ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟ ಸಖತ್​ ಹ್ಯಾಂಡ್ಸಮ್ ಹೀರೋ; ಯಾರು ಈ ಮನೋಜ್ ಕುಮಾರ್!

author-image
Veena Gangani
Updated On
ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟ ಸಖತ್​ ಹ್ಯಾಂಡ್ಸಮ್ ಹೀರೋ; ಯಾರು ಈ ಮನೋಜ್ ಕುಮಾರ್!
Advertisment
  • ಸ್ಟಾರ್​ ನಟಿ ರಾಧಾ ಭಾಗವತಿಗೆ ಜೋಡಿಯಾದ ಮನೋಜ್ ಕುಮಾರ್
  • ಹೊಚ್ಚ ಹೊಸ ಧಾರಾವಾಹಿಗೆ ಎಂಟ್ರಿ ಕೊಟ್ಟ ಹೊಸ ಹೀರೋ ಯಾರು?
  • ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರೋ ನಟ

ಕಲರ್ಸ್​ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಅನೌನ್ಸ್ ಆಗ್ತಿವೆ. ವಧು, ಯಜಮಾನ ಜೊತೆ ಜೊತೆಗೆ ಭಾರ್ಗವಿ ಎಲ್​.ಎಲ್​.ಬಿ ಪ್ರೊಮೋ ರಿಲೀಸ್​ ಮಾಡಿತ್ತು ತಂಡ. ಸದ್ಯ ಮತ್ತೊಂದು ಹೊಸ ಧಾರಾವಾಹಿ ಅನೌನ್ಸ್ ಮಾಡಿದೆ.

ಇದನ್ನೂ ಓದಿ: ಡಾಲಿ ಮದ್ವೆಯಲ್ಲಿ 100 ವರ್ಷ ಇತಿಹಾಸ ಇರೋ ಸೀರೆ ಧರಿಸಿದ್ದ ಮಾಳವಿಕ ಅವಿನಾಶ್; ಇದರ ವಿಶೇಷತೆ ಏನು?

publive-image

ಈಗಾಗಲೇ ಭಾರ್ಗವಿ ಎಲ್​ಎಲ್​ಬಿ ಧಾರಾವಾಹಿ ಬಗ್ಗೆ ಸಾಕಷ್ಟು ಮಾಹಿತಿ ನೀಡ್ತಾನೆ ಬಂದಿದ್ದೀವಿ. ಸ್ವಪ್ನ ಕೃಷ್ಣ ಅವರ ಆರ್​​.ಆರ್​. ಆರ್​ ಪ್ರೋಡಕ್ಷನ್​ ಹೌಸ್​ ಅಡಿ ಈ ಸೀರಿಯಲ್​ಗೆ ಬಂಡವಾಳ ಹಾಕಿದ್ದಾರೆ. ಹಾಗೇ ಅವ್ರೇ ನಿರ್ದೇಶನ ಮಾಡ್ತಿದ್ದಾರೆ. ಈ ಸೀರಿಯಲ್​ನಲ್ಲಿ ನಾಯಕಿಯಾಗಿ ರಾಧಾ ಭಾಗವತಿ ಅಭಿನಯಿಸ್ತಿದ್ದಾರೆ. ಸದ್ಯ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರೊಮೋ ಕೂಡ ರಿಲೀಸ್​ ಆಗಿದೆ.

publive-image

ಹೌದು, ಹೊಚ್ಚ ಹೊಸ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ಗೆ ನಾಯಕನಾಗಿ ಮನೋಜ್​ ಕುಮಾರ್ ಆಯ್ಕೆಯಾಗಿದ್ದಾರೆ​. ಮಂಗಳೂರು ಮೂಲದ ಮನೋಜ್​ ಅವ್ರು ತೆಲುಗು ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ಮನೋಜ್​.

publive-image

ಇನ್ನೂ, ಸೋಷಿಯಲ್​ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್​ ಆಗಿರೋ ಮನೋಜ್​ ಮಲ್ಲಮ್ಮ ಟಾಕ್ಸ್​ ಎಂಬ ಪೇಜ್​ ಮೂಲಕ ಜನರ ಪ್ರೀತಿಗಳಿಸಿದ್ದಾರೆ. ಅಭಿಮಾನಿಗಳು ಕನ್ನಡಕ್ಕೆ ಬನ್ನಿ ಅಂತ ಇವರನ್ನು ಕರಿತಾಯಿದ್ರೂ, ಕೊನೆಗೆ ಆ ಕಾಲ ಕೂಡಿಬಂದಿದೆ. ಸಖತ್​ ಆಗಿರೋ ಪಾತ್ರದ ಮೂಲಕ ಕಾಲಿಡ್ತಿದ್ದಾರೆ ಮನೋಜ್​ ಕುಮಾರ್​.

ಈ ಧಾರಾವಾಹಿಗೆ ಬರೋದಾದ್ರೇ, ಇದು ಬೆಂಗಾಲಿ ಮೂಲದ ಕಥೆ. ಬೆಂಗಾಲಿ ಭಾಷೆಲಿ ಸೂಪರ್​ ಹಿಟ್​ ಆಗಿರೋ ಧಾರಾವಾಹಿನ್ನ ಕನ್ನಡಕ್ಕೆ ರಿಮೇಕ್ ಮಾಡಲಾಗ್ತಿದೆ. ನಾಯಕಿ ಭಾರ್ಗವಿ ಅಪ್ಪನಿಗೆ ಆದ ಅನ್ಯಾಯಕ್ಕೆ ಧ್ವನಿಯತ್ತುವ ಯುವ ವಕೀಲೆ. ಅಪ್ಪನಿಗೆ ಅವಮಾನ ಮಾಡಿದ ಫೇಮಸ್​ ಲಾಯರ್​ ಮಗ ನಾಯಕ. ಭಾರ್ಗವಿ ಮೇಲೆ ನಾಯಕನಿಗೆ ಲವ್​ ಆ್ಯಟ್ ಫಸ್ಟ್​ ಸೈಟ್​ ಆಗುತ್ತೆ. ಆದ್ರೇ ತನ್ನ ಅಪ್ಪ ಹಾಗೂ ಭಾರ್ಗವಿಗೆ ಜಿದ್ದಾಜಿದ್ದಿ ಬಿದ್ದಿರೋದು ಗೊತ್ತಿರಲ್ಲ. ನಾಯಕ-ನಾಯಕಿ ಇಬ್ಬರೂ ಪ್ರೀತಿಲಿ ಮುಳಗಿದ್ದಾಗ ಸತ್ಯ ಹೊರ ಬರುತ್ತೆ. ಮಂದೆ ಇವರ ಪ್ರೀತಿ ಹೇಗೆ ಸಾಗುತ್ತೆ? ಭಾರ್ಗವಿ ಅಪ್ಪನ ಮರ್ಯಾದೆಗೆ ಪ್ರೀತಿನ ತ್ಯಾಗ ಮಾಡ್ತಾಳಾ? ಅಷ್ಟಕ್ಕೂ ಆ ಲಾಯರ್​ಗೂ ಭಾರ್ಗವಿ ಅಪ್ಪನಿಗೂ ಯಾಕಷ್ಟು ದ್ವೇಷ? ಈ ಎಲ್ಲಾ ಕುತೂಹಲದ ಅಂಶಗಳಿಗೆ ಭಾರ್ಗವಿ ಎಲ್​ ಎಲ್​​ ಬಿ ನೋಡಬೇಕಿದೆ​.

publive-image

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಜೊತೆ ಜೊತೆಯಲಿ ಸೀರಿಯಲ್ ಮೇಘಾ ಶೆಟ್ಟಿ; ಏನದು?

ಮತ್ತೊಂದು ಹೊಸ ಮತ್ತೊಂದು ಹೊಸ ಧಾರಾವಾಹಿ ಅನೌನ್ಸ್​​ ಆಗಿದೆ. ಅದುವೇ ಮುದ್ದು ಸೊಸೆ ಎಂಬ ಟೈಟಲ್​ನೊಂದಿಗೆ ಬರ್ತಿದೆ ಸ್ಟೋರಿ. ಟ್ಯಾಗ್​ ಲೈನ್​ನಲ್ಲಿ ಸ್ಕೂಲ್​ ಬೆಂಚ್​ನಿಂದ ಹಸೆಮಣೆಗೆ ಬರ್ತಿದ್ದಾಳೆ ಮುದ್ದು ಸೊಸೆ ಎಂದು ಬರೆಯಲಾಗಿದೆ. ಇದನ್ನ ನೋಡಿದ್ರೇ ಬಾಲ್ಯ ವಿವಾಹದ ಕುರಿತು ಸ್ಟೋರಿ ಇರಲಿದೆ ಎಂಬ ಹಿಂಟ್​ ಅಂತೂ ಸಿಕ್ಕಿದೆ. ಈ ಸೀರಿಯಲ್ ಮೂಲಕ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಾಯಕಿ ಆಗಿ ಕನ್ನಡದಲ್ಲಿ ಲಾಂಚ್​ ಆಗ್ತಿದ್ದಾರೆ. ಈಗಾಗಲೇ ತೆಲುಗಿನ ಜೇಮಿನಿ ವಾಹಿನಿಯಲ್ಲಿ ಪೂರ್ಣ ಪ್ರಮಾಣದ ನಾಯಕಿ ಆಗಿ ಜನಪ್ರಿಯತೆ ಗಳಿಸಿರೋ ಪ್ರತಿಮಾ ಕನ್ನಡದಲ್ಲೂ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಎರಡೂ ಧಾರಾವಾಹಿಗಳು ನಿರೀಕ್ಷೆ ಹೆಚ್ಚಿಸಿವೆ. ಈ ಧಾರಾವಾಹಿಗಳಿಗೆ ಯಾವ ಎರಡು ಸೀರಿಯಲ್ ಜಾಗಬಿಟ್ಟುಕೊಟ್ಟು ಮುಕ್ತಾಯವಾಗಲಿವೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment