newsfirstkannada.com

ರಾಮ ಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್​​; ಜತೆಗೆ ಸಂಪೂರ್ಣ ಊಟದ ವೆಚ್ಚವೂ ಅವರದ್ದೇ!

Share :

Published January 21, 2024 at 8:07pm

  ರಾಮ ಮಂದಿರಕ್ಕೆ 50 ಕೋಟಿ ರೂ. ದೇಣಿಗೆ ನೀಡಿದ ನಟ ಪ್ರಭಾಸ್​​

  ಜತೆಗೆ ಪ್ರತಿಷ್ಠಾಪನೆ ಕಾರ್ಯದ ಊಟದ ವೆಚ್ಚ ಕೂಡ ಅವರದ್ದೇ!

  ನಟ ಪ್ರಭಾಸ್​​ ಕಾರ್ಯಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ

ಬೆಂಗಳೂರು: ನಾಳೆ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. ಹೀಗಾಗಿ ನಾಳೆ ಪ್ರತಿಷ್ಠಾಪನ ಕಾರ್ಯಕ್ಕೆ ಸಚಿನ್​​ ತೆಂಡೂಲ್ಕರ್​​, ವಿರಾಟ್​ ಕೊಹ್ಲಿ, ಸೂಪರ್​ ಸ್ಟಾರ್​​ ರಜನಿಕಾಂತ್​​, ಯಶ್​, ಅಮಿತಾಭ್​ ಬಚ್ಚನ್​ ಸೇರಿದಂತೆ ಗಣ್ಯರ ದಂಡೇ ಹೋಗುತ್ತಿದೆ. ಈ ಮಧ್ಯೆ ಟಾಲಿವುಡ್​​ ಸ್ಟಾರ್​ ಹೀರೋ ನಟ ಪ್ರಭಾಸ್​ ರಾಮ ಮಂದಿರಕ್ಕೆ 50 ಕೋಟಿ ನೀಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ಹೌದು, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಆಂಧ್ರದ ಶಾಸಕ ಚಿರ್ಲಾ ಜಗ್ಗಿರೆಡ್ಡಿ ಅವರು, ಪ್ರಭಾಸ್​​​ ರಾಮ ಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ್ದಾರೆ. ಜತೆಗೆ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂಪೂರ್ಣ ಊಟದ ವೆಚ್ಚ ವಹಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ಅಸ್ತಮಿಸಿರುವ ರವಿ ನಾಳೆ ರಾಮೋದಯವಾಗಿ ಅಯೋಧ್ಯೆಯನ್ನು ಬೆಳಗಲಿದ್ದಾನೆ. ಪ್ರಧಾನಿ ಮೋದಿ ರಾಮೋತ್ಸವದ ಭವ್ಯಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನ ಯಶಸ್ವಿಯಾಗಿ ನೆರವೇರಿಸಲು ವೇದಿಕೆ ಸಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್​​; ಜತೆಗೆ ಸಂಪೂರ್ಣ ಊಟದ ವೆಚ್ಚವೂ ಅವರದ್ದೇ!

https://newsfirstlive.com/wp-content/uploads/2024/01/Prabhas.jpg

Load More