newsfirstkannada.com

ಡಾರ್ಲಿಂಗ್ ಪ್ರಭಾಸ್​ರನ್ನ​ ಟ್ರೋಲ್ ಮಾಡ್ತಿರೋದ್ಯಾಕೆ​.. ಕಾರಣ ಏನು?

Share :

Published May 14, 2024 at 9:46am

Update May 14, 2024 at 11:11am

  ವೋಟ್ ಮಾಡಿದ ಚಿರಂಜೀವಿ, ರಾಮ್​ಚರಣ್, ಜ್ಯೂ.ಎನ್​ಟಿಆಟ್​

  ಆಂಧ್ರಪ್ರದೇಶದ ಲೋಕಸಭಾ ಎಲೆಕ್ಷನ್​ಗೆ ಪ್ರಮುಖರು ಮತದಾನ

  ಪ್ರಭಾಸ್ ರೀತಿ ಕಾಣುವ ಕೆಲವರ ಫೋಟೋಗಳನ್ನ ಹಾಕಿ ಟ್ರೋಲ್​

ಆಂಧ್ರ ಪ್ರದೇಶದ ಲೋಕಸಭಾ ಚುನಾವಣೆಗೆ ಭರ್ಜರಿಯಾಗಿ ಮತದಾನ ನಿನ್ನೆ ನಡೆದಿದೆ. ಎಲ್ಲರೂ ಕೂಡ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಿನಿಮಾ ನಟರಾದ ಮೆಗಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್, ಎನ್​ಟಿಆರ್, ರಾಮ್​ ಚರಣ್ ತೇಜ್ ಫ್ಯಾಮಿಲಿ ಸಮೇತ ಬಂದು ವೋಟ್ ಮಾಡಿದ್ದಾರೆ. ಆದರೆ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ತೆಲುಗಿನ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ.

ಬಾಹುಬಲಿ, ಸಲಾರ್ ಖ್ಯಾತಿಯ ನಟ, ಯಂಗ್ ರೆಬಲ್ ಸ್ಟಾರ್ ಪ್ರಭಾಸ್​ ಅವರು ವೋಟ್ ಮಾಡಿಲ್ಲವೆಂದು ಹೇಳಲಾಗುತ್ತಿದೆ. ಈ ಬಗ್ಗೆ ಒಂದು ಫೋಟೋ ಕೂಡ ಎಲ್ಲಿಯೂ ಇಲ್ಲ. ಅವರು ಎಲ್ಲಿದ್ದಾರೆ ಅಂತಲೂ ತಿಳಿದಿಲ್ಲ. ಜನರಿಗೆ ಮಾದರಿಯಾಗುವ ಫೇಮಸ್ ನಟರೇ ಈ ರೀತಿ ಮಾಡಿದರೆ ಸಾಮಾನ್ಯ ಮತದಾರರು ಇನ್ನೇನು ಮಾಡುತ್ತಾರೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಅಲ್ಲದೇ ತೆಲುಗಿನ ನಟ ರಾಜಶೇಖರ್ ವೋಟ್​ ಮಾಡಿ ಶೇರ್ ಮಾಡಿದ ಫೋಟೋವನ್ನು ಪ್ರಭಾಸ್ ವೋಟ್ ಹಾಕಿದ್ದಾರೆ ಎಂದು ಹೇಳಿ ಟ್ರೋಲ್ ಮಾಡಲಾಗುತ್ತಿದೆ. ಇದರ ಜೊತೆ ಪ್ರಭಾಸ್ ರೀತಿ ಕಾಣುವ ಕೆಲವರ ಫೋಟೋಗಳನ್ನು ಶೇರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಇದುವರೆಗೂ ತೆಲಂಗಾಣ, ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗೆ ಮತದಾನ ನಡೆದಾಗಲೂ ನಟ ಪ್ರಭಾಸ್ ಅವರು ಹಕ್ಕು ಚಲಾಯಿಸಿಲ್ಲ. ಈ ಲೋಕಸಭಾ ಎಲೆಕ್ಷನ್​ಗೆ ಮತ ಹಾಕುತ್ತಾರೆ ಎಂದು ಭಾವಿಸಲಾಗಿತ್ತು. ಈ ಬಾರಿಯು ಪ್ರಭಾಸ್ ಯಾವ ಬೂತ್​ ಬಳಿಯು ಕಾಣಿಸಿಕೊಂಡಿಲ್ಲ. ಪ್ರಭಾಸ್ ಅವರಿಗೆ ವೋಟ್ ಮಾಡುವ ಹಕ್ಕು ಇಲ್ವಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಟ್ರೋಲ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾರ್ಲಿಂಗ್ ಪ್ರಭಾಸ್​ರನ್ನ​ ಟ್ರೋಲ್ ಮಾಡ್ತಿರೋದ್ಯಾಕೆ​.. ಕಾರಣ ಏನು?

https://newsfirstlive.com/wp-content/uploads/2024/05/PRABHAS-1.jpg

Load More