/newsfirstlive-kannada/media/post_attachments/wp-content/uploads/2024/02/pavan-1.jpg)
ಚಾಲೆಂಜಿಂಗ್​​ ಸ್ಟಾರ್​​ ದರ್ಶನ್​ ಹಾಗೂ ನಿರ್ಮಾಪಕ ಉಮಾಪತಿ ಗೌಡ ಶ್ರೀನಿವಾಸ್​​ ನಡುವಿನ ಕಾಟೇರ ಟೈಟಲ್​​ವಾರ್​ ಬಗ್ಗೆ ಲೂಸಿಯಾ ಖ್ಯಾತಿಯ ನಟ ಪವನ್ ಕುಮಾರ್ ರಿಯಾಕ್ಟ್​​ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ.
ಪವನ್ ಕುಮಾರ್, ‘ಕನ್ನಡ ಚಿತ್ರರಂಗದಲ್ಲಿ ಚಿತ್ರರಂಗವೇ ಅಗ್ರಗಣ್ಯ. ಒಂದು ಸಿನಿಮಾಕ್ಕೆ ಕೇವಲ ನಟನಷ್ಟೆ ಮುಖ್ಯವಲ್ಲ. ನಿರ್ಮಾಪಕರು ಕೂಡ ಸಿನಿಮಾದ ಒಂದು ಭಾಗ. ಸಿನಿಮಾ ರಂಗದಲ್ಲಿ ಒಬ್ಬರು ದೊಡ್ಡವರು, ಮತ್ತೊಬ್ಬರು ಸಣ್ಣವರು ಅಂತಿಲ್ಲ. ಎಲ್ಲರೂ ಕೂಡ ಕನ್ನಡ ಸಿನಿಮಾ ರಂಗಕ್ಕೆ ಮುಖ್ಯವಾಗ್ತಾರೆ’ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ‘ನಿರ್ಮಾಪಕರು- ನಟರು ಒಗ್ಗೂಡಿ ಹೋಗಬೇಕು. ಯಾರೊಬ್ಬರಿಂದ ಏನೂ ಕೂಡ ಆಗುವುದಿಲ್ಲ. ಯಾರು ಇರಲಿ, ಇಲ್ಲದಿರಲಿ ಸಿನಿಮಾ ರಂಗ ಇದ್ದೇ ಇರುತ್ತದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us