newsfirstkannada.com

‘ಚಂದ್ರಯಾನ-3 ಬಿಜೆಪಿ ಪಕ್ಷದ ಯೋಜನೆಯಲ್ಲ’- ಟ್ರೋಲ್ ಆದ ನಟ ಪ್ರಕಾಶ್ ರಾಜ್‌ಗೆ ಹಿಗ್ಗಾಮುಗ್ಗ ತರಾಟೆ

Share :

Published August 21, 2023 at 12:54pm

Update August 21, 2023 at 12:55pm

    ‘ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯವಂತೆ ಇದು’

    ಪ್ರಕಾಶ್ ರಾಜ್ ಶೇರ್ ಮಾಡಿದ ಫೋಟೋ ಕಂಡು ಕೆಂಡಾಮಂಡಲ

    ಇದರಲ್ಲೂ ನಿಮ್ಮ ಹೊಲಸು ಮನಸ್ಥಿತಿ ತೊರಿಸಬೇಡಿ ಎಂದ ನೆಟ್ಟಿಗರು

ಕೋಟ್ಯಾಂತರ ಭಾರತೀಯರ ಕನವರಿಕೆ ಒಂದೇ. ನಮ್ಮ ಹೆಮ್ಮೆಯ ಚಂದ್ರಯಾನ-3 ಯಶಸ್ವಿಯಾಗಬೇಕು. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್ ಸಾಫ್ಟ್ ಆಗಿ ಲ್ಯಾಂಡ್‌ ಆಗಬೇಕೆಂದು ಹಾರೈಸುತ್ತಿದ್ದಾರೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್‌ಗೆ ಇಸ್ರೋ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಚಂದ್ರಯಾನ-3 ಯಶಸ್ಸಿನ ಕನಸು ನನಸಾಗುವ ಕಾಲ ಹತ್ತಿರವಾಗಿದೆ. ಆಗಸ್ಟ್ 23ರಂದು ಇಸ್ರೋ ವಿಜ್ಞಾನಿಗಳು ಕೊಡುವ ಸಿಹಿಸುದ್ದಿಯನ್ನೇ ಎಲ್ಲರೂ ಕಾಯುತ್ತಿರುವಾಗ ನಟ ಪ್ರಕಾಶ್ ರಾಜ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಚಂದ್ರನ ಮೇಲ್ಮೈ ನ ಹೊಸ ಪೋಟೋ ಸೆರೆ ಹಿಡಿದ ವಿಕ್ರಮ್​ ಲ್ಯಾಂಡರ್; ಇಲ್ಲಿದೆ ನೋಡಿ

ಬಹುಭಾಷಾ ನಟ ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಾರೆ. ಸದಾ ಟೀಕೆಗೆ ಗುರಿಯಾಗೋ ಪ್ರಕಾಶ್ ರಾಜ್ ಅವರು ಚಂದ್ರಯಾನದ ಕುರಿತು ಮಾಡಿರೋ ಒಂದು ಪೋಸ್ಟ್ ಸಖತ್ ಟ್ರೋಲ್ ಆಗಿದೆ. X ಸಾಮಾಜಿಕ ಜಾಲತಾಣದಲ್ಲಿ ನಟ ಪ್ರಕಾಶ್ ರಾಜ್ ಅವರು ಇದು ತಾಜಾ ಸುದ್ದಿ. ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಒಬ್ಬ ಚಾಯ್ ಮಾಡುವವನ ವ್ಯಂಗ್ಯಭರಿತ ಫೋಟೊವನ್ನು ಶೇರ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ನೆಟ್ಟಿಗರು ಪ್ರಕಾಶ್ ರಾಜ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಕಾಶ್ ರಾಜ್ ಅವರ ಈ ಫೋಟೋಗೆ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು, ಚಂದ್ರಯಾನ-3 ಬಿಜೆಪಿ ಪಕ್ಷದ ಯೋಜನೆಯಲ್ಲ. ಭಾರತದ ಹೆಮ್ಮೆಯ ವಿಜ್ಞಾನಿಗಳ ಸಾಧನೆ. ಇದರಲ್ಲೂ ನಿಮ್ಮ ಹೊಲಸು ಮನಸ್ಥಿತಿ ತೊರಿಸಬೇಡಿ ಎಂದು ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಇಸ್ರೋದ ಚಂದ್ರಯಾನ-3 ನಮ್ಮ ಭಾರತದ ಹೆಮ್ಮೆ. ಇದು ನೀವು ಇಸ್ರೋ ವಿಜ್ಞಾನಿಗಳಿಗೆ ಮಾಡಿದ ಅವಮಾನ. ಚಂದ್ರಯಾನಕ್ಕೆ ತಿರುಪತಿ ತಿಮ್ಮಪ್ಪನ ಆಶೀರ್ವಾದವಿದೆ. ಅದು ಯಶಸ್ಸು ಕಾಣಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವು ಸೋತಿದ್ದು ಯಾಕೆ ಅನ್ನೋದು ಗೊತ್ತಾಗಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಸದಾ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರುವ ನಟ ಪ್ರಕಾಶ್ ರಾಜ್ ಅವರು ಚಂದ್ರಯಾನದ ವಿಚಾರದಲ್ಲೂ ಟೀಕೆ ಮಾಡಲು ಹೋಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಫೇಸ್‌ಬುಕ್‌, X ಸೇರಿದಂತೆ ಹಲವು ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗ ತರಾಟೆ ತೆಗೆದುಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಚಂದ್ರಯಾನ-3 ಬಿಜೆಪಿ ಪಕ್ಷದ ಯೋಜನೆಯಲ್ಲ’- ಟ್ರೋಲ್ ಆದ ನಟ ಪ್ರಕಾಶ್ ರಾಜ್‌ಗೆ ಹಿಗ್ಗಾಮುಗ್ಗ ತರಾಟೆ

https://newsfirstlive.com/wp-content/uploads/2023/08/Prakash-Raj-Tweet-1.jpg

Load More