newsfirstkannada.com

ಗರ್ಲ್​ ಫ್ರೆಂಡ್​ ಮಾಜಿ ಪತಿಗೆ ಗುಂಡು ಹೊಡೆದ ಕಿರುತೆರೆಯ ನಟ

Share :

Published July 15, 2023 at 7:57pm

    ಯುವನಟನಿಂದ ಗರ್ಲ್​ ಫ್ರೆಂಡ್​​ ಮಾಜಿ ಪತಿಗೆ ಫೈರಿಂಗ್​

    ಯುವನಟನ ಗುಂಡಿಗೆ ತೀವ್ರವಾಗಿ ಗಾಯಗೊಂಡ ಸಿದ್ದಾರ್ಥ್​

    ಮಾಜಿ ಪತ್ನಿಯ ಮನೆಯಲ್ಲಿ ಕಿರುತೆರೆ ನಟನಿಗೇನು ಕೆಲಸ?

ಯುವನಟನೋರ್ವ ತನ್ನ ಗೆಳತಿಯ ಮಾಜಿ ಪತಿಯ ಮೇಲೆ ಗುಂಡು ಹಾರಿಸಿದ ಘಟನೆ ಹೈದರಾಬಾದ್​ನ ಶಮೀರ್​​ ಪೇಟೆಯಲ್ಲಿ ಬೆಳಕಿಗೆ ಬಂದಿದೆ. ತೆಲುಗು ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದ ಮನೋಜ್​ ಕುಮಾರ್​​ ಎಂಬಾತನಿಂದ ಈ ಕೃತ್ಯ ನಡೆದಿದೆ. ಗುಂಡು ತಗುಲಿದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿದ್ದಾರ್ಥ್​​ ದಾಸ್​ ಎಂಬಾತ ಸೆಲೆಬ್ರಿಟಿ ಕ್ಲಬ್​ ವಿಲ್ಲಾಗೆ ತನ್ನ ಮಾಜಿ ಪತ್ನಿ ಸುಶ್ಮಿತಾ ಹಾಗೂ ಮಕ್ಕಳನ್ನು ನೋಡಲು ಬಂದಿದ್ದಾನೆ. ಆದರೆ ಈ ವೇಳೆ ಮನೋಜ್​ ಆಕೆಯೊಂದಿಗೆ ಇರುವುದನ್ನು ಗಮನಿಸಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಇವರಿಬ್ಬರಿಗೆ ಜಗಳವಾಗಿದೆ. ಜಗಳ ತಾರಕಕ್ಕೆ ಏರಿ ಮನೋಜ್​ ಕುಮಾರ್​ ತನ್ನ ಗನ್​ನಿಂದ ಸಿದ್ದಾರ್ಥ್​​ಗೆ ಫೈರ್​ ಮಾಡಿದ್ದಾನೆ.

ಗುಂಡು ತಗುಲಿದ ಸಿದ್ದಾರ್ಥ್​​ ಅಲ್ಲಿಂದ ತಪ್ಪಿಸಿಕೊಂಡು ಆಸ್ಪತ್ರೆಗೆ ಸೇರಿದ್ದಾನೆ. ಬಳಿಕ ಪೊಲೀಸರಿಗೆ ಮನೋಜ್​ ಗುಂಡು ಹೊಡೆದ ಬಗ್ಗೆ ವಿವರಿಸಿದ್ದಾನೆ. ಸದ್ಯ ಪೊಲೀಸರು ಮನೋಜ್​ಗಾಗಿ ಹುಡುಕಾಟ ನಡೆಸುತ್ತಿದ್ದು, ಆತ ಮಾತ್ರ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಇನ್ನು ಸಿದ್ದಾರ್ಥ್​ ದಾಸ್​ ಮತ್ತು ಸುಶ್ಮಿತಾ 2019ರಲ್ಲಿ ಡಿವೋರ್ಸ್​ ಆಗಿದ್ದರು.ಈ ಜೋಡಿಗೆ ಒಂದು ಹೆಣ್ಣುಮಗುವಿತ್ತು. ಹೀಗಿದ್ದಾಗ ಸಿದ್ದಾರ್ಥ್​​ ತನ್ನ ಮಗಳನ್ನು ಕಾಣಲು ಸೆಲೆಬ್ರಿಟಿ ಕ್ಲಬ್​ ಹೌಸ್​ನಲ್ಲಿರುವ ವಿಲ್ಲಾಗೆ ಬರುತ್ತಾನೆ. ಈ ವೇಳೆ ಮಾಜಿ ಪತ್ನಿ ಜೊತೆಗೆ ಮನೋಜ್​ ಇರುವುದನ್ನು ಕಂಡಿದ್ದಾನೆ. ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಗರ್ಲ್​ ಫ್ರೆಂಡ್​ ಮಾಜಿ ಪತಿಗೆ ಗುಂಡು ಹೊಡೆದ ಕಿರುತೆರೆಯ ನಟ

https://newsfirstlive.com/wp-content/uploads/2023/07/Manoj.jpg

Load More