/newsfirstlive-kannada/media/post_attachments/wp-content/uploads/2024/06/Pratham-1.jpg)
ದರ್ಶನ್​ ಅಭಿಮಾನಿಗಳಿಂದ ಬರುವ ಬೆದರಿಕೆ ಕರೆ ಬಗ್ಗೆ ನಟ ಪ್ರಥಮ್​ ಮಾತನಾಡಿದ್ದಾರೆ. ನ್ಯೂಸ್​ಫಸ್ಟ್​ ಜೊತೆಗೆ ದಾಸನ ಅಭಿಮಾನಿಗಳಿಂದಾಗಿ ಬರುವ ಕೊಲೆ ಬೆದರಿಕೆ ಕರೆ ಹೇಳಿಕೊಂಡಿದ್ದಾರೆ.
‘ಏಯ್​ ನಿನ್​ ತಲೆ ತೆಗಿತೀನಿ ಎಂದು ಎರಡೂವರೆ ರಾತ್ರಿಗೆ ಫೋನ್​ ಮಾಡ್ತಾರೆ. ಮಲಗಿದ್ರು ಪರವಾಗಿಲ್ಲ. ಎದ್ದೇಳಿಸಿ ಅವರಿಗೆ ಫೋನ್​ ಕೊಡಿ. ಆಫೀಸು ನಂಬರ್​ ಎಂದರೆ ಅವೆಲ್ಲ ಗೊತ್ತಿಲ್ಲ ಪ್ರಥಮ್​ ಫೋನ್​ ಕೊಡಿ ಎಂದು ಎರಡೂವರೆ ರಾತ್ರಿಯಲ್ಲಿ ಪೆದ್ದನ ಹಾಗೆ ಫೋನ್​ ಮಾಡ್ತಾನೆ’ ಎಂದು ಪ್ರಥಮ್​ ತನಗೆ ಬಂದ ಬೆದರಿಕೆ ಕರೆ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ:ದರ್ಶನ್ ಪತ್ನಿ ವಿಜಯಲಕ್ಷ್ಮೀ ಠಾಣೆಗೆ ಓಡೋಡಿ ಬಂದ ಕಾರಣ ರಿವೀಲ್..!
ದರ್ಶನ್​ ಅಭಿಮಾನಿಗಳಿಗೆ ನಾನು, ‘ಕಾನೂನು ಕಾನೂನು ರೀತಿಯಲ್ಲಿ ಕೆಲಸ ಮಾಡುತ್ತದೆ. ಪೊಲೀಸರು ಪೊಲೀಸ್​ ರೀತಿಯಲ್ಲಿ ಕೆಲಸ ಮಾಡ್ತಾರೆ. ಲಾಯರ್​ ಕೋರ್ಟಲ್ಲಿ ಅವರು ಕೆಲಸ ಮಾಡ್ತಾರೆ. ಮಾಧ್ಯಮ ಮೈಕ್​ ಹಿಡಿದುಕೊಂಡು ಕೆಲಸ ಮಾಡ್ತಾರೆ. ನೀವು ಆರಾಮವಾಗಿ ಇದ್ದುಕೊಂಡು ಅಪ್ಪ-ಅಮ್ಮನ ನೋಡಿಕೊಂಡು ಚೆನ್ನಾಗಿ ಕೆಲಸ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದೆ’ ಎಂದು ಪ್ರಥಮ್​ ಹೇಳಿದ್ದಾರೆ.
ಅಂದಾಭಿಮಾನಿಗಳಿಗಾಗಿ ನಾನು​, ‘ಹಾಳಾದವು ಅಲ್ಲಿ ಕುಳಿತುಕೊಂಡು ರೋಡ್​ ಬ್ಲಾಕ್​ ಮಾಡ್ತಾವೆ. ನಾಲ್ಕು ತದ್ಕಿ ಕಳ್ಸಿ ಎಂದು ಅಂದಾಭಿಮಾನಿಗಳಿಗೆ ಹೇಳಿದೆ. ಆದರೆ ಇವರಿಗ್ಯಾಕೆ ಕೋಪ ಬರ್ತಾ ಇದೆ ಅಂತ ಅರ್ಥ ಆಗ್ತಾ ಇಲ್ಲ’ ಎಂದು ‘ನಟಭಯಂಕರ’ ಹೀರೋ ಪ್ರಥಮ್​ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us