ಬಾಲಿವುಡ್​ನ ಖ್ಯಾತ ನಟಿಯ ಸಹೋದರಿ ಅರೆಸ್ಟ್​.. ಅಲಿಯಾ ಮಾಡಿದ್ದಾದರೂ ಏನು ಗೊತ್ತಾ?

author-image
Bheemappa
Updated On
ಬಾಲಿವುಡ್​ನ ಖ್ಯಾತ ನಟಿಯ ಸಹೋದರಿ ಅರೆಸ್ಟ್​.. ಅಲಿಯಾ ಮಾಡಿದ್ದಾದರೂ ಏನು ಗೊತ್ತಾ?
Advertisment
  • ಉದ್ದೇಶ ಪೂರ್ವಕವಾಗಿಯೇ ಅಲಿಯಾ ಈ ಕೆಲಸ ಮಾಡಿದಳಾ?
  • ಬಂಧನ ಆಗಿರುವ ಮಗಳ ಕುರಿತು ತಾಯಿ ಹೇಳುವುದೇ ಬೇರೆ
  • ಬಾಲಿವುಡ್ ನಟಿಯ ಸಹೋದರಿ ಗ್ಯಾರೇಜ್​ಗೆ ಏನ್ ಮಾಡಿದಳು?

ರಾಕ್‌ಸ್ಟಾರ್ ಖ್ಯಾತಿಯ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಅವರ ಸಹೋದರಿ ಅಲಿಯಾ ಫಕ್ರಿ ಅವರನ್ನು ನ್ಯೂಯಾರ್ಕ್​ನ ಕ್ವಿನ್ಸ್​​ನಲ್ಲಿ ಬಂಧಿಸಲಾಗಿದೆ. ಉದ್ದೇಶ ಪೂರ್ವಕವಾಗಿ ಮಾಜಿ ಗೆಳೆಯನ ಉಸಿರು ನಿಲ್ಲಿಸಿದ್ದಾಳೆ ಎನ್ನುವ ಆರೋಪದಲ್ಲಿ ಅಲಿಯಾ ಫಕ್ರಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅಲಿಯಾ ಫಕ್ರಿ ಅವರು ಎರಡು ಅಂತಸ್ತಿನ ಗ್ಯಾರೇಜ್​ಗೆ ಬೆಂಕಿ ಹಚ್ಚಿದ ಕಾರಣ ಉಸಿರಾಡಲು ಆಗದೇ ಒಳಗಿದ್ದಂತಹ ಎಡ್ವರ್ಡ್ ಜೇಕಬ್ಸ್ (35) ಮತ್ತು ಯುವತಿ  ಅನಸ್ತಾಸಿಯಾ ಎಟಿಯೆನ್ನೆ (33) ಕೊನೆಯುಸಿರೆಳೆದಿದ್ದಾರೆ. ಗ್ಯಾರೇಜ್​ಗೆ ಬಂದ ಅಲಿಯಾ ಫಕ್ರಿ ಮುಖ್ಯ ಬಾಗಿಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇದರಿಂದ ಕ್ಷಣಾರ್ಧದಲ್ಲೇ ಅಗ್ನಿ ಇಡೀ ಕಟ್ಟಡವನ್ನೇ ವ್ಯಾಪಿಸಿಕೊಂಡಿದೆ. ಈ ವೇಳೆ ಒಳಗಿದ್ದ ಇಬ್ಬರು ಹೊರಗೆ ಬರಲು ಸಾಕಷ್ಟು ಪ್ರಯತ್ನ ಪಟ್ಟರು.

ಇದನ್ನೂ ಓದಿ: Pushpa 2 The Rule ಸಿನಿಮಾದ ಟಿಕೆಟ್ ಬೆಲೆ ಭಾರೀ ಏರಿಕೆ.. ಅಲ್ಲು ಅರ್ಜುನ್ ಫ್ಯಾನ್ಸ್​ ಬೇಸರ

publive-image

ಆದರೆ ಇಡೀ ಗ್ಯಾರೇಜ್​ಗೆ ಒಂದೇ ಒಂದು ಬಾಗಿಲು ಇದ್ದಿದ್ದರಿಂದ ಇಬ್ಬರು ಹೊರಗಡೆ ಬರಲು ಆಗಲಿಲ್ಲ. ಹೀಗಾಗಿ ಹೊಗೆ ಹೆಚ್ಚಾಗಿದ್ದರಿಂದ ಉಸಿರಾಡಲು ಆಗದೇ ಬೆಂಕಿಯಿಂದ ಇಬ್ಬರು ಸಜೀವ ದಹನಗೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಸದ್ಯ ಈ ಸಂಬಂಧ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಅವರ ಸಹೋದರಿ ಅಲಿಯಾ ಫಕ್ರಿ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

ಇನ್ನು ಈ ಬಗ್ಗೆ ನಟಿ ನರ್ಗಿಸ್ ಫಕ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ತಾಯಿ ಈ ಕುರಿತು ಮಾತನಾಡಿದ್ದು, ಅವಳು ಅಂತಹ ಕೆಲಸ ಮಾಡುವಂತವಳು ಅಲ್ಲ. ಹಿಂಸೆಯಿಂದ ಯಾವತ್ತೂ ದೂರ ಇರುತ್ತಿದ್ದಳು. ಇದನ್ನು ನಾನು ನಂಬುವುದಿಲ್ಲ. ಕಾಳಜಿ ಇರುವಂತವಳು, ಸಹಾಯ ಮಾಡುವ ವ್ಯಕ್ತಿತ್ವದವಳು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment