ ಎಂದು ನಂಬಿಸಿದ್ದ. ಅವತ್ತೇ ನಾನು ಅಪ್ಪಣ್ಣ ಅವರ ಬಳಿ ಕ್ಷಮೆ ಕೇಳಿದ್ದೀನಿ ಎಂದು ಸಂತ್ರಸ್ತೆ ಹೇಳಿದ್ದಾರೆ.
ಇದನ್ನೂ ಓದಿ: ನಟ ಮಡುನೂರು ಮನು ಕೇಸ್‌ಗೆ ಹೊಸ ಟ್ವಿಸ್ಟ್.. ದೂರು ಕೊಟ್ಟ ಒಂದೇ ದಿನಕ್ಕೆ ಸಂತ್ರಸ್ತೆ ಯು ಟರ್ನ್
ಈ ಪ್ರಕರಣದಲ್ಲಿ 3ನೇ ವ್ಯಕ್ತಿ ಹೆಸರು ಕೇಳಿ ಬಂದಿದೆ. ಆ ವ್ಯಕ್ತಿ ಅಲೋಕ್ ಅಂತ. ಅವರು ಒಬ್ಬ ಸಮಾಜ ಸೇವಕ. ನನ್ನ ಆತನ ಮಧ್ಯೆ ಯಾವುದೇ ಲವ್ ಇರಲಿಲ್ಲ. ಆತನೇ ನನ್ನ ಮತ್ತು ಮನು ವಿಚಾರದಲ್ಲಿ ಸಂಧಾನ ಮಾಡುತ್ತಿದ್ದ. ಮನು ನನಗೆ ಸಾಕಷ್ಟು ಬ್ಲಾಕ್ ಮೇಲ್ ಮಾಡಿದ್ದಾನೆ. ಕುಡಿಸಿ ಸಾಕಷ್ಟು ಆಡಿಯೋ ವಿಡಿಯೋ ಮಾಡಿದ್ದಾನೆ. ಇಷ್ಟು ದಿನ ಸುಮ್ಮನಿದ್ದು ಈ ದೂರು ನೀಡಲು ಕಾರಣ ಏನಂದ್ರೆ ಮೊನ್ನೆ ಶನಿವಾರ ನನಗೆ ಕುಡಿಸಿ, ಖಾಸಗಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ವಿಡಿಯೋ, ಆಡಿಯೋ ಮಾಡ್ಕೊಂಡು ಬೆದರಿಸಿದ್ದಾನೆ.
ವೈರಲ್ ಆಗಿರುವ ಆಡಿಯೋ, ವಿಡಿಯೋಗಳನ್ನು ಬಲವಂತವಾಗಿ ಮನುನೇ ನನ್ನಿಂದ ಮಾಡಿಸಿದ್ದು. ಕಳೆದ ಶನಿವಾರ ಅತ್ಯಂತ ಕ್ರೂರವಾಗಿ ನಡೆದುಕೊಂಡಿದ್ದಕ್ಕೆ ನಾನು ಕಂಪ್ಲೆಂಟ್ ಕೊಟ್ಟಿದ್ದೀನಿ. ಮನು ಸಿನಿಮಾ ವಿಚಾರಕ್ಕೂ ನನ್ನ ದೂರಿಗೂ ಸಂಬಂಧ ಇಲ್ಲ.
ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಟೀಂನವರು ದೂರು ಕೊಡದಂತೆ ಮನವಿ ಮಾಡಿಕೊಂಡಿದ್ದರು. ಆದ್ರೆ ಮನು ನನಗೆ ಕೊಟ್ಟಿರುವ ಹಿಂಸೆಯಿಂದ ನಾನು ದೂರು ಕೊಟ್ಟೆ. ನನಗೆ ಮುಂದೆ ಏನ್ ಮಾಡ್ತೋನೋ ಅನ್ನೋ ಭಯದಲ್ಲಿ ದೂರು ಕೊಟ್ಟೆ. ಜೀವ ಇರೋವರೆಗೂ ಇರ್ತೀನಿ ಅಂದು ಹೀಗ್ ಮಾಡಿದ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ