newsfirstkannada.com

Prakash Raj: ಒಂದು ಸಿನಿಮಾಗೆ ನಟ ಪ್ರಕಾಶ್​ ರಾಜ್​ ಪಡೆಯೋ ಹಣ ಕೇಳಿದ್ರೆ ಶಾಕ್​ ಆಗ್ತೀರಾ..!

Share :

Published March 26, 2024 at 6:19pm

Update March 26, 2024 at 6:22pm

  ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ ಪ್ರಕಾಶ್ ರಾಜ್

  ಇಂದು ನಟ ಪ್ರಕಾಶ್​ ರಾಜ್​ ಅವರ 59ನೇ ಹುಟ್ಟುಹಬ್ಬ..!

  ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರೋ ಪ್ರಜಾಶ್​​ ರಾಜ್

ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ ಪ್ರಕಾಶ್ ರಾಜ್. ಇಂದು ಪ್ರಕಾಶ್​ ರಾಜ್​ ಅವರ 59ನೇ ಹುಟ್ಟುಹಬ್ಬ. ತಮ್ಮ ಅದ್ಬುತ ನಟನೆ ಜೊತೆಗೆ ಪ್ರಕಾಶ್​ ರಾಜ್​ ವಿವಾದಗಳಿಂದಲೂ ಭಾರೀ ಸುದ್ದಿ ಆಗುತ್ತಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರೋ ಪ್ರಜಾಶ್​​ ರಾಜ್​​ ರೆಮ್ಯೂನರೇಷನ್​​ ಎಷ್ಟು? ಅನ್ನೋ ಚರ್ಚೆ ಜೋರಾಗಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರಕಾಶ್​ ರಾಜ್​ ತಮಿಳು, ತೆಲುಗು, ಹಿಂದಿಯಲ್ಲೇ ಹೆಚ್ಚು ಜನ ಮನ್ನಣೆ ಪಡೆದುಕೊಂಡಿದ್ದು. ಕೇವಲ ವಿಲನ್​ ಮಾತ್ರವಲ್ಲ ಎಲ್ಲಾ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ಕೆಲವು ಸಿನಿಮಾಗಳಲ್ಲಿ ಕೆಲವು ಪಾತ್ರಗಳನ್ನು ಇವರು ಅಲ್ಲದೇ ಬೇರೆ ಯಾರು ಮಾಡಲು ಸಾಧ್ಯವಿಲ್ಲ ಅನ್ನೋಷ್ಟರ ಮಟ್ಟಿಗೆ ಪ್ರಕಾಶ್​ ರಾಜ್​ ಹೆಸರು ಮಾಡಿದ್ರು.

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತಾಡಿದ್ದ ಪ್ರಕಾಶ್​ ರಾಜ್​​, ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೇನೆ. ನನಗೆ ಯಾವುದೂ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ. ಕಮರ್ಷಿಯಲ್ ಚಿತ್ರಗಳನ್ನು ನಾನು ಹೇಟ್ ಮಾಡೋದಿಲ್ಲ ಎಂದರು.

5 ಕೋಟಿ ಕೂಡ ಪಡೆದಿದ್ದೇನೆ ಎಂದ ನಟ ಪ್ರಕಾಶ್​ ರಾಜ್​​

ನಾನು ಕೇವಲ ಹಣಕ್ಕಾಗಿ ಸಿನಿಮಾ ಮಾಡಲ್ಲ. ಕಥೆ ಇಷ್ಟ ಆದ್ರೆ ಫ್ರೀ ಆಗಿ ಸಿನಿಮಾ ಮಾಡುತ್ತೇನೆ. ಯಾಕೆ ಫ್ರೀ ಆಗಿ ಸಿನಿಮಾ ಮಾಡ್ತೀಯಾ? ಎಂದು ಜನ ಕೇಳುತ್ತಾರೆ. ನನ್ನ ಪೇಮೆಂಟ್​​ ನಾನು ನಿರ್ಧರಿಸುತ್ತೇನೆ. ಫ್ರೀ ಆಗಿ ಮಾಡಿದ್ದು ಇದೆ, ಒಂದು ಸಿನಿಮಾಗೆ 5 ಕೋಟಿ ಪಡೆದಿದ್ದು ಇದೆ. ಸಿನಿಮಾದ ಬಜೆಟ್​ ಮೇಲೆ ನನ್ನ ರೆಮ್ಯೂನರೇಷನ್​ ಡಿಸೈಡ್​ ಆಗುತ್ತೆ ಎಂದರು.

ಸದ್ಯ ಪ್ರಕಾಶ್​ ರಾಜ್​ ಅವರು ಅಲ್ಲು ಅರ್ಜುನ್​​ ಪುಷ್ಪಾ-2, ಪವನ್​ ಕಲ್ಯಾಣ್​​ ದೇ ಕಾಲ್​ ಹಿಮ್​ ಓಜಿ, ಜೂ. ಎನ್​ಟಿಆರ್​ ದೇವರ, ಧನುಷ್​​​ ರಾಯನ್​​, ಶ್ರೀ ಮುರಳಿ ಬಘೀರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎಲ್ಲಾ ಸಿನಿಮಾಗಳ ಬಜೆಟ್​​ ಸಾವಿರಾರು ಕೋಟಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Prakash Raj: ಒಂದು ಸಿನಿಮಾಗೆ ನಟ ಪ್ರಕಾಶ್​ ರಾಜ್​ ಪಡೆಯೋ ಹಣ ಕೇಳಿದ್ರೆ ಶಾಕ್​ ಆಗ್ತೀರಾ..!

https://newsfirstlive.com/wp-content/uploads/2024/03/Prakash-Raj_Social-Service1.jpg

Load More