/newsfirstlive-kannada/media/post_attachments/wp-content/uploads/2024/08/Renukaswamy-Pratham-1.jpg)
ಚಿತ್ರದುರ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ ಅವರ ಮನೆಗೆ ಸ್ಯಾಂಡಲ್‌ವುಡ್ ನಟ ಪ್ರಥಮ್ ಅವರು ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಪತ್ನಿ, ತಂದೆ-ತಾಯಿ ಜೊತೆ ಪ್ರಥಮ್ ಅವರು ಕೆಲ ಕಾಲ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ:ಹಿರಿಯ ನಟಿ ಮೈ ಮೇಲೆ ಬಂದ ದೈವ; ದರ್ಶನ್ಗೋಸ್ಕರ ಪೂಜೆ ಮಾಡಿಸಿದ್ರೆ ತಪ್ಪೇನು? ಏನಿದರ ಅಸಲಿಯತ್ತು?
ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿ ಬಳಿಕ ಪ್ರಥಮ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಕೊಂಡ್ಲಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಬಂದಿದ್ದೆ. ಹಾಗೆಯೇ ರೇಣುಕಾಸ್ವಾಮಿಯವರ ಮನೆಗೆ ಭೇಟಿ ನೀಡಿದ್ದೇನೆ.
ಇದನ್ನೂ ಓದಿ: ದರ್ಶನ್ ಗ್ಯಾಂಗ್‌ನಿಂದ ಕೊಲೆ ಕೇಸ್ಗೆ ಟ್ವಿಸ್ಟ್; ಆರೋಪಿಗಳ ಫೋನ್ನಲ್ಲಿ ಸ್ಫೋಟಕ ಮಾಹಿತಿ ಬಯಲು
ಇಲ್ಲಿ ಬಂದು ಯಾರನ್ನೋ ಸಮರ್ಥನೆ ಮಾಡಿಕೊಂಡು ಮನಸು ನೋಯಿಸಲು ಬಂದಿಲ್ಲ. ಹೀನಾಯವಾಗಿ ರೇಣುಕಾಸ್ವಾಮಿ ಅವರ ಸಾವಾಗಿತ್ತು. ಹೀಗಾಗಿ ಸಹನಾ ಅವರನ್ನು ನಾನು ಮಾತನಾಡಿಸಬೇಕಿತ್ತು. ಈ ಕುಟುಂಬಕ್ಕಾದ ನೋವು ನನಗೆ ತುಂಬಾ ಕಾಡುತ್ತಿತ್ತು. ಇವರನ್ನು ಕಂಡು ನನ್ನ ಕೈಲಾದ ಸಹಾಯ ಮಾಡಬೇಕೆಂದಿತ್ತು. ಯಾರನ್ನೂ ನೋಯಿಸುವ ಹೇಳಿಕೆ ಕೊಡೋಕೆ ನಾನು ಬಂದಿಲ್ಲ ಎಂದು ಪ್ರಥಮ್ ಹೇಳಿದರು.
ಜನ ಯಾರ ಪರ ಅಥವಾ ವಿರೋಧವಾಗಿ ಬೇಕಾದ್ರೂ ಮಾತನಾಡಲಿ ಅದನ್ನು ನಾನು ಜನರ ವಿವೇಚನೆಗೆ ಬಿಡುತ್ತೇನೆ. ಆದರೆ ರೇಣುಕಾಸ್ವಾಮಿ ಕುಟುಂಬಕ್ಕೆ ನೋವಾಗುತ್ತೆ ಅನ್ನೋದನ್ನ ತಿಳಿದು ಮಾತನಾಡಿ. ಕೆಲವರು ತುಂಬಾ ಅತಿರೇಕದಲ್ಲಿ ಮಾತನಾಡ್ತಾರೆ. ನಾನು ಒಂದು ಹೇಳಿಕೆ ಕೊಟ್ಟಾಗ ಅದನ್ನು ತಿರುಚಿ ಹೇಳಲಾಗಿತ್ತು. ಅದಕ್ಕೆ ನನ್ನ ಮನೆಯ ಮುಂದೆ ಸೆಕ್ಷನ್ 144 ಹಾಕಲಾಯಿತು. ಅದರಿಂದ ಆಫೀಸ್‌ಗೆ ಹೋಗೋಕು ತೊಂದರೆಯಾಗಿತ್ತು.
ಈ ಕುಟುಂಬ ಮಗನನ್ನು ಕಳೆದುಕೊಂಡಿದೆ. ಸಹನಾ ಅವರು ಗಂಡನನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ. ನಾನು ಇಲ್ಲಿ ಬಂದು ಕಾಟಾಚಾರಕ್ಕೆ ವಿಷಾದ ನುಡಿ ಹೇಳಲ್ಲ. ಇವರಿಗೆ ಆಗಿರುವುದು ಅಕ್ಷಮ್ಯ, ಅದು ಆಗಬಾರದಿತ್ತು. ರೇಣುಕಾಸ್ವಾಮಿ ಬಗ್ಗೆ ಬೈಯ್ಯುವವರು ಇವರ ಬಗ್ಗೆ ಒಂದು ಸಾರಿ ಯೋಚಿಸಬೇಕು. ಕಾಮೆಂಟ್ ಹಾಕೋರು ನಿಮ್ಮ ಕುಟುಂಬದಲ್ಲೇ ಹೀಗಾಗಿದ್ರೆ ಅಂತಾ ಯೋಚಿಸಿ ಹಾಕೋದು ಒಳ್ಳೆಯದು. ನೊಂದಿರುವ ಕುಟುಂಬವನ್ನು ಯಾರೂ ನೋಯಿಸುವ ಪ್ರಯತ್ನ ಮಾಡಬೇಡಿ. ನಾನು ಆ ಕುಟುಂಬಕ್ಕೆ ಏನು ಸಹಾಯ ಮಾಡ್ಬೇಕೋ ಮಾಡ್ತೀನಿ. ಇತ್ತೀಚೆಗೆ ಸಹಾಯ ಮಾಡೋದು ಅಂದ್ರೆ ತೋರ್ಪಡಿಕೆಗೆ ಅನ್ನೋ ದಾರುಣ ಸ್ಥಿತಿಗೆ ಹೋಗಿದ್ದೇವೆ. ರೇಣುಕಾಸ್ವಾಮಿ ತಂದೆಗೆ ಮೊದಲಿಗಿಂತ ಜಾಸ್ತಿ ಜವಾಬ್ದಾರಿ ಇದೆ. ಆ ಮಗು ಬೆಳವಣಿಗೆ ಆಗೋವರೆಗೆ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತೆ ಎಂದು ಪ್ರಥಮ್ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್‌ಗಾಗಿ ಹೋಮ.. ಕಲಾವಿದರ ಸಂಘದ ಪೂಜೆಯಲ್ಲಿ ಭಾಗಿಯಾದ ನಟ ಜಗ್ಗೇಶ್ ಬೇಸರ; ಏನಂದ್ರು?
ದರ್ಶನ್ ಬಗ್ಗೆ ಪ್ರಥಮ್ ಹೇಳಿದ್ದೇನು?
ಜೈಲಿನಲ್ಲಿರುವ ದರ್ಶನ್ ಬಿಡುಗಡೆಯಾಗಲಿ ಅಂತಾ ಕಲಾವಿದರ ಸಂಘದಲ್ಲಿ ಪೂಜೆ ಮಾಡಿದ ವಿಚಾರದ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ನನಗೆ ಅದಕ್ಕೆ ಸಮಯ ಇಲ್ಲ, ನಾನು ಬೆಳಗ್ಗೆ ಈಶ್ವರನ ಪೂಜೆ ಮಾಡ್ತೀನಿ. ಮನೆದೇವ್ರು ಕಬ್ಬಾಳಮ್ಮಗೆ ನಮಸ್ಕಾರ ಮಾಡ್ತೀನಿ. ಪೂಜೆ ಜೊತೆ ನಾನು ಉರುಳು ಸೇವೆ ಬೇಕಾದ್ರೂ ಮಾಡ್ತೀನಿ. ಆದ್ರೆ ಇವರ ಕುಟುಂಬಕ್ಕೆ ಆದ ನೋವನ್ನು ತುಂಬಿಕೊಡೋಕೆ ಸಾಧ್ಯವಾ? ರೇಣುಕಾಸ್ವಾಮಿ ಪತ್ನಿ ಸಹನಾಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯವಾ?
ಕನ್ನಡ ಕಲಾವಿದರ ಸಂಘದಲ್ಲಿ ದರ್ಶನ್ ಬಿಡುಗಡೆಗೆ ಪೂಜೆ ಮಾಡಿಲ್ಲ. ಚಿತ್ರರಂಗದ ಒಳಿತಿಗೆ ಮಾಡಿದ ಪೂಜೆ ಅಂತಾ ನನಗೆ ಗೊತ್ತಾಯ್ತು . ಜಗ್ಗೇಶ್ ಸರ್ ಈ ಬಗ್ಗೆ ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ವರ್ಷದಿಂದ ಸಕ್ಸಸ್ ಇಲ್ಲ. ಆ ಕಾರಣಕ್ಕೆ ಮಾಡಿದ ಪೂಜೆ ಅಂತಾ ಗೊತ್ತಾಗಿತ್ತು. ಯಾವುದೇ ವ್ಯಕ್ತಿಗಿಂತ ನಮಗೆ ಚಿತ್ರರಂಗ ದೊಡ್ಡದು. ರಾಜಕುಮಾರ್, ವಿಷ್ಟು ಸರ್ ರಂಥ ಕಲಾವಿದರು ಚಿತ್ರರಂಗದಲ್ಲಿದ್ರು. ಹಲವು ಕಲಾವಿದರು ಅಲ್ಲಿ ಊಟ ಮಾಡಿ, ಭವಿಷ್ಯ ಕಟ್ಟಿಕೊಂಡಿದ್ದಾರೆ. ಹಾಗಾಗಿ ಚಿತ್ರರಂಗದ ಭವಿಷ್ಯಕ್ಕಾಗಿ ಪೂಜೆ ಮಾಡಿದಾರೆ ಅಂದುಕೊಳ್ಳೋಣ. ಕಲಾವಿದರ ಸಂಘ ನನ್ನ ಮನೆಯಿಂದ 4 ಕಿ.ಮೀ ದೂರದಲ್ಲೇ ಇದೆ. ನಾನು ಆ ಪೂಜೆಗೆ ಹೋಗಕ್ಕಾಗಲಿಲ್ಲ. ಆದ್ರೆ 350 ಕಿಮಿ ದೂರದಲ್ಲಿರುವ ಇವರನ್ನು ಕಾಣಲು ಮನಸ್ಸು ಬಯಸುತ್ತಿತ್ತು.
ಸಹನಾಗೆ ಸರ್ಕಾರಿ ಕೆಲಸ ಕೊಡಬೇಕು!
ಚಿತ್ರರಂಗದ ಒಳಿತಿಗೆ ಪೂಜೆ ಮಾಡೋದಾದ್ರೆ ನನ್ನ ಮನೆಯಲ್ಲಿ ಮಾಡ್ತೀನಿ. ನನಗೆ ಕಷ್ಟದ ನೋವು, ಈ ಕುಟುಂಬದ ನೋವು ಎರಡೂ ಗೊತ್ತು. ನಾನು ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತುಕೊಳ್ತೀನಿ. ನಾನು ವಿಚಾರ ತಿರುಚಿ ರಾಂಗ್ ಮೆಸೇಜ್ ಕೊಡಲ್ಲ. ಸಾಧ್ಯವಾದ್ರೆ ಸಹನಾ ಕುಟುಂಬಕ್ಕೆ ಒಳ್ಳೆಯದನ್ನು ಮಾಡಿ. ಸಹನಾಗೆ ಸರ್ಕಾರಿ ನೌಕರಿ ಕೊಡೋಕೆ ಮೀನಾಮೇಷ ಎಣಿಸುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಿದ್ರೆ ಇದು ದೊಡ್ಡ ವಿಚಾರ ಅಲ್ಲ. ನಾನು ಇಲ್ಲಿ ಯಾರ ಪರವಾಗಿ ಮಾತನಾಡಲು ಬಂದಿಲ್ಲ. ಯಾರ ಪರವಾಗಿ ನಿರ್ಧಾರ ತಿಳಿಸಲು ನಾನು ಜಡ್ಜ್ ಅಲ್ಲ. ನನ್ನ ಒಂದು ಹೇಳಿಕೆ ತಿರುಚಿದ್ದಕ್ಕೆ ಕೆಲವರು ನನ್ನ ಕೈ ಮುರಿತೀನಿ ಅಂದ್ರು. ನನಗೆ 20 ದಿನ ನೋವು ಕೊಟ್ರು. ರೇಣುಕಾಸ್ವಾಮಿ ಕುಟುಂಬಕ್ಕೆ ಶಾಶ್ವತ ನೋವು ಕೊಟ್ರು. ಒಂದು ಸಲ ಇವರ ಕುಟುಂಬದ ಸ್ಥಾನದಲ್ಲಿ ನಿಂತು ನೋಡಿ ಎಂದು ಪ್ರಥಮ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ