/newsfirstlive-kannada/media/post_attachments/wp-content/uploads/2025/07/pratham1.jpg)
ಬೆಂಗಳೂರು: ಈ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ದರ್ಶನ್​ ಫ್ಯಾನ್ಸ್​ ಮತ್ತು ನಟ ಪ್ರಥಮ್​ ಮಧ್ಯೆ ದೊಡ್ಡ ಸಮರವೇ ನಡೆದಿತ್ತು. ಪ್ರಥಮ್​ ತಂದ ಇಂಜೆಕ್ಷನ್ ಆರ್ಡರ್​ ಬಳಿಕ ಈ ಸಮರ ತಣ್ಣಗಾಗಿತ್ತು. ಈ ಮಧ್ಯೆ ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ಹೋದಾಗ ಗ್ಯಾಂಗ್​ವೊಂದು ಪ್ರಥಮ್‌ಗೆ ಧಮ್ಕಿ ಹಾಕಿರೋ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಐಸಿನಲ್ಲೇ.. ಐಸಿನಲ್ಲೇ ಸುಡ್ತಾಳಲ್ಲಪ್ಪೋ ಈ ಕನ್ನಡದ ಲಕ್ಷ್ಮೀ.. ಇಲ್ಲಿದೆ ಭೂಮಿಕಾ ಬ್ಯೂಟಿಫುಲ್​ ಫೋಟೋಸ್!
/newsfirstlive-kannada/media/post_attachments/wp-content/uploads/2025/07/pratham2.jpg)
ಇದೇ ವಿಚಾರ ಪ್ರಥಮ್ ಮತ್ತು ರಕ್ಷಕ್ ಬುಲೆಟ್ ಮಧ್ಯೆ ವೈಷಮ್ಯಕ್ಕೆ ಕಾರಣವಾಗಿತ್ತು. ಇದೀಗ ಇಬ್ಬರೂ ಆರೋಪ-ಪ್ರತ್ಯಾರೋಪ ಬಿಟ್ಟು ಒಂದಾಗಿದ್ದಾರೆ. ಪ್ರಥಮ್​ ಇತ್ತೀಚೆಗೆ ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ಹೋದಾಗ ಗ್ಯಾಂಗ್​ ಒಂದು ಕೊಲೆ ಬೆದರಿಕೆ ಹಾಕಿದೆಯಂತೆ. ಈ ಬಗ್ಗೆ ಪ್ರಥಮ್​ ದೂರು ನೀಡದಿದ್ರೂ ಲಾಯರ್​ ಜಗದೀಶ್ ವೈರಲ್ ಮಾಡಿರೋ ಆಡಿಯೋದಿಂದ ಈ ಸತ್ಯ ಹೊರಬಿದ್ದಿತ್ತು. ಈ ಆಡಿಯೋದಲ್ಲಿ ರಕ್ಷಕ್ ಬುಲೆಟ್ ಹೆಸರು ಕೇಳಿಬಂದಿತ್ತು. ಇದಾದ ಮೇಲೆ ಪ್ರಥಮ್ ಮತ್ತು ರಕ್ಷಕ್ ಬುಲೆಟ್ ಮಧ್ಯೆ ಆರೋಪ-ಪ್ರತ್ಯಾರೋಪ ನಡೆದಿತ್ತು. ಸ್ಥಳದಲ್ಲೇ ಇದ್ರೂ ರಕ್ಷಕ್ ರಕ್ಷಣೆಗೆ ಬಾರದೇ ಇರೋದು ಪ್ರಥಮ್‌ರನ್ನ ಕೆರಳಿಸಿತ್ತು. ಮಾತಿನ ದಾಳಿಗೂ ಕಾರಣವಾಗಿತ್ತು. ರಕ್ಷಕ್ ಕೂಡಾ ಪ್ರಥಮ್ ವಿರುದ್ಧ ಕಿಡಿಕಾರಿದ್ರು. ಇದೀಗ ಇಬ್ಬರ ವೈಮನಸ್ಸು ಶಮನವಾಗಿದೆ.
/newsfirstlive-kannada/media/post_attachments/wp-content/uploads/2025/07/pratham.jpg)
ಭರತ್ ಕಾಲೋನಿಯಲ್ಲಿ ಹಿಂದೂ ಮಹಾಸಭಾ ಸೇವಾ ಸಮಿತಿಯಿಂದ ಆಯೋಜಿತ ದೇಹಧಾರ್ಡ್ಯ ಸ್ಪರ್ಧೆ ನಡೀತು. ಈ ವೇದಿಕೆಯಲ್ಲಿ ನಟ ಪ್ರಥಮ್ ಮತ್ತು ರಕ್ಷಕ್ ಬುಲೆಟ್ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿತ್ತು. ರಕ್ಷಕ್ ಬುಲೆಟ್ ವಿರುದ್ಧದ ಆರೋಪಗಳು, ಪ್ರಥಮ್‌ನ ಜೀವ ಬೆದರಿಕೆ ಆರೋಪಗಳ ಮಧ್ಯೆ ಇಬ್ಬರು ಅಕ್ಕಪಕ್ಕ ಕಾಣಿಸಿಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಕಾರ್ಯಕ್ರಮದ ಬಳಿಕ ಮಾತನಾಡಿದ ಪ್ರಥಮ್ ನಮ್ಮ ನಡುವೆ ಯಾವುದೇ ದ್ವೇಷವಿಲ್ಲ ಅಂತ ಸ್ಪಷ್ಟನೆ ನೀಡಿದ್ರು.
ಇದನ್ನೂ ಓದಿ:ದರ್ಶನ್ ಫ್ಯಾನ್ಸ್ ವಿರುದ್ಧ ಮತ್ತೆ ಸಿಡಿದೆದ್ದ ರಮ್ಯಾ; ಎಲ್ಲದಕ್ಕೂ ಸಾಕ್ಷಿ ಬಿಚ್ಚಿಟ್ಟ ಸ್ಟಾರ್ ನಟಿ.. ಹೇಳಿದ್ದೇನು?
ತಮ್ಮ ಮೇಲೆ ಕೇಳಿಬಂದಿರೋ ಸಾಲು ಸಾಲು ಆರೋಪಗಳ ಬಗ್ಗೆ ಮಾತನಾಡಿದ ರಕ್ಷಕ್ ಬುಲೆಟ್ ಆರೋಪ ಮಾಡೋರಿಗೆ ಯಾವ ದೇವಸ್ಥಾನದ ಕಾರ್ಯಕ್ರಮದಲ್ಲಿ ಘಟನೆ ನಡೆಯಿತೋ ಅಲ್ಲಿಗೇ ಆಣೆ ಪ್ರಮಾಣಕ್ಕೆ ಬನ್ನಿ ಅಂತಾ ಸವಾಲು ಹಾಕಿದ್ರು. 'ಸುಪಾರಿ' ಎಂಬ ಪದ ಹೇಳಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಲೇ ನಾನು ಪ್ರಥಮ್ ಅಣ್ಣ ಚೆನ್ನಾಗಿದ್ದೇವೆ ಎಂಬ ಮಾತನ್ನಾಡಿದ್ರು.
ರಕ್ಷಕ್ ನನ್ನ ಸ್ವೀಟ್ ಬ್ರದರ್. ರಾಜ್ಯ ಸರ್ಕಾರದ ದೊಡ್ಡ ಹುದ್ದೆಯಲ್ಲಿ ಇದ್ದವರು ಫೋನ್ ಮಾಡಿದ್ರು. ಇಂತಹ ಗೂಂಡಾಗಿರಿ ನಡೆಯಬಾರದು ಅಂತಾ ಹೇಳಿದ್ರು. ರಕ್ಷಕ್ ನಾನು ಇಬ್ಬರು ಕ್ಲಿಯರ್ ಮಾಡಿಕೊಳ್ತೀವಿ. ನಮ್ಮ ಇಬ್ಬರ ನಡುವೆ ವೈಯಕ್ತಿಕ ದ್ವೇಷ ಇಲ್ಲ. ಸಿನಿಮಾದಲ್ಲೂ ರಾಜಕೀಯ ರಿಯಲ್ ರಾಜಕೀಯಕ್ಕಿಂತ ದೊಡ್ಡದಾಗಿರುತ್ತೆ. ರಕ್ಷಕ್ ನಾನ್ ಮಾತನಾಡ್ತೀನಿ ಅಂತಾ ಒಂದು ಮಾತು ಹೇಳಿದ್ರೆ ಈ ರೀತಿ ಆಗ್ತಿರಲಿಲ್ಲ. ಅದೆಲ್ಲ ಬಿಟ್ಟು ಕರ್ಪೂರ ಅಂತೆಲ್ಲಾ ಹೇಳಿದ್ದು ಸರಿಯಲ್ಲ. ರಕ್ಷಕ್ ನನ್ನ ಸ್ವೀಟ್ ಬ್ರದರ್ ಎಂದು ಹೇಳಿದ್ದಾರೆ.
-ನಟ ಪ್ರಥಮ್
/newsfirstlive-kannada/media/post_attachments/wp-content/uploads/2025/02/rakshak-bullet.jpg)
ನನಗೆ ಹೊಡೆಸೋದು ರೌಡಿಸಮ್ ಮಾಡೋದು ಗೊತ್ತಿಲ್ಲ. ನಾನು ಕಲಾವಿದರ ಕುಟುಂಬದಿಂದ ಬಂದವನು. ಅಲ್ಲಿ ಗನ್ ತೆಗೆದ್ರೂ, ಡ್ಯಾಗರ್ ತೆಗದ್ರೂ ಅನ್ನೋದು ಸುಳ್ಳು. ಅಲ್ಲಿ ದೊಡ್ಡ ಮಟ್ಟದಲ್ಲಿ ನಡೆಯೋದಿತ್ತು. ಚಿಕ್ಕದ್ರಲ್ಲಿ ನಾವು ತಪ್ಪಿಸಿಕೊಂಡು ಆಚೆ ಬಂದಿದ್ದೇವೆ. ನಾನು ಯಾವುದೇ ರೌಡಿ ಶೀಟರ್ ಕರೆಸಿದೆ ಅನ್ನೋದು ಸುಳ್ಳು. ನಾನು ಪ್ರಥಮಣ್ಣ ಇಬ್ಬರು ಚೆನ್ನಾಗಿದ್ದೀವಿ ಎಂದರು.
- ರಕ್ಷಕ್​ ಬುಲೆಟ್​
ದರ್ಶನ್​ ಫ್ಯಾನ್ಸ್​ ಮತ್ತು ರಮ್ಯಾ ಹಾಗೂ ಪ್ರಥಮ್​ ಮಧ್ಯೆ ಇರೋ ದ್ವೇಷ ಅದ್ಯಾವಾಗ ತಣ್ಣಗಾಗುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ರಕ್ಷಕ್ ಮತ್ತು ಪ್ರಥಮ್ ನಡುವಿನ ದ್ವೇಷ ಕಡಿಮೆ ಆದಂತೆ ಕಾಣ್ತಿದೆ. ಆದ್ರೂ ನಿಜಕ್ಕೂ ದರ್ಶನ್​ ಹೆಸರಲ್ಲಿ ಪ್ರಥಮ್​ಗೆ ಕೊಲೆ ಬೆದರಿಕೆ ಹಾಕಿದ್ರೆ ಅದು ನಿಜಕ್ಕೂ ತಪ್ಪು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us