/newsfirstlive-kannada/media/post_attachments/wp-content/uploads/2024/11/NAGARJUN.jpg)
ಟಾಲಿವುಡ್​ ಸೂಪರ್ ಸ್ಟಾರ್ ನಾಗರ್ಜುನ್ ಅವರು ಈಗಲೂ ಯುವ ನಟರಂತೆ ಅಭಿಮಾನಗಳನ್ನು ಸೆಳೆಯುತ್ತಾರೆ. ಇವರ ಲೈಫ್​ಸ್ಟೈಲ್ ಯಾವಗಲೂ ಎಲ್ಲರಿಗಿಂತಲೂ ಕೊಂಚ ಸ್ಪೆಷಲ್ ಆಗಿ ಇರುತ್ತದೆ. ತೆಲುಗು ಸಿನಿ ರಂಗದ ಶ್ರೀಮಂತ ನಟರಲ್ಲಿ ಇವರು ಒಬ್ಬರಾಗಿದ್ದು ಸದ್ಯ ನ್ಯೂ ಬ್ರ್ಯಾಂಡ್ ಟೊಯೊಟಾ ಲೆಕ್ಸಸ್ ಕಾರನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ ಕೇಳಿದರೆ ಫುಲ್ ಶಾಕ್ ಆಗೋದು ಗ್ಯಾರಂಟಿ.
ಸಿನಿಮಾಗಳಲ್ಲಿ ಅಭಿನಯ ಮಾಡುವುದರ ಜೊತೆಗೆ ಆಟೋಮೊಬೈಲ್ಸ್​ ಮೇಲೆಯೂ ನಟ ನಾಗರ್ಜುನ್​ ಅವರಿಗೆ ಹೆಚ್ಚಿನ ಆಸಕ್ತಿ ಇದೆ. ಈಗಾಗಲೇ ಇವರ ಗ್ಯಾರೇಜ್​ನಲ್ಲಿ ಐಷಾರಾಮಿ ಬೈಕ್, ಕಾರುಗಳಿವೆ. ಸದ್ಯ ಇವುಗಳ ಪಟ್ಟಿಗೆ ಮತ್ತೊಂದು ದುಬಾರಿ ಮೊತ್ತದ ಕಾರು ಸೇರಿಕೊಂಡಿದೆ. ಈ ಕಾರಿನ ರಿಜಿಸ್ಟ್ರೇಶನ್ ಮಾಡಿಸಲೆಂದು ಹೈದರಾಬಾದ್​​ನಲ್ಲಿರುವ ಖೈರತಾಬಾದ್​ನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಒ) ಕಚೇರಿಗೆ ಟಾಲಿವುಡ್ ಕಿಂಗ್ ನಾಗಾರ್ಜುನ್ ಕಾರು ಸಮೇತ ಆಗಮಿಸಿದ್ದರು.
/newsfirstlive-kannada/media/post_attachments/wp-content/uploads/2024/11/NAGARJUN_1.jpg)
ಈ ವೇಳೆ ಅವರನ್ನು ಕಂಡ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಕಚೇರಿ ಸುತ್ತಮುತ್ತ ಸೇರಿಕೊಂಡಿದ್ದರು. ನಾಗರ್ಜುನ್ ಕಾರಿನಿಂದ ಇಳಿಯುತ್ತಿದ್ದಂತೆ ಫೋಟೋ ತೆಗೆದುಕೊಳ್ಳಲು ಮುಗಿ ಬಿದ್ದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಅವರನ್ನು ಕಚೇರಿ ಒಳಗೆ ಹೋಗಲು ಅನುಕೂಲ ಮಾಡಿಕೊಟ್ಟರು. ಇನ್ನು ರಿಜಿಸ್ಟ್ರೇಶನ್ ಕೆಲಸ ಮುಗಿದ ಮೇಲೆ ಫ್ಯಾನ್ಸ್ ಜೊತೆ ನಗುತ್ತ ಫೋಟೋಗೆ ಪೋಸ್ ಕೊಟ್ಟ ನಾಗರ್ಜುನ್ ಬಳಿಕ ಅವರು ಅಲ್ಲಿಂದ ತೆರಳಿದ್ದಾರೆ.
ಇನ್ನು ನಾಗರ್ಜುನ್ ಅವರು ಖರೀದಿ ಮಾಡಿದ ಕಾರಿನ ಹೆಸರು ಟೊಯೊಟಾ ಲೆಕ್ಸಸ್ ಆಗಿದ್ದು ಇದರ ಮೊತ್ತ 2 ಕೋಟಿ ರೂಪಾಯಿಗೂ ಅಧಿಕವಾಗಿದೆ. ಇದರಲ್ಲಿ ಒಮ್ಮೆಗೆ ನಾಲ್ವರು ಕುಳಿತು ಪ್ರಯಾಣಿಸಬಹುದು. ಕಾರಿನ ಒಳಗಡೆ ಸೇಫ್ಟಿ ಡೆಕ್ನಾಲಜಿ ಜೊತೆ ಡಿಜಿಟಲ್ ಮಾದರಿಯಲ್ಲಿ ಇರುತ್ತದೆ. ಸದ್ಯಕ್ಕೆ ನಾಗಾರ್ಜುನ ಅವರು ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಕುಬೇರ ಎನ್ನುವ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಇದರಲ್ಲಿ ಕಾಲಿವುಡ್ ಹೀರೋ ಧನುಷ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us