/newsfirstlive-kannada/media/post_attachments/wp-content/uploads/2025/07/pratham.jpg)
ಬೆಂಗಳೂರು: ನಮ್ಮ ಬಾಸ್ ದೇವರು, ಬಾಸ್ ಬಿಟ್ರೆ ಯಾರು ಇಲ್ಲ ಎಂದು ನನ್ನ ಹೊಟ್ಟೆಗೆ ಚುಚ್ಚೋದಕ್ಕೆ ಬಂದರು ಎಂದು ನಟ ಪ್ರಥಮ್ ಗಂಭೀರವಾಗಿ ಆರೋಪ ಮಾಡಿದ್ದಾರೆ. ಅಲ್ಲದೇ ತನಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದ ನಟ ಪ್ರಥಮ್, ದರ್ಶನ್ ಅಭಿಮಾನಿಗಳ ವಿರುದ್ಧ ಕೋಪಗೊಂಡಿದ್ದಾರೆ. ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಪ್ರಥಮ್, ದರ್ಶನ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಕ್ ಕೊಟ್ಟಿದ್ದಾರೆ.
ಇದನ್ನೂ ಓದಿ:ತಪ್ಪಿದ ಭಾರೀ ಅನಾಹುತ.. 173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ -ಮುಂದೆ ಏನಾಯ್ತು..?
ನನ್ನ ಪ್ರಾಣ ಹೋಗುವ ಮಟ್ಟಿಗೆ ಬಂದಿದ್ದರು. ರಕ್ಷಕ್ ರೌಡಿಗಳ ಜೊತೆಗೆ ಇದ್ದರು. ನನ್ನ ರೌಡಿಗಳು ಸುತ್ತವರೆದು, ಡ್ರ್ಯಾಗರ್ ತೋರಿಸಿ ಹೆದರಿಸಿದ್ರು. ಬಾಸ್ ಬಗ್ಗೆ ನೀನೇನೋ ಮಾತಾಡೋದು, ಬೆದರಿಕೆ ಒಡ್ಡಿದವರಲ್ಲಿ ಯಶಸ್ವಿನಿಯೂ ಇದ್ದರು. ಮಕ್ಕಳು ಮಾಡೋ ತಪ್ಪಿಗೆ ದೊಡ್ಡವರಿಗೆ ಉಗಿಯಲ್ವಾ? ಫ್ಯಾನ್ ಪೇಜ್ಗಳಿಗೆ ದರ್ಶನ್ ತಿಳಿಹೇಳಬೇಕು. ದರ್ಶನ್ ನಮ್ಮ ಆಸ್ತಿ.. ಆಸ್ತಿ ನಮ್ಮ ಜೊತೆಗೆ ಕುಸ್ತಿ ಆಡಬಾರದು. ದರ್ಶನ್ ಫ್ಯಾನ್ಸ್ಗೆ ಸಾಕ್ಷರತೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ