newsfirstkannada.com

ದರ್ಶನ್ ಪತ್ನಿ ವಾರ್ನಿಂಗ್ ಕೊಟ್ರೂ ಬಿಡಲಿಲ್ಲ.. ದಾಸನ ಬಾಳಲ್ಲಿ ಬಂದು ತಪ್ಪು ಮಾಡಿಬಿಟ್ರಾ ಪವಿತ್ರಾ ಗೌಡ?

Share :

Published June 11, 2024 at 10:32pm

  ಆತ್ಮೀಯ ಫೋಟೋ ಶೇರ್ ಮಾಡಿ ಹಲ್​ಚಲ್ ಸೃಷ್ಟಿಸಿದ ಪವಿತ್ರಾ ಗೌಡ

  ಪತ್ನಿ ವಿಜಯಲಕ್ಷ್ಮೀ ವಾರ್ನಿಂಗ್‌ಗೂ ಕೇರ್‌ ಮಾಡಲಿಲ್ವಾ ಮಾಡೆಲ್​ ನಟಿ ಪವಿತ್ರಾ?

  ಈ ಹಿಂದೆ ಹಲವು ಘಟನೆಗಳಿಗೆ ಪವಿತ್ರಾ ಗೌಡ ಪರೋಕ್ಷವಾಗಿ ಕಾರಣವಂತೆ!

ಪವಿತ್ರಾ ಗೌಡ ನಟ ದರ್ಶನ್ ಯಾವುದೇ ವಿವಾದವಿದ್ರೂ ಅಲ್ಲಿ ಈ ಹೆಸರು ಇದ್ದೇ ಇರುತ್ತೆ. ಈಗ ದರ್ಶನ್ ಅರೆಸ್ಟ್ ಕೇಸ್​ನಲ್ಲೂ ಮತ್ತೆ ಪವಿತ್ರಾ ವಿಚಾರವೇ ಮುನ್ನೆಲೆಗೆ ಬಂದಿದೆ. ಇನ್‌ಫ್ಯಾಕ್ಟ್ ಈ ಕೇಸ್‌ನಲ್ಲಿ ಪವಿತ್ರಾ ಗೌಡ ಕೂಡ ಅರೆಸ್ಟ್ ಆಗಿದ್ದಾರೆ. ಹಿಂದೊಮ್ಮೆ ದರ್ಶನ್ ಜೊತೆಗಿನ ಆತ್ಮೀಯ ಫೋಟೋ ಶೇರ್ ಮಾಡಿ ಪವಿತ್ರಾ ಹಲ್ ಚಲ್ ಸೃಷ್ಟಿ ಮಾಡಿದ್ರು. ಇದಕ್ಕೆ ಪ್ರತಿಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿರುಗೇಟು ನೀಡಿದ್ದರು.

ನಟಿಯ ಪೋಸ್ಟ್​ಗೆ ಸಿಡಿದೆದಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ!

ಅವತ್ತು ದರ್ಶನ್ ನಟಿಸಿದ್ದ ಕಾಟೇರ್ ಸಿನಿಮಾದ ಸಕ್ಸಸ್​ ಮೀಟ್‌ ನಡೆಯಬೇಕಿತ್ತು. ಸಕ್ಸಸ್ ಮೀಟ್ ನಡೆಯೋ ಮುಂಚೆಯೇ ಅಂದು ಪವಿತ್ರಗೌಡ್ ಬಿಗ್ ಶಾಕ್ ನೀಡಿದ್ರು. ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ದರ್ಶನ್ ಅವರ ಜೊತೆ ಆತ್ಮೀಯವಾಗಿರುವ ಕೆಲವು ಫೋಟೋಗಳನ್ನ ಶೇರ್ ಮಾಡಿ ಅಚ್ಚರಿ ಮೂಡಿಸಿದ್ರು. ಬರೀ ಫೋಟೋ ಶೇರ್ ಮಾಡಿದ್ದು ಮಾತ್ರವಲ್ಲ, ನಮ್ಮ ರಿಲೇಶನ್​ಷಿಪ್​ಗೆ 10 ವರ್ಷ ಅಂತ ಕ್ಯಾಪ್ಷನ್ ಬೇರೆ ಹಾಕಿದ್ರು. ದರ್ಶನ್ ಜೊತೆಗಿದ್ದ ಫೋಟೋಗಳನ್ನ ಹಾಕಿದ್ದ ಪವಿತ್ರಾಗೌಡ ಈ ಸಂಬಂಧ ಹೀಗೆ ಮುಂದುವರೆಯಲಿ.

ನಮ್ಮ ಸಂಬಂಧಕ್ಕೆ ದಶಕದ ಸಂಭ್ರಮ ಅಂತೆಲ್ಲ ಬರೆದು ಪೋಸ್ಟ್ ಮಾಡಿದ್ರು. ಆದ್ರೆ ಈ ಫೋಸ್ಟ್ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿ ಮಾಡಿ ಬಿಟ್ಟಿತ್ತು. ಹೌದು, ಪವಿತ್ರಾ ಗೌಡ ಹಾಕಿದ ಈ ಪೋಸ್ಟ್​​ ಅಕ್ಷರಃ ಸುನಾಮಿಯನ್ನೇ ಸೃಷ್ಟಿಸಿಬಿಡ್ತು. ಮತ್ತೊಂದೆಡೆ ಪವಿತ್ರಾ ಗೌಡ ಅವರ ಈ ಪೋಸ್ಟ್​ ನೋಡಿ ಸಿಡಿದೆದಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಿಟ್ಟಿಗೆದ್ದು ಕೆಂಡಾಮಂಡಲವಾಗಿದ್ರು. ಪವಿತ್ರಾ ಗೌಡ ಅವರನ್ನೇ ನೇರವಾಗಿ ಟಾರ್ಗೆಟ್​ ಮಾಡಿದ ದರ್ಶನ್ ಪತ್ನಿ, ಪವಿತ್ರಾ ಗೌಡರಿಗೆ ಸಂಬಂಧಪಟ್ಟ ಹಳೆಯ ಖಾಸಗಿ ಫೋಟೋಗಳನ್ನ ಶೇರ್ ಮಾಡಿ ಆಕ್ರೋಶ ಹೊರಹಾಕಿದ್ದರು. ‘ಬೇರೊಬ್ಬರ ಗಂಡನ ಫೋಟೋವನ್ನು ಪೋಸ್ಟ್ ಮಾಡುವ ಮೊದಲು ಪ್ರಜ್ಞೆ ಇರಬೇಕು’ ಎಂದು ರೊಚ್ಚಿಗೆದ್ದಿದ್ದ ವಿಜಯಲಕ್ಷ್ಮಿ ಕಾನೂನು ಮೂಲಕ ತಕ್ಕ ಪಾಠ ಕಲಿಸುವ ಎಚ್ಚರಿಕೆ ರವಾನಿಸಿದ್ದರು.

ಪವಿತ್ರಾಗೌಡಗೆ ವಿಜಯಲಕ್ಷ್ಮೀ ವಾರ್ನಿಂಗ್! 

ಬೇರೊಬ್ಬರ ಗಂಡನ ಚಿತ್ರವನ್ನ ಪೋಸ್ಟ್ ಮಾಡುವ ಮೊದಲು ಈ ಮಹಿಳೆಗೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತೆ. ಪುರುಷ ವಿವಾಹಿತನೆಂದು ತಿಳಿದೂ ಕೂಡ ಈಕೆ, ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಹತ್ತಿರವಾಗಿದ್ದಾಳೆ. ಈ ಚಿತ್ರಗಳು ಸ್ಪಷ್ಟವಾಗಿ ಹೇಳ್ತಿವೆ ಖುಷಿ ಗೌಡ, ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಚಾರಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನ ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ. ಇಡೀ ಸಮಾಜಕ್ಕೆ ಬೇರೆ ರೀತಿಯ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.

ವಿಜಯಲಕ್ಷ್ಮೀ, ದರ್ಶನ್ ಪತ್ನಿ

ಅದ್ಯಾವಾಗ ಪವಿತ್ರಾ ಗೌಡ ಅವರ ಪೋಸ್ಟ್​ಗೆ ವಿಜಯಲಕ್ಷ್ಮಿ ರಿಯಾಕ್ಟ್​ ಮಾಡಿದ್ರೋ ಅಲ್ಲಿಗೆ ಈ ಬೆಳವಣಿಗೆ ದೊಡ್ಡ ತಿರುವು ಪಡೆದುಕೊಂಡಿತ್ತು. ದರ್ಶನ್​ಗೂ ಪವಿತ್ರಾ ಗೌಡಗೂ ಏನ್ ಸಂಬಂಧ? ಪವಿತ್ರಾ ಗೌಡ ಜೊತೆ ದರ್ಶನ್ ಯಾಕೆ ಇಷ್ಟು ಅನ್ಯೂನ್ಯವಾಗಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಪವಿತ್ರಾ ಗೌಡ ಅವರ ಮಗಳು ಖುಷಿ ಗೌಡ ಬಗ್ಗೆಯೂ ಚರ್ಚೆ ಶುರುವಾಯ್ತು. ಇದ್ರ ಜೊತೆಗೆ ವಿಜಯಲಕ್ಷ್ಮಿ ಅವರೇ, ಪವಿತ್ರಾ ಗೌಡ ಅವರ ಹಳೆಯ ಫೋಟೋಗಳನ್ನ ಶೇರ್ ಮಾಡಿ ಇನ್ನಷ್ಟು ಗೊಂದಲ ಮೂಡಿಸಿದರು. ಪವಿತ್ರಾ ಗೌಡಗೆ ಈಗಾಗಲೇ ಮದುವೆ ಆಗಿದೆ. ಒಂದು ಮಗು ಇದೆ. ಆದರೂ ದರ್ಶನ್ ಅವರ ಜೊತೆಗೆ ಆತ್ಮೀಯವಾಗಿರುವ ಫೋಟೋಗಳನ್ನ ಹಾಕಿದ್ದು ಎಷ್ಟು ಸರಿ ಅನ್ನೋ ಪ್ರಶ್ನೆ ಮುಂದಿಟ್ಟು ಚರ್ಚೆ ಹುಟ್ಟುಹಾಕಿದ್ರು.

ವಿಜಯಲಕ್ಷ್ಮಿ ವಾರ್ನಿಂಗ್​ ಬೆನ್ನಲ್ಲೇ ಪವಿತ್ರಾ ಗೌಡ ಕೌಂಟರ್!

ವಿಜಯಲಕ್ಷ್ಮಿ ಅವರು ಕಾನೂನು ಹೋರಾಟದ ಎಚ್ಚರಿಕೆ ಕೊಟ್ಟ ನಂತರ ಪವಿತ್ರಾ ಗೌಡ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ಕಡೆ ಕಾಟೇರ ಸಕ್ಸಸ್​ ಮೀಟ್​ ಮಾಡಬೇಕಿದ್ದ ದರ್ಶನ್ ಅವರ ಸಹ ಪ್ರೆಸ್​ಮೀಟ್​ ಕ್ಯಾನ್ಸಲ್ ಮಾಡಿ ಮೌನಕ್ಕೆ ಶರಣಾಗಿದ್ದರು. ಈ ನಡುವೆ ಪವಿತ್ರಾ ಗೌಡ ಮತ್ತು ವಿಜಯಲಕ್ಷ್ಮಿ ಹಾಕಿದ ಪೋಸ್ಟ್​ಗಳಿಂದ ಸೃಷ್ಟಿಯಾದ ಒಂದಷ್ಟು ಪ್ರಶ್ನೆಗಳು ಬರೀ ಪ್ರಶ್ನೆಗಳಾಗಿಯೇ ಉಳಿದುಕೊಂಡಿದ್ವು. ಪವಿತ್ರಾ ಗೌಡಗೆ ಮದುವೆ ಆಗಿದ್ಯಾ? ಈ ಸಂಜಯ್ ಸಿಂಗ್​ ಯಾರು? ಇವರಿಬ್ಬರು ಯಾಕೆ ದೂರ ಆದರು? ಪವಿತ್ರಾ ಗೌಡ ಮತ್ತು ದರ್ಶನ್ ಅವರ 10 ವರ್ಷದ ರಿಲೇಶನ್​ಷಿಪ್​ ಏನು? ಖುಷಿ ಗೌಡ ಯಾರ ಮಗಳು ಹೀಗೆ ಹಲವು ಪ್ರಶ್ನೆಗಳು ಕಾಡೋಕೆ ಶುರುವಾಗಿತ್ತು. ಆಗ ಖುದ್ದು ಪವಿತ್ರಾಗೌಡ ಪೋಸ್ಟ್ ಹಾಕುವ ಮೂಲಕ ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ವಿಜಯಲಕ್ಷ್ಮೀಗೆ ರಿವರ್ಸ್ ವಾರ್ನಿಂಗ್ ಕೊಟ್ಟಿದ್ರು.

ಖುಷಿ ಗೌಡ ದರ್ಶನ್ ಮಗಳಲ್ಲ ಅಂತ ಸ್ಪಷ್ಟನೆ ನೀಡಿದ್ದ ಪವಿತ್ರಾ!

ಪವಿತ್ರಾ ಗೌಡ ಅವರಿಗೆ ಸಂಜಯ್ ಸಿಂಗ್ ಜೊತೆ ಮದುವೆ ಆಗಿದೆ. ಈ ದಂಪತಿಗೆ ಖುಷಿ ಗೌಡ ಎನ್ನುವ ಮಗಳು ಕೂಡ ಇದ್ದಾಳೆ ಎಂದು ವಿಜಯಲಕ್ಷ್ಮಿ ಉಲ್ಲೇಖಿಸಿದ್ದರು. ಇದಕ್ಕೆ ರಿಯಾಕ್ಟ್​ ಮಾಡಿರುವ ಪವಿತ್ರಾ ಗೌಡ, ಹೌದು ನನಗೆ ಸಂಜಯ್ ಜೊತೆ ಮದುವೆ ಆಗಿತ್ತು. ಆದರೆ ನಮ್ಮ ಲೈಫ್​ಲ್ಲಿ ಉಂಟಾದ ಸಮಸ್ಯೆಗಳಿಂದ ಡಿವೋರ್ಸ್ ಪಡೆದಿದ್ದೇನೆ ಎಂದಿದ್ರು. ಇನ್ನು ಖುಷಿ ಗೌಡ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ಪವಿತ್ರಾ ಗೌಡ, ಖುಷಿ ಗೌಡ ದರ್ಶನ್ ತೂಗುದೀಪ ಶ್ರೀನಿವಾಸ್ ಅವರ ಮಗಳು ಅಂತಾ ನಾನು ಎಲ್ಲೂ ಹೇಳಿಲ್ಲ ಎನ್ನುವ ಮೂಲಕ ವಿಜಯಲಕ್ಷ್ಮಿಗೆ ಕೌಂಟರ್​ಗೆ ಕೊಟ್ಟಿದ್ರು.

ಪವಿತ್ರಾ ಗೌಡ ರಿವರ್ಸ್ ವಾರ್ನಿಂಗ್!

”ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಲೈಫ್​ನಲ್ಲಿ ಉಂಟಾದ ಪ್ರಾಬ್ಲಂಗಳಿಂದ ನಾನು ಸಂಜಯ್ ಅವರಿಂದ ಡಿವೋರ್ಸ್ ಪಡೆದಿದೇನೆ. ಇಲ್ಲಿಯವರಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ!! ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ ಈ ವಿಚಾರವಾಗಿ ವಿಜಯಲಕ್ಷ್ಮಿರವರೆ ನನಗೆ ಹಲವಾರು ಸಾರಿ ಕಾಲ್ ಮಾಡಿ ನನ್ನ ಬಳಿ ಮಾತನಾಡಿದ್ದು, ವಿಜಯಲಕ್ಷ್ಮಿರವರಿಗೆ ಯಾವುದೇ ರೀತಿಯ ಪ್ರಾಬ್ಲಂ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ಸಾಕ್ಷಿ ಹಾಗೂ ನನ್ನ ಡಿವೋರ್ಸ್ ಡಾಕ್ಯುಮೆಂಟ್​ ಸಮಯ ಬಂದಾಗ ಹಂಚಿಕೊಳ್ಳುತ್ತೇನೆ). ಇದೀಗ ವಿಜಯಲಕ್ಷ್ಮಿರವರು ನನ್ನ ವಿರುದ್ಧವಾಗಿ ಪೋಸ್ಟ್​ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ಟೀನೆಜ್​ ಮಗಳಾದ ಖುಷಿ ಗೌಡಳ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಎಂಬ ಇನ್ಸ್ಟಾಗ್ರಾಂ ಪೋಸ್ಟ್​ನಲ್ಲಿ ಬಹಳಷ್ಟು ಜನ ಕೆಟ್ಟ ಭಾಷೆಯಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟು ಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವೈಯಕ್ತಿಕ ಫೋಟೋಗಳನ್ನ ಪೋಸ್ಟ್​ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಲೀಗಲ್ ಆ್ಯಕ್ಷನ್ ತಗೊಳೋ ಹಕ್ಕು ಇದೆ, ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ! ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ.

ಪವಿತ್ರ ಗೌಡ

ಇದೊಂದೇ ಅಲ್ಲ, ದರ್ಶನ್‌ ಬರ್ತ್‌ಡೇ ಸೆಲಬ್ರೇಷನ್‌ ವಿಡಿಯೋವನ್ನ ಕಿರುತೆರೆ ನಟಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆ ಹುಟ್ಟುಹಬ್ಬದ ಸೆಲಬ್ರೇಷನ್‌ನಲ್ಲಿ, ಪವಿತ್ರಾ ಗೌಡ ಸೇರಿದಂತೆ ಹಲವು ನಟಿಯರು ಇದ್ದರು. ಯಾವಾಗ ಈ ಪೋಸ್ಟ್‌ನ ನಟಿ ಹಾಕಿದ್ರೋ, ವಿಜಯಲಕ್ಷ್ಮೀ ಕೆಂಡಾಮಂಡಲವಾದರು. ಆ ನಂತರ ಆ ನಟಿ ಬರ್ತ್ ಡೇ ಸೆಲಬ್ರೇಷನ್ ಪೋಸ್ಟ್‌ನ ಡಿಲೀಟ್ ಮಾಡಿದ್ದರು. ಈ ಹಿಂದೆ ಹಲವು ಘಟನೆಗಳಿಗೆ ಪವಿತ್ರಾಗೌಡ ಪರೋಕ್ಷವಾಗಿ ಕಾರಣವಾಗಿದ್ದರು. ಆದ್ರೆ, ಈ ಕೇಸ್‌ನಲ್ಲಿ ಅವರೇ ಪ್ರತ್ಯಕ್ಷ ಕಾರಣ ಅನ್ನೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗ್ತಿದೆ.

ಇಷ್ಟೇ ಅಲ್ಲಾ, ಈ ಕೇಸ್‌ನಲ್ಲಿ ಕೇವಲ ದರ್ಶನ್ ಮಾತ್ರ ಆರೋಪಿಯಲ್ಲ, ಪವಿತ್ರಾ ಗೌಡ ಕೂಡ ಆರೋಪಿ. ಅವರು ಕೂಡ ನಟ ದರ್ಶನ್‌ ಜೊತೆಯಲ್ಲಿಯೇ ಅರೆಸ್ಟ್ ಆಗಿದ್ದಾರೆ. ವಕೀಲರ ಜೊತೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಬಂದಿದ್ದ ಪವಿತ್ರಾಗೌಡ ಅವರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆನಂತರ ಪವಿತ್ರಾಗೌಡ ಅವರನ್ನೂ ಕೂಡ ಬಂಧಿಸಿದರು. ಇದಾದ ನಂತರ ಪೊಲೀಸ್ ಠಾಣೆಯಲ್ಲಿಯೇ ಮೆಡಿಕಲ್ ಚೆಕಪ್ ಮಾಡಿಸಿ, ನ್ಯಾಯಾಲಯ ಮುಂದೆ ಹಾಜರುಪಡಿಸಿದರು. ಪವಿತ್ರಾ ಗೌಡ ಅವರ ಜೊತೆಗಿನ ಮುಸುಕಿನ ಗುದ್ದಾಟದ ಹೊರತಾಗಿಯೂ ವಿಜಯಲಕ್ಷ್ಮೀ ದರ್ಶನ್ ಜೊತೆ ಚೆನ್ನಾಗಿಯೇ ಇದ್ದರು. ಕೆಲ ದಿನಗಳ ಹಿಂದೆ ಅವರ ಮ್ಯಾರೇಜ್ ಆ್ಯನಿವರ್ಸರಿಯನ್ನ ವಿದೇಶದಲ್ಲಿ ಸೆಲಬ್ರೇಟ್ ಮಾಡಲಾಗಿತ್ತು. ನಟ ದರ್ಶನ್‌ ಫ್ಯಾನ್ಸ್‌ ಆಯೋಜಿಸಿದ್ದ ಪಾರ್ಟಿಯಲ್ಲಿ ವಿಜಯಲಕ್ಷ್ಮೀ ಮತ್ತು ದರ್ಶನ್ ಭಾಗಿಯಾಗಿದ್ದರು. ಆದ್ರೀಗ, ಪವಿತ್ರಾ ಗೌಡ ಕಾರಣಕ್ಕಾಗಿ ನಟ ದರ್ಶನ್‌ ಕೊಲೆ ಪ್ರಕರಣದ ಆರೋಪಿಯಾಗಿರೋದು ನಿಜಕ್ಕೂ ಪತ್ನಿ ವಿಜಯಲಕ್ಷ್ಮೀ ಅವರಿಗೆ ದೊಡ್ಡ ಆಘಾತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಪತ್ನಿ ವಾರ್ನಿಂಗ್ ಕೊಟ್ರೂ ಬಿಡಲಿಲ್ಲ.. ದಾಸನ ಬಾಳಲ್ಲಿ ಬಂದು ತಪ್ಪು ಮಾಡಿಬಿಟ್ರಾ ಪವಿತ್ರಾ ಗೌಡ?

https://newsfirstlive.com/wp-content/uploads/2024/06/dboss5.jpg

Load More