/newsfirstlive-kannada/media/post_attachments/wp-content/uploads/2025/03/PRABHAS_ANUSHKA_NEW.jpg)
ಪ್ಯಾನ್ ಇಂಡಿಯಾ ಸ್ಟಾರ್ ಸಾಲು ಸಾಲು ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿ ಇರುವ ಸಲಾರ್ ಖ್ಯಾತಿ ಪ್ರಭಾಸ್ ಅವರು ಮೋಸ್ಟ್ ಬ್ಯಾಚುಲರ್. ಡಾರ್ಲಿಂಗ್ಗೆ 45 ವರ್ಷಗಳು ತುಂಬಿದ್ದರೂ ಇನ್ನು ಅವರಿಗೆ ಕಂಕಣಭಾಗ್ಯ ಎನ್ನುವುದು ರೀಲ್ ಮಾತ್ರ, ರಿಯಲ್ನಲ್ಲಿ ಇಲ್ಲ ಎಂದು ಹೇಳಲಾಗುತ್ತಿತ್ತು. ಸದ್ಯ ಇದಕ್ಕೆ ಫುಲಿಸ್ಟಾಪ್ ಬೀಳುವ ಸಂಭವ ಬಂದಿದ್ದು ಡಾರ್ಲಿಂಗ್ ಪ್ರಭಾಸ್ ವಿವಾಹ ಆಗೋ ಕಾಲ ಕೂಡಿ ಬಂದಿದೆ ಎನ್ನಲಾಗುತ್ತಿದೆ.
ಪ್ರಭಾಸ್ ಮದುವೆ ಆಗುತ್ತಿದ್ದಾರೆ ಎಂದ್ರೆ ಆ ಬ್ಯೂಟಿಫುಲ್ ಗರ್ಲ್ ಯಾರು ಎಂದು ಎಲ್ಲರ ತಲೆಯಲ್ಲೂ ಗಿರಕಿ ಹಾಕುತ್ತಿರುತ್ತದೆ. ಸದ್ಯ ಇದಕ್ಕೆ ಉತ್ತರ ಇಷ್ಟೇ, ಹೈದರಾಬಾದ್‌ನ ದೊಡ್ಡ ಉದ್ಯಮಿಯ ಮಗಳನ್ನು ಪ್ರಭಾಸ್ ವರಿಸುತ್ತಿದ್ದಾರಂತೆ. ಪ್ರಭಾಸ್ ಅವರ ಅಂಕಲ್ ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾ ದೇವಿ ಅವರು ಹುಡುಗಿಯನ್ನು ನೋಡಿ ಆಯ್ಕೆ ಮಾಡಿದ್ದಾರೆ ಎನ್ನುವ ಮಾತುಗಳು ತೆಲುಗು ಸಿನಿ ರಂಗದಲ್ಲಿ ಕೇಳಿ ಬರುತ್ತಿವೆ. ಚಿಕ್ಕಮ್ಮ ಹುಡುಗಿಯನ್ನು ನೋಡಿದ ಮೇಲೆಯೇ ಪ್ರಭಾಸ್ ಮದುವೆಯ ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಮಿರ್ಚಿ, ಬಿಲ್ಲಾ, ಬಾಹುಬಲಿ ಸಿನಿಮಾಗಳಲ್ಲಿ ಪ್ರಭಾಸ್ ಜೊತೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದ ಬ್ಯೂಟಿ ಅನುಷ್ಕಾ ಶೆಟ್ಟಿ ಜೊತೆ ಲವ್ನಲ್ಲಿದ್ದಾರೆ ಎಂದು ಇಷ್ಟು ದಿನ ಹೇಳಲಾಗುತ್ತಿತ್ತು. ಆದರೆ ಇದನ್ನು ಎರಡು ಕಡೆಯವರು ನಿರಾಕರಣೆ ಮಾಡಿದ್ದರು. ಇಬ್ಬರ ನಡುವೆ ಅಂತಹ ಪ್ರೀತಿ, ಪ್ರೇಮಾ ಏನು ಇಲ್ಲ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಇದೀಗ ದೊಡ್ಡ ಬ್ಯುಸಿನೆಸ್ ಮ್ಯಾನ್ ಅವರ ಮಗಳನ್ನು ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡುತ್ತಿದೆ. ಇದರಿಂದ ಅನುಷ್ಕಾ ಫ್ಯಾನ್ಸ್ಗೆ ಬೇಸರ ಎನ್ನಬಹುದು.
ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ; ರನ್ಯಾ ರಾವ್ ಜಾಮೀನು ಅರ್ಜಿ ವಜಾ
ಟಾಲಿವುಡ್ ಮೋಸ್ಟ್ ಬ್ಯಾಚುಲರ್ ಆಗಿರುವ ಪ್ರಭಾಸ್ ಅವರ ಮದುವೆ ಕುರಿತು ಗಾಸಿಪ್, ಊಹಾಪೋಹಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ ಈ ಸುದ್ದಿಯನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ ಪ್ರಭಾಸ್ ಅವರ ವಯಸ್ಸು ನೋಡಿದರೆ, ಹೈದರಾಬಾದ್‌ನ ಉದ್ಯಮಿಯ ಮಗಳ ಜೊತೆ ಮದುವೆ ಪಕ್ಕಾ ಎಂದು ಹೇಳಲಾಗುತ್ತಿದೆ.
ಮದುವೆ ಸಂಗತಿ ಹೀಗಿದ್ರೆ, ಡಾರ್ಲಿಂಗ್ ಪ್ರಭಾಸ್ ಸಲಾರ್, ದಿ ರಾಜಾ ಸಾಬ್, ಫೌಜಿ, ಸ್ಪಿರಿಟ್ ಸೇರಿದಂತೆ ಇನ್ನಿತರ ಸಿನಿಮಾಗಳ ಶೂಟಿಂಗ್ಗಳಲ್ಲಿ ಬ್ಯುಸಿ ಇದ್ದಾರೆ. ಅಭಿಮಾನಿಗಳಂತೂ ಈ ಸಿನಿಮಾ ಯಾವಾಗ ಮುಗಿಯುತ್ತಾವೋ, ಮದುವೆ ಯಾವಾಗ ಆಗುತ್ತಾರೋ ಎಂದು ಪಿಸುಗುಟ್ಟುತ್ತಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ