newsfirstkannada.com

‘420 ಇರೋರು ಅಬ್ ಕೀ ಬಾರ್ 400 ಅಂತಾರೆ’- ಮೋದಿ, ಬಿಜೆಪಿ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿ

Share :

Published March 17, 2024 at 3:16pm

    ಅಬ್ ಕೀ ಬಾರ್ 400 ಪಾರ್ ಅನ್ನೋ ಮಾತಲ್ಲಿ ಅಹಂಕಾರ ಕಾಣುತ್ತೆ

    ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಅಷ್ಟು ನಂಬರ್ ಬರಲು ಸಾಧ್ಯವಿಲ್ಲ

    400 ಸೀಟ್ ಅನ್ನು ಜನರಲ್ಲಿ ಬೇಡಿಕೊಂಡು ಕೊಟ್ರೆ ತಗೋಬೇಕು - ಪ್ರಕಾಶ್ ರಾಜ್

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ 400 ಸೀಟ್ ಗೆಲ್ಲಲು ಪಣತೊಟ್ಟು ಅಬ್ ಕೀ ಬಾರ್ 400 ಪಾರ್ ಅಂತ ಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ನಟ ಪ್ರಕಾಶ್ ರಾಜ್ ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. 420 ನಂಬರ್ ಇರೋರು 400 ಪ್ಲಸ್ ಬಗ್ಗೆ ಮಾತನಾಡ್ತಾರೆ. ಲೋಕಸಭಾ ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್ ಅವರು ಕಾಂಗ್ರೆಸ್ ಅಥವಾ ಯಾವುದೇ ಪಕ್ಷವಾಗಲಿ ಈ ಮಾತಲ್ಲಿ ಅವರ ಅಹಂಕಾರ ಕಾಣುತ್ತೆ. ನಾನಿಷ್ಟು ತೆಗೆದುಕೊಳ್ತೀನಿ ಅಲ್ಲ. ಚುನಾವಣೆಯಲ್ಲಿ 400 ಸೀಟ್ ಅನ್ನು ಜನರಲ್ಲಿ ಬೇಡಿಕೊಂಡು ಕೊಟ್ರೆ ತಗೋಬೇಕು. ನಾನು ತೆಗೆದುಕೊಳ್ತೀನಿ ಅನ್ನೋದು ಅಹಂಕಾರ ಆಗುತ್ತೆ ಎಂದಿದ್ದಾರೆ.

ಪರೋಕ್ಷವಾಗಿ ಪ್ರಧಾನಿ ಮೋದಿ ಅವರ ಘೋಷಣೆಯನ್ನು ಪ್ರಸ್ತಾಪಿಸಿದ ಪ್ರಕಾಶ್ ರಾಜ್ ಅವರು ಆ ಮಾತಿನ ಅಹಂಕಾರ, ಅತೃಪ್ತತೆ ಜನರಿಗೆ ಕಾಣುತ್ತಿದೆ. ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಅಷ್ಟು ನಂಬರ್ ಬರಲು ಸಾಧ್ಯವಿಲ್ಲ. ಹೀಗಾಗಿಯೇ ಸಣ್ಣ ಪಕ್ಷಗಳನ್ನು ಒಡೆಯೋದು, ಕೊಂಡುಕೊಳ್ಳುವುದನ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೆ.ಎಸ್‌ ಈಶ್ವರಪ್ಪ ಮನೆಗೆ ಹೋದ ಬಿಜೆಪಿ ಪ್ರಮುಖರಿಗೆ ಭಾರೀ ನಿರಾಸೆ; ಬಂಡಾಯ ‘ಬೆೆಂಕಿ’ ಆಯ್ತಾ?

ಇದೇ ವೇಳೆ ಪಕ್ಕದ ಆಂಧ್ರಪ್ರದೇಶದ ಉದಾಹರಣೆ ಕೊಟ್ಟ ಪ್ರಕಾಶ್ ರಾಜ್ ಅವರು ಅಲ್ಲಿ ಮಹಾಪ್ರಭುಗಳಿಗೆ ಶೇಕಡಾ 1ರಷ್ಟು ವೋಟು ಬರಲ್ಲ ಅಂತ ಗೊತ್ತು. ಹೀಗಾಗಿ ಆಂಧ್ರದ 3 ಪಕ್ಷಗಳ ಹಿಂದೆ ಅವರೇ ಇದ್ದಾರೆ. ಮೂರು ಪಕ್ಷಗಳನ್ನ ಇಟ್ಕೊಂಡ್ರೆ, ಆಳುವ ಪಕ್ಷ ಕೈನಲ್ಲಿ ಇಟ್ಕೊಂಡ ಹಾಗೇ ಆಗುತ್ತೆ. ಅವರಿಗೆ ಏನು ಸ್ಯಾಂಕ್ಷನ್ ಮಾಡಬೇಕೋ ಮಾಡಿದ್ದಾರೆ, ಅದರಲ್ಲಿ ಕಮಿಷನ್ ಬರ್ತಿದೆ. ಇಬ್ಬರು ಪ್ರಾದೇಶಿಕ ಪಕ್ಷದವರನ್ನ ಒಳ ಹಾಕಿಕೊಂಡಿದ್ದಾರೆ. ಅವನು 10, ಇವನು 12 ತೆಗೆದುಕೊಂಡರೂ ಆ ನಂಬರ್ ಕೊನೆಗೆ ಇವ್ರಿಗೆ ತಾನೇ ಎಂದು ಪ್ರಕಾಶ್ ರಾಜ್ ತಿರುಗೇಟು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘420 ಇರೋರು ಅಬ್ ಕೀ ಬಾರ್ 400 ಅಂತಾರೆ’- ಮೋದಿ, ಬಿಜೆಪಿ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿ

https://newsfirstlive.com/wp-content/uploads/2024/03/Prakash-Raj-on-Modi.jpg

Load More