ಚಿತ್ರರಂಗಕ್ಕೆ ಮತ್ತೊಂದು ಆಘಾತ; ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮನೋಜ್ ಕುಮಾರ್ ಇನ್ನಿಲ್ಲ

author-image
Ganesh
Updated On
ಚಿತ್ರರಂಗಕ್ಕೆ ಮತ್ತೊಂದು ಆಘಾತ; ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮನೋಜ್ ಕುಮಾರ್ ಇನ್ನಿಲ್ಲ
Advertisment
  • ದೇಶ ಭಕ್ತಿ ಸಿನಿಮಾಗಳಲ್ಲಿ ಹೆಸರು ಮಾಡಿದ್ದ ಮನೋಜ್ ಕುಮಾರ್
  • ‘ಭರತ್ ಕುಮಾರ್’ ಎಂದೇ ಜನಪ್ರಿಯಗೊಂಡಿದ್ದ ಹಿರಿಯ ನಟ
  • ಮನೋಜ್ ಕುಮಾರ್ ನಿಜ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ

ಬಾಲಿವುಡ್​ನ ಹಿರಿಯ ನಟ, ನಿರ್ದೇಶಕ ಮನೋಜ್ ಕುಮಾರ್ (Manoj Kumar ) ಇಂದು ಬೆಳಗ್ಗೆ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮುಂಬೈನ ಕೋಕಿಲಾ ಧೀರೂಭಾಯಿ ಅಂಬಾನಿ ( Kokila Dhirubhai Ambani ) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮನೋಜ್ ಕುಮಾರ್ ದೇಶಭಕ್ತಿ ( patriotic films) ಕುರಿತ ಚಲನಚಿತ್ರಗಳಲ್ಲಿ ಹೆಸರು ಮಾಡಿದ್ದರು. ದೇಶಭಕ್ತಿ ಪ್ರಧಾನ ಚಿತ್ರಗಳಿಂದಾಗಿಯೇ ಮನೋಜ್ ಕುಮಾರ್ ಅವರನ್ನು ‘ಭರತ್ ಕುಮಾರ್’ ಎಂದು ಕರೆಯಲಾಗುತ್ತಿತ್ತು.

ನಿಜವಾದ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ

ಸಿನಿ ಜಗತ್ತಿಗೆ ಪ್ರವೇಶಿಸಿದ ನಂತರ ಅನೇಕ ನಟರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ಮನೋಜ್ ಕುಮಾರ್ ಕೂಡ ಒಬ್ಬರು. ಸಿನಿಮಾದಿಂದ ಪ್ರಭಾವಿತರಾಗಿ ಹೆಸರು ಬದಲಾಯಿಸಿಕೊಂಡರು. ಆದರೆ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಭರತ್ ಕುಮಾರ್’ ಎಂದು ಕರೆಯುತ್ತಿದ್ದರು. ಮನೋಜ್ ಕುಮಾರ್ ಅವರ ನಿಜವಾದ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ ಎಂದಾಗಿತ್ತು.

ಇದನ್ನೂ ಓದಿ: ಸುದೀಪ್‌, ಜಗ್ಗೇಶ್ ಜೊತೆ ಕಿರಿಕ್‌.. ಸ್ಯಾಂಡಲ್​ವುಡ್ ನಿರ್ಮಾಪಕ M.N ಕುಮಾರ್ ಬಂಧನ; ಏನಿದು ಕೇಸ್‌?

publive-image

ಹರಿಕಿಶನ್ ಗಿರಿ, ಜುಲೈ 24, 1937 ರಂದು ಅಬೋಟಾಬಾದ್‌ನಲ್ಲಿ ಜನಿಸಿದರು, ದೇಶ ವಿಭಜನೆ ನಂತರ ಅದು ಪಾಕಿಸ್ತಾನದ ಭಾಗವಾಯಿತು. ಆ ದಿನಗಳಲ್ಲಿ ಮನೋಜ್ ಕುಮಾರ್ ಪೋಷಕರು ಭಾರತವನ್ನು ಆರಿಸಿಕೊಂಡರು. ಮನೋಜ್ ಕುಮಾರ್​ಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ಒಲವಿತ್ತು. ಅಶೋಕ್ ಕುಮಾರ್, ದಿಲೀಪ್ ಕುಮಾರ್ ಮತ್ತು ಕಾಮಿನಿ ಕೌಶಲ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ತಮ್ಮ ನೆಚ್ಚಿನ ನಟರ ಸಿನಿಮಾಗಳ ಪ್ರಭಾವಿತರಾಗಿ ತಮ್ಮ ಹೆಸರನ್ನು ಮನೋಜ್ ಕುಮಾರ್ ಎಂದು ಬದಲಾಯಿಸಿಕೊಂಡಿದ್ದರು.

ಮನೋಜ್ ಕುಮಾರ್ ಕಾಲೇಜು ದಿನಗಳಲ್ಲಿ ತುಂಬಾ ಸುಂದರರಾಗಿದ್ದರು. ಸಿನಿಮಾ ಮೇಲಿನ ಹುಚ್ಚಿನಿಂದಾಗಿ ರಂಗಭೂಮಿ ಪ್ರವೇಶ ಮಾಡಿದರು. ರಂಗಭೂಮಿ ಮೂಲಕ ಶುರುವಾದ ನಂಟು ಅವರನ್ನು ಮುಂಬೈಗೆ ಕರೆದುಕೊಂಡು ಬಂದಿತು. 1957 ರಲ್ಲಿ ಬಿಡುಗಡೆಯಾಗಿದ್ದ ‘ಫ್ಯಾಷನ್’ ಚಿತ್ರದೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ‘ಕಚ್ಚಿ ಕಿ ಗುಡಿಯಾ’ 1960 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಇದು ಮನೋಜ್ ಕುಮಾರ್​ಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ‘ಉಪ್ಕಾರ್’, ‘ಪತ್ತರ್ ಕೆ ಸನಮ್’, ‘ರೋಟಿ ಕಪ್ಡಾ ಔರ್ ಮಕಾನ್’, ‘ಸನ್ಯಾಸಿ’ ಮತ್ತು ‘ಕ್ರಾಂತಿ’ಯಂತಹ ಅದ್ಭುತ ಚಿತ್ರಗಳನ್ನು ನೀಡಿದರು. ಸಿನಿರಂಗಕ್ಕೆ ಸಲ್ಲಿಸಿದ ಸೇವೆಗೆ ದಾದಾ ಸಾಹೇಬ್ ಫಾಲ್ಕೆ ( Dadasaheb Phalke) ಪ್ರಶಸ್ತಿ ಒಲಿದು ಬಂದಿತ್ತು.

ಇದನ್ನೂ ಓದಿ: ತಂಪೆರೆದ ಮಳೆ, ಭೂಮಿಗೆ ಬಂತು ಜೀವಕಳೆ.. ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಆಗ್ತಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment